ಹಾವೇರಿ : ಬರಗಾಲದ ನಡುವೆಯು ತಾಲೂಕಿನ ಕೆರೆಗೆ ಬಾಗಿನ ಅರ್ಪಣೆ ಮಾಡಿದ ಶಾಸಕ ಯಬಿ ಬಣಕಾರ.
ರಾಜ್ಯದಲ್ಲಿ ಮಳೆ ಕಡಿಮೆಯಾದ ಹಿನ್ನೆಲೆ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮದಮಾಸೂರ ಕೆರೆಗೆ, ಹಿರೇಕೆರೂರು ಶಾಸಕ ಯಬಿ ಬಣಕಾರ ಅವರ ನೇತೃತ್ವದಲ್ಲಿ ಇಂದು ಬಾಗಿನ ಅರ್ಪಣೆ ಮಾಡಿದರು. ಅಷ್ಟೇ ಅಲ್ಲದೆ ಶಾಸಕರ ಜೊತೆ ತಾಲೂಕಿನ ಸ್ತ್ರೀಯರು ಹಾಗೂ ಮಾಜಿ ಶಾಸಕ ಬನ್ನಿಕೊಡ ಸೇರಿದಂತೆ ಇತರರು ಬಾಗಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದನ್ನು ಓದಿ : ಕೋಳಿ ಫಾರಂ ಗೆ ನುಗ್ಗಿದ ಚಿರತೆ
ಬಾಗಿನ ಅರ್ಪಣೆ ಮಾಡಿದ ಬಳಿಕ ಶಾಸಕ ಯುಬಿ ಬಣಕಾರ ಮಾಧ್ಯಮದವರ ಜೊತೆ ಮಾತಾಡಿದರು. ನಮ್ಮ ರಾಜ್ಯದಲ್ಲಿ ಮುಂಗಾರು ಮಳೆ ಕಡಿಮೆಯಾಗಿದೆ. ಹಾಗೂ ಇದರಿಂದ ರೈತ ಬೆಳೆಗೆ ನೀರಿನ ಸಮಸ್ಯೆ ಕೂಡ ಹೆಚ್ಚಾಗಿದ್ದು, ಮದಮಾಸೂರ ಕೆರೆ ಹಾಗೂ ತಾಲೂಕಿನ ಕುಮದ್ವತಿ ನದಿಗೆ ಬಾಗಿನ ಅರ್ಪಣೆ ಮಾಡಿದ್ದೇವೆ.
ತಾಲೂಕಿನ ಜನರಿಗೆ ನೀರಿನ ಸಮಸ್ಯೆಯಾಗದಂತೆ ನಮ್ಮ ಸರ್ಕಾರ ಯೋಜನೆ ಕೂಡ ನೀಡುತ್ತೆ. ಅಷ್ಟೇ ಅಲ್ಲ ಸಿಎಂ ಬಳಿ ಮಾತಾಡಿ ಕೆರೆ ಅಭಿವೃದ್ಧಿಗೆ ವಿಶೇಷ ಅನುದಾನ ಕೊಡುವಂತೆ ಮಾಡುತ್ತೇವೆ ಎಂದರು. ಬಳಿಕ ನಮ್ಮ ಕಾಲದಲ್ಲಿಯೇ ಕೆರೆ ಅಭಿವೃದ್ಧಿಯಾಗುತ್ತದೆ ಎಂದು ಬಿಸಿ ಪಾಟೀಲ್ಗೆ ಪರೋಕ್ಷವಾಗಿ ಯಬಿ ಬಣಕಾರ್ ಮಾತಲ್ಲೇ ಟಾಂಗ್ ಕೊಟ್ಟಿದ್ದಾರೆ.


