ನವದೆಹಲಿ : ಜನವರಿ 13 ರಿಂದ 19ರವರೆಗೆ ನವದೆಹಲಿಯಲ್ಲಿ ಖೋಖೋ ವಿಶ್ವಕಪ್ಮ ಕ್ರೀಡಾಕೂಟವನ್ನು ಆಯೋಜನೆ ಮಾಡಿದ್ದು. ಈ ಕ್ರೀಡಾಕೂಟದಲ್ಲಿ ಸುಮಾರು 20 ದೇಶಗಳು ಭಾಗವಹಿಸಲಿವೆ ಎಂದು ತಿಳಿದು ಬಂದಿದೆ. ಪಾಕಿಸ್ತಾನ ತಂಡವು ಆಗಮಿಸಬಹುದು ಎಂದು ಖೋಖೋ ಒಕ್ಕೂಟದ ಅಧ್ಯಕ್ಷ ಸುಧಾಂಶು ಮಿತ್ತಲ್ ತಿಳಿಸಲಿದ್ದಾರೆ.
ಈ ಕ್ರೀಡಾಕೂಟವನ್ನ ಖೋ ಖೋ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಮೊದಲ ಬಾರಿಗೆ ಆಯೋಜಿಸಲಾಗಿದೆ. ಈ ಕ್ರೀಡಾ ಕೂಟಕ್ಕೆ ಜನವರಿ 08ರಂದು ಭಾರತ ಪುರಷರು ಮತ್ತು ಮಹಿಳಾ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಪುರಷರ ಎರಡು ತಂಡಗಳನ್ನು ಮತ್ತು ಮಹಿಳೆಯರ ಎರಡು ತಂಡಗಳನ್ನು ಆಯ್ಕೆ ಮಾಡಲಿದ್ದು. ತಲಾ ಒಂದು ತಂಡಕ್ಕೆ 15 ಆಟಗಾರರಂತೆ ಒಟ್ಟು 60 ಜನರನ್ನು ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ: ವೈದ್ಯರು ಕ್ಯಾನ್ಸರ್ ರೋಗಿಗಳಿಗೆ ವಿಶೇಷ ಕಾಳಜಿಯಿಂದ ಚಿಕಿತ್ಸೆ ನೀಡಬೇಕು : ದ್ರೌಪದಿ ಮುರ್ಮು
ಈ ಬಗ್ಗೆ ಮಾತನಾಡಿರುವ ಖೋಖೋ ಒಕ್ಕೂಟದ ಅಧ್ಯಕ್ಷ ಸುಧಾಂಶೂ ಮಿತ್ತಲ್ ‘ವಿಶ್ವಕಪ್‌ನಲ್ಲಿ ಆಡುವ ಪುರುಷ ಹಾಗೂ ಮಹಿಳೆಯರ ಎ ಹಾಗೂ ಬಿ ತಂಡಗಳಿಗೆ ಆಟಗಾರರು ಹಾಗೂ ನಾಯಕರ ಆಯ್ಕೆ ಜ. 8ರಂದು ನಡೆಯಲಿದೆ. ಆಯ್ಕೆಯಾಗುವ ನಾಲ್ಕು ತಂಡಗಳಿಗೆ ಒಂದು ವಾರದ ಕಠಿಣ ತರಬೇತಿ ಇರಲಿದೆ. ಈ ತಂಡಗಳು ಪರಸ್ಪರ ಆಡಲಿವೆ’ ಎಂದಿದ್ದಾರೆ.
‘ಪಾಕಿಸ್ತಾನ ತಂಡವು ವಿಸಾ ಸಿಗುವ ನಿರೀಕ್ಷೆಯಲ್ಲಿದೆ. ಮೊದಲ ವಿಶ್ವಕಪ್‌ನಲ್ಲಿ ಅವರು ಭಾಗವಹಿಸುತ್ತಾರೆ ಎಂಬ ವಿಶ್ವಾಸವಿದೆ. ಜ. 13ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಹೀಗಾಗಿ ಒತ್ತಡದಿಂದ ನನ್ನ ಹೃದಯದ ಬಡಿತವೂ ಹೆಚ್ಚಾಗಿದೆ. ಅವಧಿಯೊಳಗೆ ಎಲ್ಲವೂ ಬಗೆಹರಿಯುವ ವಿಶ್ವಾಸವಿದೆ’ ಎಂದು ಮಿತ್ತಲ್ ಹೇಳಿದ್ದಾರೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಅಮೇರಿಕಾ, ಇಂಗ್ಲೇಂಡ್, ಜರ್ಮನಿ, ಆಸ್ಟ್ರೇಲಿಯಾ ಹಾಗೂ ಬ್ರೆಸಿಲ್ ಸೇರಿ 24 ರಾಷ್ಟ್ರಗಳು ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿವೆ. ಜನವರಿ 13ರಿಂದ ಪಂದ್ಯವಾಳಿ ಆರಂಭವಾಗಲಿದ್ದು. ಜನವರಿ 17ರಂದು ಕ್ವಾಟರ್ ಫೈನಲ್, 18ರಂದು ಸೆಮಿಫೈನಲ್ ಮತ್ತು ಜನವರಿ 19ರಂದು ಫೈನಲ್ ನಡೆಯಲಿದೆ ಎಂದು ಮಾಹಿತಿ ದೊರೆತಿದೆ.



Pinco kazinoda yeni slotlar əlavə olunur. Slot oyunlarında şansını yoxla pinco oyun. Pinco Azərbaycanda ən çox istifadə edilən kazinodur.
Pinco oyun dünyasına xoş gəlmisən.