Saturday, August 23, 2025
Google search engine
HomeUncategorizedನನಗೂ ಡಿಕೆಶಿಗೂ ವೈಯಕ್ತಿಕವಾಗಿ ಏನು ಇಲ್ಲಾ, ಪೂರ್ಣಾವದಿ ಸಿಎಂ ವಿಚಾರದಲ್ಲಿ ನಾನು ಹಠ ಮಾಡಲ್ಲ: ರಾಜಣ್ಣ

ನನಗೂ ಡಿಕೆಶಿಗೂ ವೈಯಕ್ತಿಕವಾಗಿ ಏನು ಇಲ್ಲಾ, ಪೂರ್ಣಾವದಿ ಸಿಎಂ ವಿಚಾರದಲ್ಲಿ ನಾನು ಹಠ ಮಾಡಲ್ಲ: ರಾಜಣ್ಣ

ಬೆಂಗಳೂರು: ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವ ಕೆ.ಎನ್​ ರಾಜಣ್ಣ ‘ನನಗೂ ಡಿಕೆಶಿಗೂ ವೈಯಕ್ತಿಕವಾಗಿ ಏನೂ ಇಲ್ಲ, ನಾನೂ ಪೂರ್ಣಾವದಿ ಸಿಎಂ ವಿಚಾರದಲ್ಲಿ ಹಠ ಮಾಡಲ್ಲ ಎಂದು ಹೇಳಿದರು.

ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳೋದು ಬೇಡ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟ ನೀಡಿದ ರಾಜಣ್ಣ ‘ನಾವು ಯಾರ ಹೆಸರನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಅದೇ ರೀತಿ ಅವರು ಎಐಸಿಸಿ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುವುದು ಬೇಡ. ಎಲ್ಲದಕ್ಕೂ ಎಐಸಿಸಿ ಹೇಳಿದೆ ಅಂತ ಎಐಸಿಸಿ ಹೆಸರನ್ನ ಅವರು ದುರ್ಬಳಕೆ ಮಾಡಿಕೊಳ್ಳಬಾರದು. ಅವರು ಎಐಸಿಸಿ ಹೆಸರನ್ನು ದುರ್ಬಳಕೆ ಮಾಡುತ್ತಿರುವುದು ವಾಸ್ತವ, ನಾನು ಯಾರಿದ್ದಲು ಶಿಸ್ತಿನ ಪಾಠ ಕಲಿಬೇಕಿಲ್ಲ. ಕಳೆದ 50 ವರ್ಷದಿಂದ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷಕ್ಕೆ ದುಷ್ಪರಿಣಾಮ ಬೀರುವ ಯಾವುದೇ ಮಾತನ್ನು ನಾನು ಮಾಡಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ಕೆಲಸದಿಂದ ತೆಗೆದು ಹಾಕಿದಕ್ಕೆ ಕಾರ್ಖಾನೆಯ ಚಿಮಣಿ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದ ಕಾರ್ಮಿಕ

ಪೂರ್ಣಾವದಿ ಸಿಎಂ ವಿಚಾರದಲ್ಲಿ ನಾನೇನು ಹಠಕ್ಕೆ ಬಿದ್ದಿಲ್ಲ !

ಪೂರ್ಣವದಿ ಸಿಎಂ ವಿಚಾರದಲ್ಲಿ ನಾನೇನು ಹಠಕ್ಕೆ ಬಿದ್ದಿಲ್ಲ ಎಂದ ರಾಜಣ್ಣ ‘ ಸಿಎಂ ಬದಲಾವಣೆಯ ಅಂತಿಮ ನಿರ್ಧಾರ ಹೈಕಮಾಂಡ್​ ಮಾಡುತ್ತೆ. ಹೈಕಮಾಂಡ್ ಹೇಳಿದಂತೆ ಲೋಕಸಭೆ ಚುನಾವಣೆವರೆಗೆ ಅಧ್ಯಕ್ಷ ಇರ್ತಾರೆ ಅನ್ನೋ ಕಾರಣಕ್ಕೆ ಅಧ್ಯಕ್ಷ ಬದಲಾವಣೆಗೆ ಕೇಳಿದ್ದೇವೆ. ಉಪ ಮುಖ್ಯಮಂತ್ರಿ ಸ್ಥಾನ ಹೆಚ್ಚುವರಿಯಾಗಿ ಕೊಟ್ಟಿದ್ದರೆ ಲೋಕಸಭೆ ಚುನಾವಣೆಯಲ್ಲಿ ಸಹಾಯ ಆಗುತ್ತಿತ್ತು, ಆದರೆ ಈಗ ಕೇಳಲ್ಲ ಡಿಸಿಎಂ ಸ್ಥಾನ ಅಂದರೆ ತಲೆ ಮೇಲೆ ಹೆಚ್ಚುವರಿ ಕಿರೀಟ ಇರಲ್ಲ ಎಂದು ಡಿಕೆಶಿಗೆ ಟಾಂಗ್​ ನೀಡಿದರು.

ನನಗೂ ಡಿಕೆಶಿಗೂ ವೈಯಕ್ತಿಕವಾಗಿ ಏನು ಇಲ್ಲಾ !

ಡಿಕೆಶಿ ಮತ್ತು ರಾಜಣ್ಣನವರ ನಡುವೆ ಕಳೆದ ಕೆಲ ದಿನಗಳಿಂದ ವಾಗ್ವಾದ ನಡೆಯುತ್ತಿದ್ದು. ಈ ವಿಚಾರದ ಕುರಿತು ಮಾತನಾಡಿದ ರಾಜಣ್ಣ ‘ನನಗೂ ಡಿ.ಕೆ.ಶಿವಕುಮಾರ್ ಗೂ ವೈಯುಕ್ತಿಕವಾಗಿ ಏನೂ ಇಲ್ಲಾ.. ವಿಚಾರ ಬೇಧ ಇರಬಹುದು ಅಷ್ಟೆ. ವಿಧಾನಸೌಧಕ್ಕೆ ನಾನು ಒಂದು ರಸ್ತೆಯಲ್ಲಿ ಹೋಗೋಣ ಅಂದರೆ ಅವರು ಒಂದು ರಸ್ತೆಯಲ್ಲಿ ಹೋಗೋಣ ಎನ್ನಬಹುದು. ನಾನು ಅವರು ಸಾಕಷ್ಟು ವರ್ಷದ ಸ್ನೇಹಿತರು ಒಟ್ಟಿಗೆ ವಿದೇಶ ಪ್ರವಾಸ ಎಲ್ಲ ಮಾಡಿದ್ದೇವೆ.ವಿಚಾರ ಭೇದ ಅಷ್ಟೆ ವೈಯುಕ್ತಿಕ ಏನು ಇಲ್ಲ. ಅವರನ್ನು ಮನೆಗೆ ಒಂದು ದಿನ ಊಟಕ್ಕೆ ಕರೆಯುತ್ತೇನೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments