Saturday, August 23, 2025
Google search engine
HomeUncategorizedಪವರ್ ಟಿವಿ ಇಂಪ್ಯಾಕ್ಟ್ : ಕುರುಗೋಡು ವಸತಿ ಶಾಲೆಗೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ...

ಪವರ್ ಟಿವಿ ಇಂಪ್ಯಾಕ್ಟ್ : ಕುರುಗೋಡು ವಸತಿ ಶಾಲೆಗೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಭೇಟಿ

ಬೆಂಗಳೂರು : ಬಳ್ಳಾರಿಯ ವಸತಿ ಶಾಲೆ ಅವ್ಯವಸ್ಥೆ ಕುರಿತು ಪವರ್‌ ಟಿವಿ ಸುದ್ದಿ ಬಿತ್ತರಿಸಿತ್ತು. ಪವರ್‌ ಟಿವಿಯಲ್ಲಿ ವರದಿ ನೋಡಿ ಅಲರ್ಟ್‌ ಆದ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ವಸತಿ ಶಾಲೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಬಳ್ಳಾರಿ ಜಿಲ್ಲೆಯ ಕುರುಗೋಡಿನಲ್ಲಿ ಸಿನಿಮಾ ಥಿಯೇಟರ್‌ನಂತಿದ್ದ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇದೇ ವಿಚಾರದ ಕುರಿತು ಡಿಸೆಂಬರ್‌ 5ರಂದು ‘ಸಿನಿಮಾ ಟಾಕೀಸ್​ನಲ್ಲಿ ವಸತಿ ಶಾಲೆ’ ಎಂಬ ಶೀರ್ಷಿಕೆಯಡಿ ವಿಸ್ತೃತವಾಗಿ ಪವರ್‌ ವರದಿ ಪ್ರಸಾರ ಮಾಡಿತ್ತು.

ವರದಿ ಬಿತ್ತರಿಸಿದ ಹಿನ್ನಲೆ ಸ್ವಯಂ ಪ್ರೇರಿತ ದೂರು ಕೂಡ ದಾಖಲಾಗಿತ್ತು. ಹೀಗಾಗಿ, ಇಂದು ಮುಂಜಾನೆ ಶಶಿಧರ್ ಕೋಸಂಬೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಕಟ್ಟಡದ ಸ್ಥಿತಿ ನೋಡಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ದೇವರಾಜ್ ಅರಸ್ ಹಿಂದುಳಿದ ಇಲಾಖೆಯ ವತಿಯಿಂದ ಹೊಸ ಕಟ್ಟಡ ಆಯ್ಕೆಯಾಗಿದ್ದು, ಕುರುಗೋಡು ನಗರದಲ್ಲಿ ಇರುವ ಸಮುದಾಯ ಭವನಕ್ಕೆ ತಾತ್ಕಾಲಿಕವಾಗಿ ಶಿಫ್ಟ್‌ ಮಾಡಿದರು.

6 ಎಕರೆ ಪ್ರದೇಶದಲ್ಲಿ ನೂತನ ಕಟ್ಟಡ

ಗೆಣಿಕೇಹಾಳ್ ಗ್ರಾಮದಲ್ಲಿ ಈಗಾಗಲೇ 6 ಎಕರೆ ಪ್ರದೇಶದಲ್ಲಿ ನೂತನ ಕಟ್ಟಡ ಆದಷ್ಟು ಬೇಗ ನಿರ್ಮಾಣ ಮಾಡುವುದಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಭರವಸೆ ನೀಡಿದರು. ಇನ್ನು, ಪವರ್‌ ಟಿವಿ ಕಾರ್ಯವನ್ನ ಶಶಿಧರ್ ಕೋಸಂಬೆ ಶ್ಲಾಘಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments