ಬೆಂಗಳೂರು: ಹೊಸ ವರ್ಷದ ಸಂಭ್ರಮದ ಹಿನ್ನೆಲೆ ವಿಶ್ವದಾದ್ಯಂತ ಎಲ್ಲೆಡೆ ಜನರು ಭರ್ಜರಿಯಾಗಿ 2025 ಇಸವಿಯನ್ನು ವೆಲ್ ಕಮ್ ಮಾಡಿಕೊಂಡಿದ್ದು ನಮ್ಮ ಹೆಮ್ಮೆಯ ಕರ್ನಾಟಕದ ಬೆಂಗಳೂರಿನಲ್ಲಿಯೂ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡರು. ಇದ್ದರಿಂದಾಗಿ ಸಾರಿಗೆ ನಿಗಮಕ್ಕೆ ನಿರೀಕ್ಷೆಗೂ ಮೀರಿದ ಆದಾಯ ಹರಿದು ಬಂದಿರುವ ಸುದ್ದಿ ಹೊರಬಿದ್ದಿದೆ.
ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾರಿಗೆ ನಿಮಗಗಳಲ್ಲಿ ಒಂದಾದ ಬಿಎಂಟಿಸಿ ಬಸ್ಗಳು ಡಿಸೆಂಬರ್ 31ರಲ್ಲಿ ಹೆಚ್ಚು ಆದಾಯ ಗಳಿಸಿ ದಾಖಲೆ ನಿರ್ಮಿಸಿದೆ. ಡಿಸೆಂಬರ್ 31ರಿಂದ ಜನವರಿ ಮಧ್ಯರಾತ್ರಿ 2ಗಂಟೆ ವರೆಗೂ ಬಸ್ಗಳು ಸಂಚಾರ ನಡೆಸಿದ್ದವು. ಇದರ ಪರಿಣಾಮ ಬಿಎಂಟಿಸಿಗೆ ಕೋಟಿ ಕೋಟಿ ಆದಾಯ ಬಂದಿದೆ.
ಹೊಸ ವರ್ಷ ಹಿನ್ನೆಲೆ ನಗರದಾದ್ಯಂತ ವಿವಿಧ ಭಾಗಗಳಿಗೆ ಬಿಎಂಟಿಸಿ ಬಸ್ಗಳನ್ನು ಹೆಚ್ಚುವರಿಯಾಗಿ ಬಿಡಲಾಗಿತ್ತು. ಸದ್ಯ ನಿಗಮದ ವರದಿ ಪ್ರಕಾರ ಡಿಸೆಂಬರ್ 31ರಂದು ಒಟ್ಟು 35 ಲಕ್ಷ 70 ಸಾವಿರದ 842 ಪ್ರಯಾಣಿಕರು ಬಿಎಂಟಿಸಿ ಬಸ್ ಬಳಸಿದ್ದಾರೆ. ಇದರಿಂದ ಬರೋಬ್ಬರಿ 5 ಕೋಟಿ 48 ಲಕ್ಷದ 89 ಸಾವಿರದ 254 ರೂಪಾಯಿ ಆದಾಯ ಬಂದಿದೆ ಎಂದು ಬಿಎಂಟಿಸಿ ರೆವೆನ್ಯೂ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.



Pinco oyunçuları hər gün qazanır. Oyun təcrübəsini yüksəlt pinco guncel giris. Pinco oyun dünyasında liderdir.
Pinco tətbiqi mobil üçün mükəmməldir.