Friday, September 5, 2025
HomeUncategorizedಮಸ್ ಜಿದ್ ಎ ಅಲ್ ಮಸೀದಿಯನ್ನ ಡೆಮಾಲಿಷನ್ ಮಾಡಲು BBMPಯಿಂದ ನೋಟೀಸ್

ಮಸ್ ಜಿದ್ ಎ ಅಲ್ ಮಸೀದಿಯನ್ನ ಡೆಮಾಲಿಷನ್ ಮಾಡಲು BBMPಯಿಂದ ನೋಟೀಸ್

ಬೆಂಗಳೂರು : ಚಾಮರಾಜಪೇಟೆ ಮೈದಾನದ ಕಿಚ್ಚು ಆರುವ ಮುನ್ನವೇ ಈಗ ಮತ್ತೊಂದು ಕಿಚ್ಚು ಶುರುವಾಗಿದೆ. ಮಸ್ ಜಿದ್ ಎ ಅಲ್ ಖುಬ ಎಂಬ ಮಸೀದಿಯನ್ನ ಡೆಮಾಲಿಷನ್ ಮಾಡಲು ಬಿಬಿಎಂಪಿ ಯಿಂದ ನೋಟೀಸ್ ನೀಡಲಾಗಿದೆ.

ವಿಜಯನಗರದಲ್ಲಿರುವ ಮಸ್ ಜಿದ್ ಎ ಅಲ್ ಖುಬ ಮಸೀದಿ, ಮುಸ್ಲಿಂವರು ಇಲ್ಲಿ ನಮಾಜ್ ಮಾಡ್ತಾರೆ ಇಂತಹ ನಮಾಜ್ ಮಾಡುವ ಈ ಕಟ್ಟಡವನ್ನ ಈಗ ಡೆಮಾಲಿಷನ್ ಮಾಡಲು ಬಿಬಿಎಂಪಿ ನೋಟೀಸ್ ನೀಡಿದ್ದಾರೆ. ಐದು ಅಡಿ ಪ್ಯಾಸೇಜ್ ನ ಒತ್ತುವರಿ ಮಾಡ್ಕೊಂಡು ಕಟ್ಟಡಲಾಗಿದೆ. ಈಗ ಒತ್ತುವರಿ ಮಾಡಿ ನಿರ್ಮಿಸಿರುವ ಭಾಗವನ್ನ ತೆರವು ಮಾಡಿ ವಶಕ್ಕೆ ಪಡೆಯಲು ಪ್ರಾದೇಶಿಕ ಆಯುಕ್ತರು ಬಿಬಿಎಂಪಿಗೆ ಆದೇಶವನ್ನು ನೀಡಿದ್ದಾರೆ.

ಇನ್ನು, ಆದೇಶದ ಅನುಸಾರ ಬಿಬಿಎಂಪಿ ಮಸೀದಿಗೆ ಡೆಮಾಲಿಷನ್ ಆರ್ಡರ್ ನೀಡಿದ್ದು, ಮಸ್ ಜಿದ್ ಎ ಅಲ್ ಖುಬ ಮಸೀದಿಯ ಮುಖ್ಯಸ್ಥರಿಗೆ ಬಿಬಿಎಂಪಿ ನೋಟೀಸ್ ಜಾರಿ ಮಾಡಿದ್ದಾರೆ. ನಿವೇಶನ ಸಂಖ್ಯೆ13 ಹಾಗೂ 15 ರಲ್ಲಿ ಮಸೀದಿ ನಿರ್ಮಾಣ ಮಾಡಿದ್ದು, ನಿವೇಶನ ಸಂಖ್ಯೆ13 ರ ಮಾಲೀಕರಾಗಿದ್ದ ಪಿ ಬಾಷಾ ಒಂದು ಟ್ರಸ್ಟ್ ಗೆ ಬರೆದುಕೊಟ್ಟಿದ್ದಾರೆ. ನಂತರ ನಿವೇಶನ ಸಂಖ್ಯೆ15 ರ ಮಾಲೀಕರು ಅಮೀನಾ ಎಂಬುವವರು ಕೂಡಾ ನಿವೇಶನವನ್ನ ಮಸೀದಿಗೆ ನೀಡಿದ್ದಾರೆ‌ ಈ ಎರಡು ನಿವೇಶನಗಳನ್ನ ಒಂದುಗೂಡಿಸಿ ಮಸೀದಿ ನಿರ್ಮಾಣ ಮಾಡಲಾಗಿದೆ.

ಆದ್ರೆ, ಎರಡು ಸೈಟ್ ಗಳ ಮಧ್ಯೆ ನಿವೇಶನ ಸಂಖ್ಯೆ14 ಕೂಡಾ ಇತ್ತಂತೆ. ಅದನ್ನ ಒತ್ತುವರಿ ಮಾಡ್ಕೊಂಡು ಮಸೀದಿ ನಿರ್ಮಾಣ ಮಾಡಲಾಗಿತ್ತು. ನಿವೇಶನ ಸಂಖ್ಯೆ 14 ,5.5 ಅಡಿ ಅಗಲ ಹಾಗೂ 45 ಅಡಿ ಉದ್ದವಿತ್ತು. ಅದರನ್ನ ಸಾರ್ವಜನಿಕರ ಓಡಾಟಕ್ಕೆ ಪ್ಯಾಸೇಜ್ ಇತ್ತಂತೆ. ಅದನ್ನ ಒತ್ತುವರಿ ಮಾಡಿ ಮಸೀದಿ ನಿರ್ಮಾಣ ಮಾಡಲಾಗಿದೆ. ಆದ್ರೆ ಇದಕ್ಕೆ ಹಿಂದೆ ಬಿಬಿಎಂಪಿ ಖಾತಾ ಕೂಡಾ ಮಾಡಿಕೊಟ್ಟಿತ್ತು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ವಾದ ಪ್ರತಿವಾದಗಳು ನಡೆದು ಅಂತಿಮ ಆದೇಶ ಹೊರಡಿಸಲಾಗಿದೆ.

ಅದಲ್ಲದೇ, ನಿವೇಶನ ಸಂಖ್ಯೆ 14 ರ ಐದು ಅಡಿ ಜಾಗ ಪಾಲಿಕೆ ಸ್ವತ್ತೆಂದು ಘೋಷಿಸಿದ್ದು. ಸಾರ್ವಜನಿಕರ ಸ್ವತ್ತೆಂದು ಘೋಷಣೆ ಮಾಡಿದ್ದು ತಕ್ಷಣ ನಿಯಮಾನುಸಾರವಾಗಿ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿಗೆ ಪ್ರಾದೇಶಿಕ ಆಯುಕ್ತರು ಆದೇಶ ಹೋರಡಿಸಿದ್ದು, ಅದರಂತೆ ಬಿಬಿಎಂಪಿ ಕೂಡಾ ಮಸೀದಿಗೆ ಡೆಮಾಲಿಷನ್ ನೋಟೀಸ್ ಜಾರಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments