ಚಿಕ್ಕಮಗಳೂರು: ಸಂಬಳ ವಾಪಸ್ ಕೇಳಿ ನೋಟಿಸ್ ನೀಡಿರುವ ವಿಚಾರದಲ್ಲಿ ತಹಶೀಲ್ದಾರ್ ತಪ್ಪಿದೆ ಹೊರತು ಹಿರೇಮಗಳೂರು ಕಣ್ಣನ್ ತಪ್ಪಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಪ್ರತಿವರ್ಷ ದೇವಸ್ಥಾನಕ್ಕೆ ತಸ್ತಿಕ್ ಹಣ ಅಂತ ಕೊಡ್ತಾರೆ. ಮುಜರಾಯಿ ದೇವಸ್ಥಾನಗಳಿಗೆ ಈ ಹಣ ಕೊಡ್ತಾರೆ. 2013 ರಲ್ಲಿ 24 ಸಾವಿರ ತಸ್ತಿಕ್ ಹಣ ಇತ್ತು, ತಹಶೀಲ್ದಾರ್ 24 ಸಾವಿರ ಕೊಡುವ ಬದಲು 90 ಸಾವಿರ ಹಣ ನೀಡಿದ್ದಾರೆ. ತಹಶೀಲ್ದಾರ್ ತಪ್ಪು ಇದು ಕಣ್ಣನ್ ಅವ್ರ ತಪ್ಪಲ್ಲ ಎಂದು ಹೇಳಿದರು.
ತಹಶೀಲ್ದಾರ್ ಬಳಿಯೇ ಹಣ ಪಡೆಯುತ್ತೇವೆ. ಕಣ್ಣನ್ ಅವರ ಬಳಿ ಹಣ ಕೇಳಲ್ಲ. ನಾನು ಆಯುಕ್ತರ ಜೊತೆ ಈ ಬಗ್ಗೆ ಮಾತನಾಡ್ತೇನೆ. ತಲೆ ಸರಿಯಿಲ್ಲದವರು ಈ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನ ಹೇಳ್ತಿದ್ದಾರೆ. 10 ವರ್ಷದ ಹಣವನ್ನ ತಹಶೀಲ್ದಾರ್ ರಿಂದಲೇ ವಸೂಲಿ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿ ಉಪವಾಸ ಮಾಡಿದ್ದೇ ಅನುಮಾನ : ವೀರಪ್ಪ ಮೊಯ್ಲಿ
24 ಸಾವಿರ ಹಣದ ಬದಲು 90 ಸಾವಿರ ಹಣವನ್ನ ತಹಶೀಲ್ದಾರ್ ಕೊಟ್ಟಿದ್ದಾರೆ. 24 ಸಾವಿರ ಹಣ ಕೊಡುವ ಜಾಗದಲ್ಲಿ 90 ಸಾವಿರ ಹಣ ಕೊಟ್ಟಿದ್ದು ತಹಶೀಲ್ದಾರ್ ದು ತಪ್ಪು. ಹೀಗಾಗಿ ಅವರಿಂದಲೇ ಈ ಹಣವನ್ನು ರಿಕವರಿ ಮಾಡುತ್ತೇವೆ. ರಾಜ್ಯದಲ್ಲಿ ಇದೇ ಮೊದಲ ಘಟನೆ ಎಂದು ಅವರು ಹೇಳಿದರು.
ಕಣ್ಣನ್ ಅವರ ಖಾತೆಗೆ ಪ್ರತಿ ತಿಂಗಳು 7,500 ಜಮೆಯಾಗುತ್ತಿತ್ತು. ಇದರಲ್ಲಿ 4,500 ರೂ. ವಾಪಸ್ ನೀಡುವಂತೆ ಜಿಲ್ಲಾಡಳಿತವು ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿರುವ, ಕನ್ನಡದ ಪಂಡಿತ ಹಿರೇಮಗಳೂರು ಕಣ್ಣನ್ ಅವರಿಗೆ ನೋಟಿಸ್ ಜಾರಿತ್ತು, ಇದರಿಂದ ಕಣ್ಣನ್ ಅವರು ಕಂಗಾಲಾಗಿದ್ದಾರೆ.



Pinco kazino sevilən oyun platformasıdır. Canlı yayımlar üçün rəsmi ünvan pinco casino. Pinco oyunçulara böyük bonuslar verir.
Pinco tətbiq istifadəçi dostudur.