Thursday, August 28, 2025
HomeUncategorizedPahalgam Attack: ಕಲ್ಮಾ ಹೇಳಿ ಜೀವ ಉಳಿಸಿಕೊಂಡ ಅಸ್ಸಾಂ ವಿಶ್ವವಿದ್ಯಾಲಯದ ಪ್ರೊಫೆಸರ್​

Pahalgam Attack: ಕಲ್ಮಾ ಹೇಳಿ ಜೀವ ಉಳಿಸಿಕೊಂಡ ಅಸ್ಸಾಂ ವಿಶ್ವವಿದ್ಯಾಲಯದ ಪ್ರೊಫೆಸರ್​

ಶ್ರೀನಗರ: ಜಮ್ಮು ಕಾಶ್ಮೀರದ ಪಹಲ್ಗಮ್​​ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಅಸ್ಸಾಂ ವಿಶ್ವವಿದ್ಯಾಲಯದ ಅಸೋಸಿಯೆಟ್​ ಪ್ರೊಫೆಸರ್​ ಒಬ್ಬರು ಕಲೀಮಾ ಹೇಳುವ ರೀತಿ ನಟಿಸುವ ಮೂಲಕ ಜೀವ ಉಳಿಸಿಕೊಂಡು ಬಂದಿದ್ದು. ಜೀವ ಉಳಿಸಿಕೊಂಡು ಬಂದ ವ್ಯಕ್ತಿಯನ್ನು ದೇಬಶೀಶ್​ ಭಟ್ಟಾಚಾರ್ಯ ಎಂದು ಗುರುತಿಸಲಾಗಿದೆ.

ಘಟನೆ ಕುರಿತು ದೇಬಶೀಶ್​ ಭಟ್ಟಾಚಾರ್ಯ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದು. ‘ನಾನು ನನ್ನ ಕುಟುಂಬದೊಂದಿಗೆ ಮರದ ಕೆಳಗೆ ಮಲಗಿದ್ದಾಗ ಇದ್ದಕ್ಕಿದ್ದಂತೆ ನನ್ನ ಸುತ್ತಲೂ ಇದ್ದ ಕೆಲವರು ಏನೋ ಪಠಿಸುತ್ತಿದ್ದರು. ಜನರು ಏನೋ ಪಠಿಸುವುದನ್ನು ನೋಡಿ ನಾನು ಪಠಿಸಲು ಆರಂಭಿಸಿದೆ. ಈ ವೇಳೆ ನಮ್ಮ ಕಡೆಗೆ ನಡೆದುಕೊಂಡು ಬಂದ ಉಗ್ರ ನನ್ನ ಪಕ್ಕದಲ್ಲಿ ಮಲಗಿದ್ದ ವ್ಯಕ್ತಿಯ ತಲೆಗೆ ಗುಂಡು ಹಾರಿಸಿದ.ಗುಂಡು ಹಾರಿಸಿದ ಬಳಿಕ ಆ ಉಗ್ರ ನನ್ನನ್ನು ನೋಡಿ, ‘ಕ್ಯಾ ಕರ್ ರಹೇ ಹೋ?’ ಎಂದು ಕೇಳಿದ. ಇದನ್ನೂ ಓದಿ :ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಮಾಜಿ ಎಂಎಲ್​ಸಿಯ ಸಂಬಂಧಿಯಿಂದ ಫೈರಿಂಗ್

ಆಗ ನಾನು ಕಲಿಮಾವನ್ನು ಇನ್ನೂ ಜೋರಾಗಿ ಪಠಿಸಿದೆ. ಏನೋ ಕಾರಣಕ್ಕೆ ನನ್ನನ್ನು ನೋಡಿ ಆತ ದೂರ ಹೋದ. ಉಗ್ರ ಬೇರೆ ಕಡೆ ಹೋಗುತ್ತಿದ್ದಂತೆ ನಾನು ಪತ್ನಿ ಮತ್ತು ಮಗನೊಂದಿಗೆ ಆ ಸ್ಥಳದಿಂದ ಓಡಿ ಹೋದೆವು. ಬೆಟ್ಟ ಹತ್ತಿದೆವು, ಬೇಲಿಯನ್ನು ದಾಟಿದೆವು ಮತ್ತು ದಾರಿಯಲ್ಲಿ ಕುದುರೆಗಳ ಗೊರಸಿನ ಗುರುತುಗಳನ್ನು ಅನುಸರಿಸಿ ಸುಮಾರು ಎರಡು ಗಂಟೆಗಳ ಕಾಲ ನಡೆಯುತ್ತಲೇ ಇದ್ದೆವು. ಕೊನೆಗೆ ನಾವು ಕುದುರೆಯೊಂದಿಗೆ ಸವಾರನನ್ನು ನೋಡಿದೆವು. ಆತನ ಸಹಕಾರದಿಂದ ಕೊನೆಗೆ ಹೋಟೆಲ್‌ಗೆ ಮರಳುವಲ್ಲಿ ಯಶಸ್ವಿಯಾದೆವು ಎಂದು ಹೇಳಿದರು.

ಇದನ್ನೂ ಓದಿ :ಇಂದು ಸುಮ್ಮನೆ ಕುಳಿತುಕೊಳ್ಳುವ ಸಮಯವಲ್ಲ, ತಕ್ಕ ಉತ್ತರ ಕೊಡುವ ಸಮಯ: ನಟ ಸುದೀಪ್​

ಇನ್ನೂ ಕಲೀಮಾ ಎಂದರೆ ಇಸ್ಲಾಮಿಕ್​ ಘೋಷಣೆಯಾಗಿದ್ದು. ಇದನ್ನು ಪ್ರಾಮಾಣಿಕವಾಗಿ ಪಠಿಸುವವರು ಮುಸ್ಲಿಂ ಅನುಯಾಯಿಗಳಾಗುತ್ತಾರೆ ಎಂಬ ನಂಬಿಕೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments