Saturday, August 23, 2025
Google search engine
HomeUncategorizedಭಾರತ ದೇಶದ ಧ್ವಜ ಬಿಟ್ಟು ಭಾಗವಧ್ವಜ ಹಾರಿಸಿದ್ದು ಸರಿಯಲ್ಲ : ಸಿಎಂ ಸಿದ್ದರಾಮಯ್ಯ

ಭಾರತ ದೇಶದ ಧ್ವಜ ಬಿಟ್ಟು ಭಾಗವಧ್ವಜ ಹಾರಿಸಿದ್ದು ಸರಿಯಲ್ಲ : ಸಿಎಂ ಸಿದ್ದರಾಮಯ್ಯ

ಚಿತ್ರದುರ್ಗ: ಭಾರತ ದೇಶದ ಧ್ವಜ ಹಾರಿಸುವುದು ಬಿಟ್ಟು ಭಾಗವಧ್ವಜ ಹಾರಿಸಿದ್ದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ. ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಹನುಮಧ್ವಜ ಕಿತ್ತುಹಾಕಿರುವುದಕ್ಕೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ಭೇಟಿ ನೀಡುತ್ತಿರುವ ಬಗ್ಗೆ ಮಾತನಾಡಿ ನಮ್ಮ ದೇಶದ ಬಾವುಟ ಹಾರಿಸಬೇಕು, ಅದನ್ನು ಬಿಟ್ಟು ಭಾಗವಧ್ವಜ ಹಾರಿಸಿದ್ದು ಸರಿಯಲ್ಲ ಎಂದರು.

ಶ್ಯಾಮನೂರು ಶಿವಶಂಕರಪ್ಪನವರು ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಅವರೇ ಗೆಲ್ಲಲಿ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ನನಗೆ ಗೊತ್ತಿಲ್ಲ, ಅವರೊಂದಿಗೆ ಮಾತನಾಡುತ್ತೇನೆ ಎಂದರು.

ಇದನ್ನೂ ಓದಿ: ಅಲ್ಲೇ ಹನುಮನ ಧ್ವಜ ಹಾರಾಟ ಆಗಬೇಕು : ಆರ್. ಅಶೋಕ್

ಲೋಕಸಭಾ ಚುನಾವಣೆಯಲ್ಲಿ 15- 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ :
ಲೋಕಸಭಾ ಚುನಾವಣೆಯಲ್ಲಿ 15- 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಬಿಜೆಪಿಯವರಂತೆ 28 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಸುಳ್ಳು ಹೇಳುವುದಿಲ್ಲ, ಚುನಾವಣಾ ಸಮೀಕ್ಷೆಯನ್ನು ಮಾಡಿಸಿರುವುದಾಗಿ  ಉತ್ತರಿಸಿದರು.

ಸಚಿವ ಸಂಪುಟದಲ್ಲಿ ಚರ್ಚೆ
ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಜಾರಿ ಮಾಡುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸುವುದಾಗಿ ಹೇಳಿದರು.

ವರಿಷ್ಠರು ತೀರ್ಮಾನಿಸುತ್ತಾರೆ:
ಇಂಡಿಯಾ ಒಕ್ಕೂಟದಿಂದ ಹಲವು ಪಕ್ಷಗಳು ಬಿಟ್ಟು ಹೋಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಮಲ್ಲಿಕಾರ್ಜುನ ಖರ್ಗೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಯವರು ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ನಾನು ಈ ಬಗ್ಗೆ ಮಾತನಾಡುವುದಿಲ್ಲ ಎಂದರು.

ಜಾತಿವಾರು ಜನಗಣತಿ ವರದಿಯನ್ನು ಸಲ್ಲಿಸಿದರೆ ವರದಿಯನ್ನು ಸ್ವೀಕಾರ ಮಾಡುವುದಾಗಿ ತಿಳಿಸಿದರು. ವರದಿಯಲ್ಲಿ ಏನಿದೆ ಎಂದು ಸಲ್ಲಿಕೆಯಾದ ಮೇಲೆ ಚರ್ಚೆ ಮಾಡುವುದಾಗಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments