Wednesday, September 17, 2025
HomeUncategorized'ಬಿಎಸ್​ವೈ ಬದಲಾಗ್ತಾರೆ ನಾನೇ ಮುಂದಿನ ಸಿಎಂ'..!

‘ಬಿಎಸ್​ವೈ ಬದಲಾಗ್ತಾರೆ ನಾನೇ ಮುಂದಿನ ಸಿಎಂ’..!

ವಿಜಯಪುರ: ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಅಂತಾ ಬಿಜೆಪಿ ನಾಯಕರು ಆಗಾಗ ಸ್ಪಷ್ಟೀಕರಣ ಕೊಡ್ತಾನೆ ಇದ್ದಾರೆ. ಆದರೆ, ಹೈಕಮಾಂಡ್‌ ನಾಯಕರು ರಾಜ್ಯಕ್ಕೆ ಭೇಟಿ ಕೊಡ್ತಾರೆ ಅಂತ ಗೊತ್ತಾದಗಲೆಲ್ಲಾ, ರಾಜ್ಯದ ಕೆಲವು ಬಿಜೆಪಿ ನಾಯಕರು ದ್ವಂದ್ವ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ತಣ್ಣಗಾಗಿದ್ದ ಸಿಎಂ ಬದಲಾಣೆ ವಿಚಾರ, ಮತ್ತೆ ಮುನ್ನೆಲೆಗೆ ಬಂದಿದೆ. ಒಂದೆಡೆ ಯಡಿಯೂರಪ್ಪ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಅವರ ಬದಲಾವಣೆ ಇಲ್ಲ ಅಂತಾ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳುತ್ತಿದ್ದಾರೆ.

ಆದರೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಹೊಸ ಬಾಂಬ್​​ ಸಿಡಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ. ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ಐತಿಹಾಸಿಕ ಬದಲಾವಣೆಗಳು ಆಗಲಿದ್ದು, ಈ ಸಂದರ್ಭದಲ್ಲಿ ಸೂರ್ಯ ಪಥ ಬದಲಿಸಿ ಉತ್ತರ ಪಥದಿಂದ ಬರುತ್ತಾನೆ. ಈ ವೇಳೆ ಉತ್ತರ ಕರ್ನಾಟಕಕ್ಕೆ ಉತ್ತರಾಯಣ ಆಗಲಿದೆ ಎಂದು ಹೇಳುವ ಮೂಲಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಯತ್ನಾಳ್​, ಮೇಲಿಂದ ಮೇಲೆ ವಿವಾದಾತ್ಮಕ ಮಾತುಗಳನ್ನು ಆಡುತ್ತಿದ್ದು, ಶಾಸಕನ‌ ವಿರುದ್ಧ ಕಮಲ ‌ನಾಯಕರು‌ ಗರಂ ಆಗಿದ್ದಾರೆ. ಯತ್ನಾಳ ವಿರುದ್ಧ ಕಿಡಿ ಕಾರಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಯತ್ನಾಳ್​​ ಒಬ್ಬ ಸಾಮನ್ಯ ಶಾಸಕ ನಮ್ಮ ‌ಪಕ್ಷದ ಹೈಕಮಾಂಡ್​ ಅಲ್ಲ. ಈ ರೀತಿ ಬಾಯಿಗೆ ಬಂದದಂತೆ ಮಾತನಾಡಿದರೆ ಪಕ್ಷಕ್ಕೆ ಶೋಭೆ ತರುವುದಿಲ್ಲ. ಎಲ್ಲವನ್ನ ಹೈಕಮಾಂಡ್​​ ಗಮನಿಸುತ್ತಿದೆ. ಯತ್ನಾಳ್​​ ಇದೇ ತರಹ ನಾಲಗೆ ಹರಿಬಿಟ್ಟರೆ ಅವರ ರಾಜಕೀಯ ಭವಿಷ್ಯಕ್ಕೆ ಒಳ್ಳೆಯದಲ್ಲ ಅಂತ ಎಚ್ಚರಿಕೆ ನೀಡಿದರು.

ಸಚಿವ ಸದಾನಂದ ಗೌಡ ಮಾತನಾಡುತ್ತಿದ್ದಂತೆ ತಿರುಗೇಟು ನೀಡಿದ ಯತ್ನಾಳ್, ಸದಾನಂದಗೌಡರು ಒಳ್ಳೆಯ ಸಲಹೆ ಕೊಟ್ಟಿದ್ದಾರೆ. ನಾನೊಬ್ಬ ಸಾಮಾನ್ಯ ಶಾಸಕ, ಸೇವಕನಾಗಿದ್ದೇನೆ. ನಾನು ರಾಷ್ಟ್ರೀಯ ನಾಯಕ ಎಂದು ಎಲ್ಲೂ ಹೇಳಿಕೊಂಡಿಲ್ಲ. ಇಷ್ಟು ದೊಡ್ಡ ಜ್ಞಾನ, ವಿಚಾರ ತಿಳಿಸಿಕೊಟ್ಟಿದ್ದಕ್ಕಾಗಿ ಕೃತಜ್ಞತೆಗಳು. ನಾನು ಸ್ವಯಂ ಘೋಷಿತ ರಾಷ್ಟ್ರೀಯ ನಾಯಕನೂ ಅಲ್ಲ. ನಾನು ಸಾಮಾನ್ಯ ಶಾಸಕನಾಗಿದ್ದು, ಜನರಿಂದ ಜನರಿಗೋಸ್ಕರ ಇದ್ದೇನೆ. ನಮಗೆ ಯಾರದ್ದೂ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಯತ್ನಾಳ್​ ಕಿಡಿ ಕಾರಿದರು.

ಒಟ್ಟಿನಲ್ಲಿ, ಸದಾ ಒಂದಿಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡಿ‌ ಸುದ್ದಿಯಾಗುತ್ತಿರುವ ಶಾಸಕ ಯತ್ನಾಳ್​​, ಮತ್ತೆ ಹೊಸ ಬಾಂಬ್​ ಸಿಡಿಸಿದ್ದಾರೆ. ಆದರೆ ಇತ್ತ ಸಿಎಂ ಬದಲಾವಣೆ ವಿಚಾರವೂ ಗುಸುಗುಸು ಶುರುವಾಗಿದ್ದು, ಇದು ಎಲ್ಲಿಗೆ ಹೋಗಿ ನಿಲ್ಲುತ್ತೆ ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments