Monday, August 25, 2025
Google search engine
HomeUncategorizedಡಾಲಿ ಉತ್ಸವ : ‘ಅಭಿಮಾನದ ತೇರು’ ಎಳೆಯೋಕೆ 22 ದಿನ ಬಾಕಿ

ಡಾಲಿ ಉತ್ಸವ : ‘ಅಭಿಮಾನದ ತೇರು’ ಎಳೆಯೋಕೆ 22 ದಿನ ಬಾಕಿ

ಬೆಂಗಳೂರು : ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ದಶಕ ಕಳೆದ ಸಂಭ್ರಮದಲ್ಲಿರೋ ನಟ ಡಾಲಿ ಧನಂಜಯ, ಮತ್ತೊಂದು ಸಂಭ್ರಮಕ್ಕೆ ಸಾಕ್ಷಿ ಆಗ್ತಿದ್ದಾರೆ. ಕೋವಿಡ್-19 ಬಳಿಕ ಇದೇ ಮೊದಲ ಬಾರಿ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲು ಪ್ಲ್ಯಾನ್ ಮಾಡುತ್ತಿದ್ದಾರೆ.

ಹೌದು, ನಟ ಧನಂಜಯ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ನಟನಾಗಿ, ನಿರ್ಮಾಪಕನಾಗಿ ಖ್ಯಾತಿಗಳಿಸಿರುವ ಧನಂಜಯ್, ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿದ್ದಾರೆ. ಈ ಬಾರಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ತನ್ನ ಬರ್ತಡೇ ದಿನ ಅಭಿಮಾನಿಗಳ ಜೊತೆ ಸಮಯ ಕಳೆಯಲು ನಿರ್ಧರಿಸಿದ್ದಾರೆ.

ಇದೇ ಆಗಸ್ಟ್ 23ರಂದು ಧನಂಜಯ್ ಹುಟ್ಟುಹಬ್ಬ. ಈಗಾಗಲೇ ಅಭಿಮಾನಿಗಳ ಸಂಭ್ರಮ ಶುರುವಾಗಿದೆ. ಡಾಲಿ ಉತ್ಸವಕ್ಕೆ ಅಭಿಮಾನಿಗಳು ಸಜ್ಜಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ಗಳನ್ನು ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಈ ಬಾರಿಯ ಹುಟ್ಟುಹಬ್ಬವನ್ನು ಅಭಿಮಾನಿಗಳು ಡಾಲಿ ಉತ್ಸವ ಹೆಸರಿನಲ್ಲಿ ಆಚರಿಸಲು ಮಾಡುತ್ತಿದ್ದಾರೆ.

ಹುಟ್ಟುಹಬ್ಬಕ್ಕೆ 22 ದಿನ ಬಾಕಿ

ಡಾಲಿ ಉತ್ಸವ ಎಂದು ಹೆಸರಿಟ್ಟು ‘ಅಭಿಮಾನದ ತೇರು ಎಳೆಯೋಣ ಬನ್ನಿ’ ಅಂತ ಟ್ಯಾಗ್​ಲೈನ್ ಇಡಲಾಗಿದೆ. ಕೇವಲ 22 ದಿನಗಳು ಬಾಕಿ ಉಳಿದಿದ್ದು, ಈ ಬಾರಿಯ ಧನಂಜಯ್ ಹುಟ್ಟುಹಬ್ಬ ತುಂಬಾನೇ ವಿಶೇಷ. 4 ವರ್ಷಗಳ ಬಳಿಕ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಹಾಗೂ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷ. ಹಾಗಾಗಿ ಈ ಬಾರಿಯ ಹುಟ್ಟುಹಬ್ಬ ಅವರ ಪಾಲಿಗೆ ಡಬಲ್ ಧಮಾಕವೇ ಸರಿ.

ಜೆ.ಪಿ ಗ್ರೌಂಡ್​ನಲ್ಲಿ ಸೆಲೆಬ್ರೇಷನ್

ಅಂದಹಾಗೆ ಜೆ.ಪಿ. ನಗರದ ಗ್ರೌಂಡ್‌ನಲ್ಲಿ ಸೆಲೆಬ್ರೇಷನ್​ಗೆ ಸ್ಥಳ ನಿಗದಿ ಪಡಿಸಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಬರಲಿದ್ದಾರೆ. ಆಗಸ್ಟ್ 22ರ ರಾತ್ರಿಯಿಂದಲೇ ಸೆಲೆಬ್ರೇಷನ್ ಶುರುವಾಗಲಿದೆ. ದೂರದ ಊರುಗಳಿಂದ ಅಭಿಮಾನಿಗಳು ಬರುವ ಕಾರಣದಿಂದ, ಎಲ್ಲರಿಗೂ ಊಟದ ವ್ಯವಸ್ಥೆ ಕೂಡ ಇರಲಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments