Wednesday, September 17, 2025
HomeUncategorizedಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ : ಮುರುಗೇಶ್ ನಿರಾಣಿ

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ : ಮುರುಗೇಶ್ ನಿರಾಣಿ

ಕಲಬುರಗಿ : ಕಾಂಗ್ರೆಸ್, ಎನ್.ಸಿ.ಪಿ, ಶಿವಸೇನೆ ಮೂರು ಸೇರಿ ಸರ್ಕಾರ ಮಾಡಿರುವುದೇ ಒಂದು ಅನೈತಿಕ ಎಂದು ಕಲಬುರಗಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಮಹಾರಾಷ್ಟ್ರ ರಾಜಕೀಯ ಅಸ್ಥಿರತೆ ವಿಚಾರಕ್ಕೆ ನಿರಾಣಿ ಪ್ರತಿಕ್ರಿಯೆ ನೀಡಿದ್ದು, ಅವರಾಗೇ ನಮ್ಮ ಬಳಿ ಬಂದ್ರೆ ಸುಮ್ಮನೆ ಕೂಡಲು ಬಿಜೆಪಿ ಸನ್ಯಾಸಿಗಳ ಪಕ್ಷ ಅಲ್ಲ. ಕಾಂಗ್ರೆಸ್, ಎನ್.ಸಿ.ಪಿ, ಶಿವಸೇನೆ ಮೂರು ಸೇರಿ ಸರ್ಕಾರ ಮಾಡಿರುವುದೇ ಒಂದು ಅನೈತಿಕ. ಶಿವಸೇನ ಜೊತೆ ನಮ್ಮದು ಹಳೆಯ ಸಂಬಂಧ 25 ವರ್ಷಗಳಿಂದ ನಾವು ಒಟ್ಟಿಗೆ ಇದ್ದೆವು ಎಂದರು.

ಅದಲ್ಲದೇ, ಈಗಾಗಲೇ ಶಿವಸೇನೆಯ ಅತಿ ಹೆಚ್ಚು ಶಾಸಕರು ಸರಕಾರದಿಂದ ಹೊರಗಡೆ ಬಂದಿದ್ದಾರೆ. ಇವರೆಲ್ಲ ಬಿಜೆಪಿ ಕಡೆ ಬರ್ತಾರೆ ಎನ್ನುವ ವಿಶ್ವಾಸ ಇದೆ. ನಿಶ್ಚಿತವಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈಗಿರುವ ಸರ್ಕಾರ ಬಂದ ನಂತರ ಮಹಾರಾಷ್ಟ್ರದಲ್ಲಿ ಸಂಪೂರ್ಣ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಎಲ್ಲರೂ ಬೇಸತ್ತು ಬಿಜೆಪಿ ನೇತೃತ್ವದಲ್ಲಿ ಸರ್ಕಾರ ಇರುವುದೇ ಮುಖ್ಯ ಎನ್ನುತ್ತಿದ್ದಾರೆ ಆದರೆ ಈ ಬಿಕ್ಕಟ್ಟಿನಲ್ಲಿ ಯಾವುದೇ ರೀತಿಯಿಂದ ಬಿಜೆಪಿ ಕೈವಾಡ ಇಲ್ಲ ಎಂದು ಹೇಳಿದರು.

ಇನ್ನು, ಅವರವರ ಕಚ್ಚಾಟದಲ್ಲಿ ಅಲ್ಲಿರುವ ಶಾಸಕರು ನಮ್ಮ ಕಡೆ ಬರುತ್ತಿದ್ದಾರೆ. ಅವರಗೆ ನಮ್ಮ ಕಡೆ ಬಂದಾಗ ಸರ್ಕಾರ ರಚನೆ ಮಾಡಿ ಒಳ್ಳೆ ಆಡಳಿತ ಕೊಡಲು ಬಿಜೆಪಿ ಚಿಂತನೆ ಮಾಡುತ್ತದೆ. ಅವರಾಗೇ ನಮ್ಮತ್ರ ಬಂದು ಸರ್ಕಾರ ಮಾಡಿ ಎಂದಾಗ ನಾವು ಸುಮ್ಮನೆ ಕೂಡಲು ಸನ್ಯಾಸಿಗಳ ಪಾರ್ಟಿ ಅಲ್ಲ ಇದು. ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಮಹಾರಾಷ್ಟ್ರದಲ್ಲಿ ಕೂಡ ಒಳ್ಳೆಯ ಆಡಳಿತ ನೀಡುವ ಬಿಜೆಪಿ ಸರ್ಕಾರ ತರುತ್ತೇವೆ. ನಾವೇನಾದರೂ ಅವರನ್ನು ಆಪರೇಷನ್ ಮಾಡಿ, ಕಿಡ್ನಾಪ್ ಮಾಡಿದ್ದೇವಾ ? ಅವರೇನು ಚಿಕ್ಕಮಕ್ಕಳಾ ? ಅವರೇ ಒಟ್ಟಾಗಿ ಹೋಗಿರುವಾಗ ನಮ್ಮ ಮೇಲೆ ಬ್ಲೇಮ್ ಮಾಡುವುದು ಸರಿಯಲ್ಲ ಎಂದರು.

RELATED ARTICLES
- Advertisment -
Google search engine

Most Popular

Recent Comments