Saturday, August 23, 2025
Google search engine
HomeUncategorizedನಕ್ಸಲರ ಶರಣಾಗತಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅಣ್ಣಾಮಲೈ !

ನಕ್ಸಲರ ಶರಣಾಗತಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅಣ್ಣಾಮಲೈ !

ಮಂಗಳೂರು : ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಣ್ಣಾಮಲೈ ‘6 ಮಂದಿ ನಕ್ಸಲರ ಶರಣಾಗತಿಯ ಕುರಿತು ಸರಕಾರ ನಡೆದು ಕೊಂಡ ರೀತಿ ಸಂಶಯ ಮೂಡಿಸುತ್ತಿದೆ, ಈ ಹಿಂದೆ ನಡೆದ ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ಕೂಡ ಸಂಶಯ ಮೂಡಿಸುತ್ತಿದೆ ಎಂದು ನಕ್ಸಲರ ಶರಣಾಗತಿ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ಇದರ ಕುರಿತು ಮಾತನಾಡಿದ ಅಣ್ಣಾಮಲೈ ‘ಈ ಹಿಂದೆ ಕೂಡ ನಕ್ಷಲರು ಶರಣಾಗತರಾಗಿದ್ದಾರೆ, ಈ ಹಿಂದೆ ನಾನು ಚಿಕ್ಕಮಂಗಳೂರು ಎಸ್ಪಿ ಆಗಿದ್ದ ಸಂದರ್ಭದಲ್ಲಿ ನಕ್ಸಲರು ಶರಣಾಗಿದ್ದರು, ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ನಾನು ಭಾಗವಹಿಸಿದ್ದೆ, ನಿಯಮಗಳ ಪ್ರಕಾರ ಜಿಲ್ಲಾಧಿಕಾರಿ ಮತ್ತು ಎಸ್ಪಿ ಎದುರು ನಕ್ಸಲರು ಶರಣಾಗಬೇಕು
ಆನಂತರ ಬೇರೆ ಪ್ರಕ್ರಿಯೆಗಳು ನಡೆಯುತ್ತೆ, ಇಲ್ಲಿ ರಾಜಕೀಯ ಮೈಲೇಜ್ ಗೋಸ್ಕರ ಶರಣಾಗತಿ ಪ್ರಕ್ರಿಯೆ ನಡೆಸಲಾಗಿದೆ, ನಕ್ಸಲ್ ಬೆಂಬಲಿಗರು ಸರ್ಕಾರದ ಮೇಲೆ ಪ್ರಭಾವ ಬೀರಿದ್ದಾರೆ, ಇವರು ನಾಗರಿಕ ಸಮಾಜದ ಮೇಲೆ ಇವರು ಪ್ರಭಾವ ಬೀರಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: ಚಂದನ್​ ಶೆಟ್ಟಿಗೆ ಎದುರಾಯ್ತು ಕಂಟಕ : ಕಾಫಿ ರೈಟ್​ ಉಲ್ಲಂಘನೆಯ ಆರೋಪ !

ಮುಂದುವರಿದು ಮಾತನಾಡಿದ ಅಣ್ಣಾಮಲೈ ‘ನಕ್ಸಲರು ಶರಣಾದಾಗ ಜನರಿಗೆ ವಿಶ್ವಾಸ ಬರಬೇಕು, ಆದರೆ ಈಗಾಗಿರುವ ಶರಣಾಗತಿಯ ಬಗ್ಗೆ ಜನರಲ್ಲಿ ವಿಶ್ವಾಸವಿಲ್ಲ. ಶರಣಾಗತಿಯ ಬಗ್ಗೆ ಗೃಹ ಸಚಿವರೇ ಮಾಹಿತಿಯ ಕೊರತೆ ಇದ್ದ ಹಾಗೆ ಉಲ್ಟಾ-ಪಲ್ಟಾ ಮಾತನಾಡುತ್ತಾರೆ, ಶರಣಾದ ನಕ್ಸಲರು ನಾಗರಿಕ ಸಮಾಜದ ಮೇಲೆ ಪ್ರಭಾವ ಬೀರುವ ಅಪಾಯವಿದೆ ಈಶಾನ್ಯ ರಾಜ್ಯಗಳಲ್ಲೂ ಭಯೋತ್ಪಾದಕರು ಶರಣಾಗುತ್ತಾರೆ. ಮೊದಲು
ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳೆದರು ಶರಣಾಗುತ್ತಾರೆ, ಆ ಬಳಿಕ ಗೃಹ ಸಚಿವರು ಮುಖ್ಯಮಂತ್ರಿಗಳೆದುರು ಬರುತ್ತಾರೆ.

ಸಿದ್ದರಾಮಯ್ಯ ಸರಕಾರದ ಈ ಹಿಂದಿನ ಇತಿಹಾಸ ಗೊತ್ತಿದೆ, ಗೌರಿ ಲಂಕೇಶ್ ಹಾಗೂ ಇತರರು ಪ್ರಭಾವ ಬೀರಿದ್ದ ಇತಿಹಾಸ ಗೊತ್ತಿದೆ, ಇಡೀ ಶರಣಾಗತಿ ಪ್ರೊಸೆಸ್ ಸರಿಯಾಗಿ ನಡೆದಿಲ್ಲ, ಸರ್ಕಾರದ ಮೇಲೆ ಯಾರೋ ಪ್ರಭಾವ ಬೀರಿದ್ದಾರೆ, ಇವರು ನಾಗರಿಕ ಸಮಾಜಕ್ಕೆ ಬಂದು ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಾರೆ ಎಂದು ಅಣ್ಣಮಲೈ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments