ಆಂಧ್ರ ಪ್ರದೇಶ; ಇಂದು ಮುಂಜಾನೆ ವಿಶಾಖಪಟ್ಟಣಂನ ಜ್ಞಾನಪುರಂನಲ್ಲಿ ಮಹಿಳಾ ಕ್ರಿಕೆಟ್ ತಂಡದ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ.
ಈ ಅಪಘಾತದಲ್ಲಿ 4 ಆಟಗಾರರು ಮತ್ತು ಕೋಚ್ ಗಾಯಗೊಂಡಿದ್ದಾರೆ. ಎಲ್ಲರನ್ನು ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಬಳಿಕ ಅವರು ಇಂದು ಸಂಜೆ ಬರೋಡಕ್ಕೆ ಹೋದರು ಎಂದು ವಿಶಾಖಪಟ್ಟಣಂ ಪೊಲೀಸರು ಹೇಳಿದ್ದಾರೆ.

ಘಟನೆ ನಂತರ ಪಂದ್ಯದ ಕುರಿತು ಮಾತನಾಡಿದ ಅವರು ಮಹಿಳಾ ಕ್ರಿಕೆಟಿಗರು, ಟಿ20 ಟ್ರೋಫಿಗಾಗಿ ಬರೋಡಾ ಮತ್ತು ಸೌರಾಷ್ಟ್ರ ತಂಡಗಳು ಅಕ್ಟೋಬರ್ 20 ರಂದು ಡಾ.ಪಿ.ವಿ.ಜಿ ರಾಜು ಎಸಿಎ ಕ್ರೀಡಾ ಸಂಕೀರ್ಣ ವಿಜಯನಗರಂ (ಆಂಧ್ರಪ್ರದೇಶ) ಸೆಣಸಾಟ ನಡೆಸಿದ್ದವು. ಆ ಪಂದ್ಯದಲ್ಲಿ ಬರೋಡಾ ಮಹಿಳಾ ಕ್ರಿಕೆಟ್ ತಂಡ 7 ವಿಕೆಟ್‌ಗಳಿಂದ ಗೆದ್ದಿತ್ತು.
ವಿಶಾಖಪಟ್ಟಣಂನ ತಾಟಿಚೆಟ್ಲಪಾಲೆಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆಯಂತೆ. ಮಾಹಿತಿ ಪಡೆದ ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.


