Saturday, September 13, 2025
HomeUncategorizedನಿವೃತ್ತ ಅಧಿಕಾರಿಯಿಂದ ವಿಭಿನ್ನ ಹಣ್ಣು ಮಾರಾಟ

ನಿವೃತ್ತ ಅಧಿಕಾರಿಯಿಂದ ವಿಭಿನ್ನ ಹಣ್ಣು ಮಾರಾಟ

ಚಿಕ್ಕಬಳ್ಳಾಪುರ : ಗೌರಿಬಿದನೂರು ತಾಲೂಕು ಇಡಗೂರು ಗ್ರಾಮದ ನಿವೃತ್ತ ಬ್ಯಾಂಕ್ ಅಧಿಕಾರಿ ಎನ್. ಓಬಳಪ್ಪ ಅವರು ಸಾವಯವ ಕೃಷಿ ಪದ್ದತಿಯಲ್ಲಿ ಮಾವು ಬೆಳೆದಿದ್ದು, ಗ್ರಾಹಕರಿಗೆ ಅನುಕೂಲಕರವಾದ ರೀತಿಯಲ್ಲಿ ಬೇನಿಶಾ, ಬಾದಾಮಿ, ಮಲ್ಲಿಕಾ ಸೇರಿ ಇನ್ನಿತರ ಮಾವಿನ ಹಣ್ಣುಗಳನ್ನು ಗ್ರಾಹಕರ ಕೈಗೆಟಕುವ ದರದಲ್ಲಿ, ತೋಟದಲ್ಲೇ ಗ್ರಾಹಕರಿಗೆ ತಾಜಾ ಹಣ್ಣುಗಳನ್ನು ಕೊಡ್ತಿದ್ದಾರೆ.

ಬ್ಯಾಂಕ್​ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಭೂಮಿಯ ಒಡಲಲ್ಲಿ‌ ಆಸರೆ ಬಯಸಿ ಹೋದ ಓಬಳಪ್ಪ, ತೋಟಗಾರಿಕೆ ಅಧಿಕಾರಿಗಳು ಹಾಗೂ ಪ್ರಗತಿಪರ ರೈತರ ಮಾರ್ಗದರ್ಶನದಲ್ಲಿ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಎರೆಹುಳು ಗೊಬ್ಬರ, ತಿಪ್ಪೆಗೊಬ್ಬರ ಸೇರಿದಂತೆ ಪಕ್ಕಾ ದೇಸಿ‌ ಶೈಲಿಯಲ್ಲಿ ಮಾವು ಸೇರಿದಂತೆ ಬಾಳೆ, ತೆಂಗು, ಹುಣಸೆ ಸೇರಿ ತರಹೇವಾರು ಬೆಳೆಗಳನ್ನು ಸಾವಯವ ಶೈಲಿಯಲ್ಲಿ ಬೆಳೆದು ಜನರಿಗೆ ಸ್ವಾದ ಭರಿತ ಹಣ್ಣುಗಳನ್ನು ಕೊಡ್ತಿದ್ದಾರೆ.

ಮಾರುಕಟ್ಟೆಯಲ್ಲಿ ಸಿಗೋ‌ ಕ್ರಿಮಿನಾಶಕ ಹಣ್ಣುಗಳನ್ನು ಸೇವಿಸೋ ಬದಲು ಖುದ್ದು ತೋಟಕ್ಕೆ ಹೋಗಿ ಕಡಿಮೆ ಬೆಲೆಗೆ ತಾಜಾ ಮಾವಿನ ಹಣ್ಣುಗಳನ್ನು ಖರೀದಿಸಿ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.

ವೀಕೆಂಡ್​ಗಳಲ್ಲಿ ಮೋಜು ಮಸ್ತಿಗಂತ ಪಿಕ್​ನಿಕ್ ಸ್ಪಾಟ್​ಗಳಿಗೆ ತೆರಳುವ ಜನ ಇದೀಗ ರೈತರ ತೋಟಗಳಿಗೆ ಲಗ್ಗೆ ಇಡುತ್ತಿದ್ದಾರೆ. ಹಾಗೇ ತಾಜಾ ಸಾವಯವ ಮಾವಿನ ಹಣ್ಣು ನಿಮಗೂ ಬೇಕೆನಿಸಿದರೆ ಒಮ್ಮೆ ಕೃಷಿಕ ಓಬಳಪ್ಪ ಅವರ ತೋಟಕ್ಕೆ ಭೇಟಿ ಕೊಡಬಹುದು.

RELATED ARTICLES
- Advertisment -
Google search engine

Most Popular

Recent Comments