Saturday, August 23, 2025
Google search engine
HomeUncategorizedಡಿಕೆ ಶಿವಕುಮಾರ್ ಸಿಎಂ ಆಗ್ತಾರೆ; ಭವಿಷ್ಯ ನುಡಿದ ರಾಜಗುರು ದ್ವಾರಕನಾಥ್

ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ; ಭವಿಷ್ಯ ನುಡಿದ ರಾಜಗುರು ದ್ವಾರಕನಾಥ್

ಚಿಕ್ಕಮಗಳೂರು: ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮುಂದೊಂದು ದಿನ ಮುಖ್ಯಮಂತ್ರಿ ಆಗುತ್ತಾರೆ. ಈಗ ಸಿದ್ದರಾಮಯ್ಯ ಸರ್ಕಾರ ಸೇಫ್ ಆಗಿದೆ ಎಂದು ಡಿ. ಕೆ. ಶಿವಕುಮಾ‌ರ್ ಆಧ್ಯಾತ್ಮಿಕ ಗುರು, ಜ್ಯೋತಿಷಿ ದ್ವಾರಕನಾಥ್ ಭವಿಷ್ಯ ನುಡಿದರು.

ಸದ್ಯಕ್ಕೆ ಕಾಂಗ್ರೆಸ್ ಸರ್ಕಾರ ಭದ್ರವಾಗಿದೆ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಸದ್ಯಕ್ಕೆ ಸರ್ಕಾರ ಬೀಳುವುದಿಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ” ಎಂದರು.

ಇದನ್ನೂ ಓದಿ: ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ರಾಷ್ಟ್ರಪತಿ ಸಹ ಆಗ್ತಾರೆ! ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ ದ್ವಾರಕನಾಥ್  

ಡಿಕೆಶಿಗೆ ಕೆಲ ಸಲಹೆ ಕೊಟ್ಟ ಗುರೂಜಿ

ನನ್ನ ಶಿಷ್ಯ ಶಿವಕುಮಾರ್ ಸಿಎಂ ಆಗ್ತಾನಾ ಅನ್ನೋ ಸಂಶಯ ಎಲ್ಲರಲ್ಲೂ ಇದೆ. ಸಿಎಂ ಆಗಬೇಕಾದ್ರೆ ಸುತ್ತಮುತ್ತ ಶುದ್ಧ ಮನಸ್ಸುಗಳನ್ನು ಇಟ್ಟುಕೊಂಡು, ಶಾಸಕರ ವಿಶ್ವಾಸ ಗಳಿಸಬೇಕು ಅಂತ ಡಿಕೆಶಿಗೆ ಸಲಹೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರೇ ನಿಮ್ಮ ಹೆಸರು ಗೊತ್ತಾಗಬೇಕಾದ್ರೆ ಎಲ್ಲಾ ಕಡೆ ಸುತ್ತಾಡಬೇಕು. ಕಾರ್ಯಕರ್ತರೇ ‌ಮುಖ್ಯ, ಕಾರ್ಯಕರ್ತರ ವಿಶ್ವಾಸಿ ಗಳಿಸಿ ಅಂತ ಸಲಹೆ ನೀಡಿದ್ದಾರೆ.

ಸಿದ್ದರಾಮಯ್ಯ ಬದಲಾವಣೆ ಆಗ್ತಾರಾ?

ಪ್ರಸ್ತುತ ಸಿದ್ದರಾಮಯ್ಯ ಬದಲಾವಣೆ ಆಗ್ತಾರೆ ಅನ್ನೋದು ಸಲ್ಲದ ಮಾತು. ಈಗ ತಾನೇ ಕೂತಿದ್ದಾರೆ, ಆರು ತಿಂಗಳು ಆಗಿದೆ. ಅವರನ್ನ ಸುಮ್ಮನೆ ಬಿಡಬೇಕು. ಸಿದ್ದರಾಮಯ್ಯ ಕೂತಿದ್ದಾರೆ, ಕೂತಿರುವವರೆಗೆ ತೊಂದರೆ ಕೊಡಬೇಡಿ ಅಂತ ದ್ವಾರಕಾನಾಥ್ ಗುರೂಜಿ ಹೇಳಿದ್ರು. ಡಿ.ಕೆ. ಶಿವಕುಮಾರ್ ಮೇಲೆ ಅತ್ಯಂತ ಪ್ರೀತಿ ಇದೆ. ಅವನನ್ನ ಕಂಡ್ರೆ ತುಂಬಾ ಇಷ್ಟ. ಅವನನ್ನ ಬಿಸಾಡುವುದಿಲ್ಲ. ಮುದೊಂದು ದಿನ ಸಿಎಂ ಆಗ್ತಾರೆ. ರಾಜ್ಯ ಆಳುವುದಕ್ಕೆ ಅವರಿಗೆ ಅವಕಾಶ, ಆದರೆ ಸ್ವಲ್ಪ ಸಮಯ ಬೇಕು. ಆಗೋ ಸಮಯ ಬರಬೇಕು. ಡಿ.ಕೆ. ಶಿವಕುಮಾರ್‌ಗೆ ಉತ್ತಮ ಭವಿಷ್ಯ ಇದೆ ಇದೆ ಅಂತ ದ್ವಾರಕಾನಾಥ್ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರ ಸದ್ಯಕ್ಕೆ ಸೇಫ್!

ಇನ್ನು ಸದ್ಯಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಸೇಫ್ ಅಂತ ಕಾಂಗ್ರೆಸ್ ಸರ್ಕಾರದ ಬಗ್ಗೆ ದ್ವಾರಕನಾಥ್ ಗುರೂಜಿ ಭವಿಷ್ಯ ನುಡಿದ್ರು. ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ, ಸದ್ಯಕ್ಕೆ ಕಾಂಗ್ರೆಸ್ ಸರ್ಕಾರ ಬೀಳುವುದಿಲ್ಲ. ಸಿದ್ದರಾಮಯ್ಯ ನವರೇ ಮುಖ್ಯಮಂತ್ರಿ ಯಾಗಿ ಮುಂದುವರೆಯುತ್ತಾರೆ, ಸದ್ಯ ಕ್ಕೆ ಸಿಎಂ ಬದಲಾವಣೆ ಆಗುವುದಿಲ್ಲ ಅಂತ ಗುರೂಜಿ ಸ್ಪಷ್ಟಪಡಿಸಿದ್ದಾರೆ.

 

 

 

 

 

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments