Sunday, August 24, 2025
Google search engine
HomeUncategorizedಸೂಟ್​ಕೇಸ್​ನಲ್ಲಿ ಮಹಿಳೆಯ ಸುಟ್ಟಶವ ಪತ್ತೆ : ಸುಳ್ಳು ಕೇಸ್​ ಹಾಕುತ್ತೇನೆ ಎಂದವಳ ಕಥೆ ಮುಗಿಸಿದ ಯುವಕ...

ಸೂಟ್​ಕೇಸ್​ನಲ್ಲಿ ಮಹಿಳೆಯ ಸುಟ್ಟಶವ ಪತ್ತೆ : ಸುಳ್ಳು ಕೇಸ್​ ಹಾಕುತ್ತೇನೆ ಎಂದವಳ ಕಥೆ ಮುಗಿಸಿದ ಯುವಕ !

ದೆಹಲಿ: ನಿನ್ನೆ (ಜ.26) ದೆಹಲಿಯ ಗಾಜಿಪುರದಲ್ಲಿ ಮಹಿಳೆಯೊಬ್ಬರ ಸುಟ್ಟ ಶವ ಸೂಟ್​ಕೇಸ್​ನಲ್ಲಿ ಪತ್ತೆಯಾಗಿದೆ. ಸುಟ್ಟ ರೀತಿಯಲ್ಲಿ ಶವ ಪತ್ತೆಯಾದ ಕಾರಣ ಮಹಿಳೆಯನ್ನು ಯಾರೆಂದು ಸುಳಿವೆ ಇರಲಿಲ್ಲ. ಆದರೆ ದೆಹಲಿ ಪೊಲೀಸರು ಕೆಲವೇ ಗಂಟೆಗಳಲ್ಲಿ ಈ ಪ್ರಕರಣವನ್ನು ಭೇದಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಈ ಕೊಲೆಗೆ ಸಂಬಂಧಿಸಿದಂತೆ ಮೃತ ಮಹಿಳೆಯ ಸಂಬಂಧಿ ಮತ್ತು ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ತನ್ನ ಸಂಬಂಧಿಯ ಬಳಿ ಆತನ ಕುಟುಂಬವನ್ನು ಬಿಟ್ಟು ಬಂದು ತನ್ನೊಂದಿಗೆ ವಾಸಿಸುವಂತೆ ಒತ್ತಡ ಹೇರಿದ್ದಳು. ಇದರಿಂದ ಬೇಸತ್ತ ಆತ ಆಕೆಯನ್ನು ಕೊಂದಿದ್ದಾನೆ ಎಂಬುದು ಬಯಲಾಗಿದೆ.

ಭಾನುವಾರ ಮುಂಜಾನೆ ಅಂಬೇಡ್ಕರ್ ಚೌಕ್ ಮತ್ತು ಕೇರಳ ಪಬ್ಲಿಕ್ ಶಾಲೆಯ ನಡುವಿನ ಶಿವಾಜಿ ರಸ್ತೆಯ ಬಳಿ ರಸ್ತೆಬದಿಯಲ್ಲಿ ಬಿದ್ದಿದ್ದ ಸೂಟ್‌ಕೇಸ್‌ನಲ್ಲಿ ಸುಟ್ಟ ಶವದ ಭಾಗಗಳು ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಗಾಜಿಯಾಬಾದ್​ನ ಖೋರಾ ಕಾಲೋನಿಯ ನಿವಾಸಿಗಳಾದ ಅಮಿತ್ ತಿವಾರಿ (22) ಮತ್ತು ಆತನ ಸೋದರಸಂಬಂಧಿ ಅನುಜ್ ಕುಮಾರ್ (20)ರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಪರ ರಣಜಿಯಲ್ಲಿ ಆಡಲು ಸಜ್ಜಾದ ಕನ್ನಡಿಗ ಕೆಎಲ್ ರಾಹುಲ್‌

ಏನಿದು ಪ್ರಕರಣ ?

ಪೊಲೀಸರ ಪ್ರಕಾರ, ಮೃತ ಮಹಿಳೆ ಶಿಲ್ಪಾ ಪಾಂಡೆ ತನ್ನ ಪ್ರೇಮಿಯಾಗಿದ್ದ ಅಮಿತ್​ಗೆ ಆತನ ಕುಟುಂಬವನ್ನು ತೊರೆದು ತನ್ನೊಂದಿಗೆ ವಾಸಿಸುವಂತೆ ಒತ್ತಡ ಹೇರುತ್ತಿದ್ದಳು. ಇದಕ್ಕೆ ಒಪ್ಪದಿದ್ದರೆ ಅವನ ವಿರುದ್ಧ ಮತ್ತು ಅವನ ಕುಟುಂಬದ ವಿರುದ್ಧ ಸುಳ್ಳು ಆರೋಪ ಹೊರಿಸುವುದಾಗಿಯೂ ಆಕೆ ಬೆದರಿಕೆ ಹಾಕಿದ್ದಳು.

ಈ ಬೇಡಿಕೆಗಳನ್ನು ನಿಭಾಯಿಸಲು ಸಾಧ್ಯವಾಗದೆ ಆತ ತನ್ನ ಗೆಳೆಯರೊಂದಿಗೆ ಸೇರಿ ಆಕೆಯ ಕೊಲೆಗೆ ಸಂಚು ರೂಪಿಸಿದ್ದ. ಕೊಲೆ ಮಾಡಿದ ನಂತರ, ಆಕೆಯ ದೇಹವನ್ನು ಸುಟ್ಟುಹಾಕಿ ಸಾಕ್ಷ್ಯಗಳನ್ನು ನಾಶಮಾಡಲು ಸೂಟ್‌ಕೇಸ್‌ನಲ್ಲಿ ಶವದ ಅವಶೇಷಗಳನ್ನು ವಿಲೇವಾರಿ ಮಾಡಿದ್ದ. ರಸ್ತೆಬದಿಯಲ್ಲಿ ಸುಟ್ಟ ಶವ ಪತ್ತೆಯಾದ ಬಗ್ಗೆ ಪೊಲೀಸರಿಗೆ ಫೋನ್ ಬಂದಿತು. ಘಟನಾ ಸ್ಥಳವನ್ನು ಪರೀಕ್ಷಿಸಲು ವಿಧಿವಿಜ್ಞಾನ ತಂಡ ಮತ್ತು ಅಪರಾಧ ತನಿಖಾ ತಂಡವನ್ನು ಕರೆಯಲಾಯಿತು. ಸ್ಥಳಕ್ಕೆ ತಲುಪಿದಾಗ, ಸುಟ್ಟ ಸೂಟ್‌ಕೇಸ್‌ನಲ್ಲಿ 30ರಿಂದ 35 ವರ್ಷ ವಯಸ್ಸಿನ ಮಹಿಳೆಯ ಸುಟ್ಟ ಶವ ಪತ್ತೆಯಾಗಿತ್ತು. ಆ ಶವವನ್ನು ಎಲ್‌ಬಿಎಸ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿತ್ತು.

ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಲು ಸಿಸಿಟಿವಿ ದೃಷ್ಯಾವಳಿಯನ್ನು ಬಳಸಿಕೊಂಡಿದ್ದಾರೆ. ಶವವನ್ನು ಸಾಗಿಸಿದ್ದ ವಾಹನದ ಮಾಲೀಕರನ್ನು ಪತ್ತೆ ಹಚ್ಚಿದ್ದರು. ಇದು ಆರೋಪಿಗಳನ್ನು ಬಂಧಿಸಲು ಸಹಕಾರಿಯಾಗಿದೆ. ಆರೋಪಿಗಳಿಬ್ಬರು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments