Saturday, August 23, 2025
Google search engine
HomeUncategorizedಪ್ರಧಾನಿ ಮೋದಿ,​ದೋವಲ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ: 'ಆಪರೇಷನ್​ ಟಿಕ್ಕಾ' ಕಾರ್ಯಚರಣೆ ಆರಂಭ

ಪ್ರಧಾನಿ ಮೋದಿ,​ದೋವಲ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ: ‘ಆಪರೇಷನ್​ ಟಿಕ್ಕಾ’ ಕಾರ್ಯಚರಣೆ ಆರಂಭ

ದೆಹಲಿ: ಸೌದಿ ಅರೇಬಿಯಾ ಪ್ರವಾಸವನ್ನು ಅರ್ಧದಲ್ಲೇ ಕಡಿತಗೊಳಿಸಿರುವ ಪ್ರಧಾನಿ ಮೋದಿ ಭಾರತಕ್ಕೆ ವಾಪಾಸಾಗಿದ್ದು. ಇಂದು ಮುಂಜಾನೆ ದೆಹಲಿಯ ಪಾಲಂ ಏರ್​ಬೇಸ್​ಗೆ ಬಂದಿಳಿದ್ದಿದ್ದಾರೆ. ಏರ್​ಪೋರ್ಟ್​ಗೆ ಬಂದಿಳಿದ ತಕ್ಷಣವೇ ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ದೆಹಲಿಯ ಪಾಲಂ ಏರ್​ಬೇಸ್​ಗೆ ಬಂದಿಳಿದ ಮೋದಿ ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಇತರ ಅಧಿಕಾರಿಗಳೊಂದಿಗೆ ಸಂಕ್ಷಿಪ್ತ ಸಭೆ ನಡೆಸಿದರು.

ಇದನ್ನೂ ಓದಿ :ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ 2 ತಂಡ ರಚಿಸಿದ ಕರ್ನಾಟಕ ಸರ್ಕಾರ

ಆಪರೇಷನ್​ ಟಿಕ್ಕಾ..!

ಉಗ್ರರ ವಿರುದ್ದ ಭಾರತ ಇದೀಗ ಕಾರ್ಯಚರಣೆಗೆ ಇಳಿದಿದ್ದು. ‘ಆಪರೇಷನ್​ ಟಿಕ್ಕಾ’ ಹೆಸರಿನಲ್ಲಿ ಉಗ್ರರ ವಿರುದ್ದ ಕಾರ್ಯಚರಣೆ ಆರಂಭವಾಗಿದೆ. ಉಗ್ರರ ಹೆಡೆಮುರಿ ಕಟ್ಟಲು ಭಾರತೀಯ ಸೇನೆ ಸಿದ್ದವಾಗಿದ್ದು. ಒಳನುಸುಳಲು ಯತ್ನಿಸಿದ ಉಗ್ರರಿಬ್ಬರನ್ನು ಹೊಡೆದುರಿಳಿಸಲಾಗಿದೆ. ಈ ಕುರಿತು ಭದ್ರತ ಪಡೆ ಮಾಹಿತಿ ನೀಡಿದ್ದು. ಉಗ್ರರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments