Monday, August 25, 2025
Google search engine
HomeUncategorizedOYO ರೂಂ ಬೇಕಾದರೆ ಮದುವೆಯಾಗಿ : ಏನಿದು ಓಯೋದ ಹೊಸ ನಿಯಮ !

OYO ರೂಂ ಬೇಕಾದರೆ ಮದುವೆಯಾಗಿ : ಏನಿದು ಓಯೋದ ಹೊಸ ನಿಯಮ !

ನವದೆಹಲಿ: ಓಯೋ ಹೋಟೆಲ್‌ ಬುಕ್ಕಿಂಗ್‌ ಕಂಪನಿ ಚೆಕ್‌ ಇನ್‌ಗೆ ಸಂಬಂಧಿಸಿದಂತೆ ಕೆಲವು ಹೊಸ  ಮಾರ್ಪಾಡುಗಳನ್ನು ಮಾಡಿದ್ದು. ಇನ್ನು ಮುಂದೆ ಅವಿವಾಹಿತ ಜೋಡಿಗಳಿಗೆ ರೂಂ ನೀಡುವುದಿಲ್ಲ ಎಂದು ಘೋಷಣೆ ಮಾಡಿದೆ.

ದೇಶದ ಪ್ರಮುಖ ರೂಂ ಬುಕ್ಕಿಂಗ್​ ಕಂಪನಿಗಳಲ್ಲಿ ಒಂದಾಗಿರುವ ಓಯೋ. ದೇಶದ ಎಲ್ಲಾ ಮೂಲೆಗಳಲ್ಲಿಯೂ ತನ್ನ ಶಾಖೆಯನ್ನು ವಿಸ್ತರಿಸಿದೆ. ಕಡಿಮೆ ದರದಲ್ಲಿ ಗುಣಮಟ್ಟದ ಸೇವೆಯನ್ನು ನೀಡುವ ಓಯೋ ಹೋಟೆಲ್​ಗಳು ದೊಡ್ಡ ಹೆಸರನ್ನು ಪಡೆದಿದೆ. ಅದರಲ್ಲೂ ಹೆಚ್ಚಿನ ಅವಿವಾಹಿತರಿಗೆ ಹೋಟೆಲ್​ ಚೆಕ್​ಇನ್​ಗೆ ಅವಕಾಶ ನೀಡುವ ಕಾರಣಕ್ಕೆ ಈ ಹೋಟೆಲ್​ ಯುವ ಜೋಡಿಗಳ ಪಾಲಿಗೆ ಹೆಚ್ಚಿನ ಆಯ್ಕೆಯಾಗಿತ್ತು. ಆದರೆ ಇದೀಗ ಓಯೋ ಸಂಸ್ಥೆ ಅವಿವಾಹಿತ ಜೋಡಿಗಳಿಗೆ ಹೋಟೆಲ್​ ರೂಂ ಕೊಡಲು ನಿರ್ಬಂಧ ವಿಧಿಸಿದೆ.

ಏನಿದು ಹೊಸ ರೂಲ್ಸ್?

ಓಯೋ ಹೊಸ ನಿಯಮದ ಪ್ರಕಾರ, ಗ್ರಾಹಕರು ಚೆಕ್-ಇನ್ ಸಮಯದಲ್ಲಿ ಅಧಿಕೃತ ಗುರುತಿನ ಚೀಟಿ ಮತ್ತು ನಿಮ್ಮೊಂದಿಗೆ ಬರೋವರರ ಸಂಬಂಧದ ಗುರುತಿನ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. ಬುಕ್ಕಿಂಗ್ ಆನ್‌ಲೈನ್ ಅಥವಾ ಆಫ್‌ಲೈನ್ ಮಾಡಿದ್ರೂ ಸಹ ಎಲ್ಲಾ ದಾಖಲೆಗಳನ್ನು ಒದಗಿಸಬೇಕು. ಸ್ಥಳೀಯ ಸಾಮಾಜಿಕ ಪರಿಸ್ಥಿತಿಗಳನ್ನು ನೋಡಿಕೊಂಡು ಪಾಲುದಾರ ಹೋಟೆಲ್​ಗಳು ಸಂಗಾತಿಗಳಿಗೆ ರೂಮ್ ನೀಡುವ ಅಥವಾ ನೀಡದಿರುವ ಬಗ್ಗೆ ವಿವೇಚನೆಯಿಂದ ನಿರ್ಧರಿಸಬಹುದು ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ :ರಾಜಧಾನಿಯ ಇಬ್ಬರು ಮಕ್ಕಳಲ್ಲಿ ಚೀನಿ ವೈರಸ್​ ಪತ್ತೆ : ಆತಂಕ ಬೇಡ ಎಂದ ದಿನೇಶ್​ ಗುಂಡುರಾವ್​ !

ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯ ಕ್ರಮಗಳನ್ನು ಎತ್ತಿಹಿಡಿಯಲು ಓಯೋ ಬದ್ಧವಾಗಿದೆ. ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುವ ಮಧ್ಯೆ ನಾವು ಕಾರ್ಯನಿರ್ವಹಿಸುವ ಸೂಕ್ಷ್ಮ ಮಾರುಕಟ್ಟೆಗಳಲ್ಲಿ ಕಾನೂನು ಜಾರಿ ಮತ್ತು ನಾಗರಿಕ ಸಮಾಜಗಳ ಬೇಡಿಕೆಗಳನ್ನು ಆಲಿಸುವುದು ಹಾಗೂ ಅವುಗಳನ್ನು ಪರಿಶೀಲಿಸುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ ಎಂಬುದು ನಮಗೆ ತಿಳಿದಿದೆ. ಹೊಸ ನೀತಿ ಮತ್ತು ಅದರ ಪರಿಣಾಮಗಳನ್ನು ನಿಯಮಿತವಾಗಿ ಪರಿಶೀಲಿಸುತ್ತೇವೆ. ಈ ಉಪಕ್ರಮವು ಹಳೆಯ ಗ್ರಹಿಕೆಯನ್ನು ಪರಿವರ್ತಿಸುವ ಮತ್ತು ಕುಟುಂಬಗಳು, ವಿದ್ಯಾರ್ಥಿಗಳು, ವ್ಯವಹಾರ, ಧಾರ್ಮಿಕ ಮತ್ತು ಏಕವ್ಯಕ್ತಿ ಪ್ರಯಾಣಿಕರಿಗೆ ಸುರಕ್ಷಿತ ಅನುಭವವನ್ನು ಒದಗಿಸುವ ಬ್ರಾಂಡ್ ಆಗಿ ತನ್ನನ್ನು ತಾನು ಬಿಂಬಿಸಿಕೊಳ್ಳುವ ಓಯೋ ಕಾರ್ಯಕ್ರಮದ ಒಂದು ಭಾಗವಾಗಿದೆ ಎಂದು ಓಯೋ ಉತ್ತರ ಭಾರತದ ಪ್ರಾದೇಶಿಕ ಮುಖ್ಯಸ್ಥ ಪವಾಸ್ ಶರ್ಮಾ ಪಿಟಿಐ ಜೊತೆ ಮಾತಾಡಿದ್ದಾರೆ.

ಖಾಸಗಿ ಸಮಯ ಕಳೆಯಲು ಓಯೋ ರೂಮ್ ಬುಕ್ ಮಾಡುತ್ತಿದ್ದ ಪ್ರೇಮಿಗಳಿಗೆ ಇದು ಬ್ಯಾಡ್ ನ್ಯೂಸ್. ಓಯೋ (OYO) ಮೊದಲು ಈ ನಿಯಮವನ್ನು ಮೀರತ್ ನಗರದಲ್ಲಿ ಜಾರಿಗೆ ಬಂದಿದೆ. ಸದ್ಯ ಹೊಸ ನಿಯಮ ಯಶಸ್ವಿಯಾದ್ರೆ ಹಂತ ಹಂತವಾಗಿ ದೇಶದ ಎಲ್ಲಾ ಭಾಗದಲ್ಲಿಯೂ ಜಾರಿಗೆ ತರಲು ಓಯೋ ಚಿಂತನೆ ನಡೆಸಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಓಯೋ ರೂಮ್ ಬುಕ್ ಮಾಡುತ್ತಿದ್ದ, ಭಕ್ತಾದಿಗಳು ಹೊಸ ನಿಯಮವನ್ನು ಸ್ವಾಗತಿಸಿದ್ದಾರೆ.

ಉತ್ತರಪ್ರದೇಶದ ಮೀರತ್​ನಲ್ಲಿ ಮೊದಲು ಜಾರಿ !

ಉತ್ತರಪ್ರದೇಶದ ಮೀರತ್​ನಲ್ಲಿ ಈ ಹೊಸ ನಿಯಮವನ್ನು ಜಾರಿಗೊಳಿಸಿದ್ದು. ಮುಂದಿನ ದಿನಗಳಲ್ಲಿ ಈ ನಿಯಮವನ್ನು ದೇಶದ ಎಲ್ಲಾ ನಗರಗಳಲ್ಲೂ ಜಾರಿಗೊಳಿಸಲಿದೆ.

ಓಯೋದ ಬಗ್ಗೆ ಅನೇಕ ದೂರುಗಳು ಜನಸಾಮಾನ್ಯರಿಂದ ಬಂದಿದ್ದವು. ಈ ಹೋಟೆಲ್​ ರೂಂನಲ್ಲಿ ಅವಿವಾಹಿತರಿಗೆ ಚೆಕ್​ ಇನ್​ಗೆ ಅವಕಾಶ ನೀಡದಂತೆ ಅನೇಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ರೀತಿ ಹಲವು ದೂರುಗಳನ್ನು ಎದುರಿಸಿದ್ದ ಓಯೋ ಇದೀಗ ಹೊಸ ನಿಯಮವನ್ನು ಜಾರಿಗೊಳಿಸಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments