Friday, August 29, 2025
HomeUncategorizedದಶಕಗಳಿಂದ ಬಾಕಿ ಉಳಿದಿದ್ದ ಕೆಲಸವನ್ನು ನಿಮ್ಮ ಮಗ ಪೂರ್ಣಗೊಳಿಸಿದ್ದಾನೆ : ಪ್ರಧಾನಿ ಮೋದಿ

ದಶಕಗಳಿಂದ ಬಾಕಿ ಉಳಿದಿದ್ದ ಕೆಲಸವನ್ನು ನಿಮ್ಮ ಮಗ ಪೂರ್ಣಗೊಳಿಸಿದ್ದಾನೆ : ಪ್ರಧಾನಿ ಮೋದಿ

ಬೆಂಗಳೂರು : ಇತ್ತೀಚೆಗಷ್ಟೇ ಲೋಕಸಭಾ ಮತ್ತು ವಿಧಾನಸಭೆಯಲ್ಲಿ ಶೇ.33ರಷ್ಟು ಸ್ಥಾನಗಳನ್ನು ಮೀಸಲಿಡುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದಶಕಗಳಿಂದ ಬಾಕಿ ಉಳಿದಿದ್ದ ಈ ಕೆಲಸವನ್ನು ನಿಮ್ಮ ಸಹೋದರ ಹಾಗೂ ನಿಮ್ಮ ಮಗ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಉತ್ತರಾಖಂಡದ ಪಿಥೋರಗಢದಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ದೇಶದ ದೂರದ ಮೂಲೆಗಳಲ್ಲಿ ವಾಸಿಸುವ ಜನರ ಬಗ್ಗೆಯೂ ನಾವು ಚಿಂತಿಸುತ್ತೇವೆ. ಆದ್ದರಿಂದ ಕೇವಲ 5 ವರ್ಷಗಳಲ್ಲಿ ದೇಶದ 13.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದರು.

ಭಾರತ ಬಡತನ ನಿರ್ಮೂಲನೆ ಮಾಡಬಲ್ಲದು ಎಂಬುದಕ್ಕೆ ಈ 13.5 ಕೋಟಿ ಜನ ಉದಾಹರಣೆ. ಈ ಹಿಂದೆ ಬಡತನ ನಿರ್ಮೂಲನೆ ಎಂಬ ಘೋಷವಾಕ್ಯವನ್ನು ನೀಡಲಾಗಿತ್ತು. ನಾವೆಲ್ಲರೂ ಒಟ್ಟಾಗಿ ಬಡತನ ನಿರ್ಮೂಲನೆ ಮಾಡುತ್ತೇವೆ. ನಾವು ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇವೆ ಹಾಗೂ ನಮ್ಮ ಕೈಲಾದಷ್ಟು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ವಿಶ್ವವೇ ನಮ್ಮತ್ತ ನೋಡುತ್ತಿದೆ

ಇಂದು ನಮ್ಮ ತ್ರಿವರ್ಣ ಧ್ವಜವು ಪ್ರತಿಯೊಂದು ಪ್ರದೇಶ ಹಾಗೂ ಪ್ರತಿಯೊಂದು ಮೈದಾನದಲ್ಲಿ ಎತ್ತರಕ್ಕೆ ಹಾರುತ್ತಿದೆ. ನಮ್ಮ ಚಂದ್ರಯಾನ-3 ಜಗತ್ತಿನ ಯಾವುದೇ ದೇಶ ತಲುಪಲು ಸಾಧ್ಯವಾಗದ ಸ್ಥಳಕ್ಕೆ ತಲುಪಿದೆ. ಭಾರತವು ಚಂದ್ರಯಾನ-3 ಇಳಿದ ಸ್ಥಳಕ್ಕೆ ಶಿವ-ಶಕ್ತಿ ಅಂತ ಹೆಸರಿಡಲಾಗಿದೆ. ಇಂದು ವಿಶ್ವವು ಭಾರತದ ಶಕ್ತಿಯನ್ನು ಬಾಹ್ಯಾಕಾಶದಲ್ಲಿ ಮಾತ್ರವಲ್ಲದೆ ಕ್ರೀಡೆಯಲ್ಲೂ ನೋಡುತ್ತಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಇತಿಹಾಸದ ಎಲ್ಲಾ ದಾಖಲೆಗಳನ್ನು ಮುರಿದಿದೆ. ಇದೇ ಮೊದಲ ಬಾರಿಗೆ ಭಾರತದ ಕ್ರೀಡಾಪಟುಗಳು 100ಕ್ಕೂ ಹೆಚ್ಚು ಪದಕ ಗೆದ್ದ ದಾಖಲೆ ಬರೆದಿದ್ದಾರೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments