Wednesday, August 27, 2025
HomeUncategorizedಮಹಾರಾಷ್ಟ್ರದಲ್ಲಿ ಕಾಂಗ್ರೆಸ್​​ ಸೋಲಿಗೆ ಡಿವೈ ಚಂದ್ರಚೂಡ್ ಕಾರಣ: ಸಂಜಯ್ ರಾವತ್

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​​ ಸೋಲಿಗೆ ಡಿವೈ ಚಂದ್ರಚೂಡ್ ಕಾರಣ: ಸಂಜಯ್ ರಾವತ್

ಮುಂಬೈ :  ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಸೋಲಿಗೆ ಇತ್ತೀಚೆಗೆ ನಿವೃತ್ತರಾದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಕಾರಣ ಎಂದು ಶಿವಸೇನಾ (ಉದ್ಧವ್ ಬಣ) ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ. ಅವರ ಈ ಹೇಳಿಕೆ ಅಚ್ಚರಿ ಮೂಡಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ಚುನಾವಣಾ ಪ್ರಕ್ರಿಯೆ ಮರು ಮೌಲ್ಯಮಾಪನ ನಡೆಯಬೇಕು. ಮತ ಪತ್ರಗಳ ಮೂಲಕ ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.

“ಈ ಚುನಾವಣೆಯಲ್ಲಿ ಇವಿಎಂ ದೊಡ್ಡ ಸಮಸ್ಯೆಯಾಗಿ ಉಳಿದಿದೆ. ಈ ಫಲಿತಾಂಶ ಇರಲಿ, ಆದರೆ ಪೇಪರ್ ಬ್ಯಾಲಟ್ ಮೂಲಕ ಮತ್ತೊಮ್ಮೆ ಚುನಾವಣೆ ನಡೆಸಿ. ಬಳಿಕ ಇದೇ ಫಲಿತಾಂಶ ಬರುತ್ತದೆಯೇ ಎಂದು ನಮಗೆ ತೋರಿಸಿ” ಎಂದು ಸವಾಲು ಹಾಕಿದರು.

ಇವಿಎಂ ಯಂತ್ರ ಮಾತ್ರವಲ್ಲದೆ, ಅವರು ಮಹಾರಾಷ್ಟ್ರದಲ್ಲಿ ವಿಪಕ್ಷ ಮೈತ್ರಿಕೂಟದ ಸೋಲಿಗೆ ನಿವೃತ್ತ ಸಿಜೆಐ ಅವರೂ ಹೊಣೆಗಾರರು ಎಂದು ಆಪಾದಿಸಿದರು. “ಮಹಾರಾಷ್ಟ್ರದಲ್ಲಿ ನಡೆದಿರುವ ಈ ಎಲ್ಲ ಘಟನೆಗಳಿಗೆ ಚಂದ್ರಚೂಡ್ ಹೊಣೆಗಾರರು” ಎಂದು ರಾವತ್ ದೂರಿದರು.

ಚಂದ್ರಚೂಡ್ ಅವರು ಶಾಸಕರ ಅನರ್ಹತೆಯ ಅರ್ಜಿಗಳನ್ನು ಇತ್ಯರ್ಥಪಡಿಸಲೇ ಇಲ್ಲ. ಅವರು ಪಕ್ಷಾಂತರದ ಕಿಟಕಿ ಮತ್ತು ಬಾಗಿಲುಗಳನ್ನು ತೆರೆದೇ ಇರಿಸಿದ್ದರು ಎಂದು ಕಿಡಿಕಾರಿದ ರಾವತ್, “ಡಿವೈ ಚಂದ್ರಚೂಡ್ ಅವರ ಹೆಸರನ್ನು ಇತಿಹಾಸದಲ್ಲಿ ಕಪ್ಪು ಅಕ್ಷರಗಳಲ್ಲಿ ಬರೆದಿಡಲಾಗುತ್ತದೆ” “ಅವರು (ಚಂದ್ರಚೂಡ್) ಪಕ್ಷಾಂತರಿಗಳಿಗೆ ಕಾನೂನಿನ ಕುರಿತಾದ ಭಯವನ್ನೇ ತೆಗೆದು ಹಾಕಿದ್ದಾರೆ. ವಿಧಾನಸಭೆ ಚುನಾವಣೆಯ ಫಲಿತಾಂಶ ಮೊದಲೇ ನಿರ್ಧರಿತವಾಗಿತ್ತು. ಸಕಾಲಕ್ಕೆ ಅನರ್ಹತೆಯ ಅರ್ಜಿಗಳನ್ನು ಸಿಜೆಐ ಇತ್ಯರ್ಥಪಡಿಸಿದ್ದರೆ, ಫಲಿತಾಂಶ ವಿಭಿನ್ನವಾಗಿರುತ್ತಿತ್ತು” ನಾವು ದುಃಖದಲ್ಲಿದ್ದೇವೆ, ಆದರೆ ನಿರಾಶರಾಗಿಲ್ಲ. ನಾವು ಅಪೂರ್ಣವಾಗಿ ಹೋರಾಟವನ್ನು ಕೈಬಿಡುವುದಿಲ್ಲ. ಮತಗಳ ವಿಭಜನೆ ಕೂಡ ಇಲ್ಲಿ ಕೆಲಸ ಮಾಡಿದೆ. ಈ ಚುನಾವಣೆಯಲ್ಲಿ ಆರೆಸ್ಸೆಸ್ ಮಹತ್ವದ ಪಾತ್ರ ವಹಿಸಿದೆ. ವಿಷ ಹರಡುವ ಪ್ರಚಾರವು ನಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ” ಮಹಾರಾಷ್ಟ್ರದ ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಕ್ಕದ ಗುಜರಾತ್‌ನಲ್ಲಿ ನಡೆಯಬೇಕು ಎಂದು ಕಟಕಿಯಾಡಿದರು.

ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿನ ತಮ್ಮ ವಾರದ ಅಂಕಣದಲ್ಲಿ ಅವರು, ಹಣ ಬಲದ ಕಡೆಗೆ ಕುರುಡುತನ ಪ್ರದರ್ಶಿಸಿರುವ ಚುನಾವಣಾ ಆಯೋಗಕ್ಕೆ ಇದು ಶ್ರದ್ಧಾಂಜಲಿ ಸಲ್ಲಿಸುವ ಸಮಯ. ನ್ಯಾಯಾಲಯಗಳು ಸುದೀರ್ಘ ಸಮಯದಿಂದ ಐಸಿಯುವಿನಲ್ಲಿವೆ ಎಂದು ಲೇವಡಿ ಮಾಡಿದ್ದರು.

2022ರಲ್ಲಿ ಶಿವಸೇನಾ ವಿಭಜನೆಯಾಗಿ ಶಿಂಧೆ ಬಣವು ಬಿಜೆಪಿ ಜತೆ ಸೇರಿ ಸರಕಾರ ರಚಿಸಿದಾಗ, ಏಕನಾಥ್ ಶಿಂಧೆ ಅವರ ಜತೆ ಪಕ್ಷ ತೊರೆದ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಉದ್ಧವ್ ಠಾಕ್ರೆ ಬಣವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ಅನರ್ಹತೆಯ ಅರ್ಜಿಗಳನ್ನು ನಿರ್ಧರಿಸುವ ಅಧಿಕಾರವನ್ನು ವಿಧಾನಸಭೆ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್ ನೀಡಿತ್ತು. ಶಿಂಧೆ ಬಣವೇ ನಿಜವಾದ ಶಿವಸೇನಾ ಪಕ್ಷ ಎಂದು ಸ್ಪೀಕರ್ ಈ ವರ್ಷ ಘೋಷಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments