Saturday, August 23, 2025
Google search engine
HomeUncategorizedರಾಜ್ಯದ ಜನತೆಗೆ ಕೇಂದ್ರದಿಂದ ಅನ್ಯಾಯ: ಸಚಿವ ಕೆ.ಹೆಚ್​ ಮುನಿಯಪ್ಪ!

ರಾಜ್ಯದ ಜನತೆಗೆ ಕೇಂದ್ರದಿಂದ ಅನ್ಯಾಯ: ಸಚಿವ ಕೆ.ಹೆಚ್​ ಮುನಿಯಪ್ಪ!

ನವದೆಹಲಿ: ಕಳೆದ ಐದಾರು ವರ್ಷಗಳಲ್ಲಿ ನ್ಯಾಯಯುತವಾಗಿ ಬರಬೇಕಾಗಿದ್ದ 1,87,000 ಕೋಟಿ ರೂ.ಗಳಷ್ಟು ಅನುದಾನವನ್ನು ರಾಜ್ಯಕ್ಕೆ ನೀಡಲಾಗಿಲ್ಲ ಎಂದು ಆಹಾರ ನಾಗರೀಕ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್​ ಮುನಿಯಪ್ಪ ನವರು ತಿಳಿಸಿದರು.

ಇದನ್ನೂ ಓದಿ: ನಮ್ಮ ಪ್ರತಿಭಟನೆ ಕನ್ನಡಿಗರ ಹಿತ ಕಾಪಾಡುವ ಚಳುವಳಿ: ಸಿಎಂ ಸಿದ್ದರಾಮಯ್ಯ!

ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಮಾಡಿರುವ ಅನ್ಯಾಯದ ವಿರುದ್ಧ ನವದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.  ರಾಜ್ಯದ ಜನತೆಗೆ ಆಗುತ್ತುರುವ ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನು ದೆಹಲಿಯ ಜಂತರ್ ಮಂತರ್ ನಡೆಸುತ್ತಿದ್ದೇವೆ, ಈ ಜಾಗ ಐತಿಹಾಸಿಕ ಸ್ಥಳವಾಗಿದ್ದು, ಅನೇಕ ಚಳವಳಿಗೆ ಸಾಕ್ಷಿಯಾದ ಸ್ಥಳ. ಇಂತಹ ಜಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರು, ಶಾಸಕರು ಈ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಇದು ರಾಜಕೀಯ ಚಳವಳಿ ಅಲ್ಲ. ಕೇಂದ್ರ ಸರ್ಕಾರದ ವಿರುದ್ಧದ ಈ ಹೋರಾಟವನ್ನು ಪಕ್ಷಾತೀತವಾಗಿ ಮಾಡಲಾಗುತ್ತಿದೆ ಎಂದರು.

ನಮ್ಮ ದಕ್ಷಿಣದ ರಾಜ್ಯಗಳಿಂದ ಅತ್ಯಧಿಕ ತೆರಿಗೆಯನ್ನು ಕೇಂದ್ರಕ್ಕೆ ನಾವು ಸಲ್ಲಿಸುತ್ತಿದ್ದರೇ ನಮಗೆ ಬರಬೇಕಾದ ತೆರಿಗೆಯ ಪಾಲನ್ನು ಉತ್ತರಪ್ರದೇಶ ರಾಜ್ಯಕ್ಕೆ 2,80,000 ಕೋಟಿ ರೂ. ಬಿಹಾರ, ಮಧ್ಯಪ್ರದೇಶ, ರಾಜಸ್ಥಾನಕ್ಕೂ ನೀಡಲಾಗುತ್ತಿದೆ ಎಂದು ಅವರು ಆಕ್ರೋಶ ಹೊರ ಹಾಕಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments