Wednesday, September 17, 2025
HomeUncategorizedಬೈಕ್​ ರೇಸಿಂಗ್​ ಸ್ಪರ್ಧೆಯಲ್ಲಿ ಬೆಂಗಳೂರು ಮೂಲದ 11 ವರ್ಷದ ಹುಡುಗ ಸಾಧನೆ

ಬೈಕ್​ ರೇಸಿಂಗ್​ ಸ್ಪರ್ಧೆಯಲ್ಲಿ ಬೆಂಗಳೂರು ಮೂಲದ 11 ವರ್ಷದ ಹುಡುಗ ಸಾಧನೆ

ಬೆಂಗಳೂರಿನ 11 ವರ್ಷದ ಯುವ ರೇಸರ್ ಶ್ರೇಯಸ್ ಹರೀಶ್ ಕೊಯಮತ್ತೂರಿನಲ್ಲಿ ನಡೆದ MRF MMSC FMSCI ಇಂಡಿಯನ್ ನ್ಯಾಷನಲ್ ಮೋಟಾರ್‌ಸೈಕಲ್ ರೇಸಿಂಗ್ ಚಾಂಪಿಯನ್‌ಶಿಪ್ 2022 ರಲ್ಲಿ ಎರಡನೇ ಸ್ಥಾನವನ್ನು ಗಳಿಸಿದ್ದಾರೆ.

ಶ್ರೇಯಸ್ ಒಂಬತ್ತನೇ ವಯಸ್ಸಿನಲ್ಲಿ ಬೈಕಿಂಗ್ ಪ್ರಾರಂಭಿಸಿದರು, ತಮ್ಮ ರೇಸಿಂಗ್ ಸೂಟ್‌ನಲ್ಲಿ 39 ನೇ ಸಂಖ್ಯೆಯನ್ನು ಹೊಂದಿದ್ದರು ಮತ್ತು ‘ದಿ ಬೆಂಗಳೂರು ಕಿಡ್’ ಎಂದು ಜನಪ್ರಿಯರಾಗಿದ್ದಾರೆ . ತನ್ನ ಕನಸನ್ನು ನನಸಾಗಿಸಲು ತನ್ನ ತಂದೆ ಹರೀಶ್ ಪರಂಧಮನ್ ಅವರೆ ಕಾರಣ ಎಂದು ಹೇಳುತ್ತಾರೆ ಶ್ರೇಯಸ್ .

ಹಾಸನದ ಆದಿಚುಂಚನಗಿರಿ ಮಠದಲ್ಲಿ ನಡೆದ ತಮ್ಮ ಮೊದಲ ಓಟದಲ್ಲಿ ಶ್ರೇಯಸ್ ಮೊದಲ ಸ್ಥಾನಗಳಿಸಿದ್ದರು. ಶ್ರೇಯಸ್ MotoGP ನಲ್ಲಿ ಗೆಲ್ಲುವ ಗುರಿ ಹೊಂದಿದ್ದಾರೆ ಮತ್ತು ಸ್ಪೇನ್‌ನ ಮಾರ್ಕ್ ಮಾರ್ಕ್ವೆಜ್ ಅವರ ಸ್ಫೂರ್ತಿ.

ಒಂದು ದಿನ ಮೋಟೋಜಿಪಿಯಲ್ಲಿ ಭಾರತದ ರಾಷ್ಟ್ರಗೀತೆಯನ್ನು ನಾನು ಮೊದಲು ನುಡಿಸುವ ವಿಜೇತನಾಗಬೇಕೆಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಶ್ರೇಯಸ್.

RELATED ARTICLES
- Advertisment -
Google search engine

Most Popular

Recent Comments