Wednesday, September 10, 2025
HomeUncategorizedರಾಜ್ಯ ಸರ್ಕಾರ ಭ್ರಮೆಯಲ್ಲಿದೆ: ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ

ರಾಜ್ಯ ಸರ್ಕಾರ ಭ್ರಮೆಯಲ್ಲಿದೆ: ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ

ಚಿತ್ರದುರ್ಗ: ಅನುದಾನಗಳನ್ನು ಕೊಟ್ಟು ಮಠವನ್ನು ಕೊಳ್ಳಬಹುದು ಎಂಬ ಭ್ರಮೆಯಲ್ಲಿದ್ದರೆ ಅದು ಯಾವುದೇ ಮಠಕ್ಕೆ ಅನ್ವಯಿಸಬಹುದು. ಆದರೆ ಪಂಚಮಸಾಲಿ ಪೀಠಕ್ಕೆ ಅಲ್ಲ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಸ್ವಾಮೀಜಿ ಜಯಮೃತ್ಯುಂಜಯ ಸ್ವಾಮೀಜಿ ಸರಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಚಿತ್ರದುರ್ಗದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಪತ್ರಿಕಾಗೋಷ್ಠಿಯನ್ನುವುದ್ದೇಶಿಸಿ ಮಾತನಾಡಿ, ಸರ್ಕಾರ 37.5 ಲಕ್ಷ ಅನುದಾನದ ಪತ್ರವನ್ನು ಸಿಎಂ ಯಡಿಯೂರಪ್ಪ ಅವರ ವಾಪಾಸ್ ನೀಡುತ್ತೇವೆ. ಇದು ಲಿಂಗಾಯಿತ ಮಠಗಳ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ತೆಗದುಕೊಂಡ ನಿರ್ಧಾರ. ನಮಗೆ ಅನುದಾನಕ್ಕಿಂತ 2ಎ ಮೀಸಲಾತಿ‌ ಮುಖ್ಯ. ನಮ್ಮ ಪಂಚಮಸಾಲಿ ಪೀಠ ಅನುದಾನಕ್ಕಾಗಿ ಯಾವತ್ತು ಕೈಯೊಡ್ಡಿಲ್ಲ. ಸಮಾಜದ ಹಿತವನ್ನು ಕಾಪಾಡುವ ಕೆಲಸ ಮಾಡಿದೆ. ಕೆಲ ಸಚಿವರು ನೀವು ಪಾದಯಾತ್ರೆಯನ್ನು ಕೈ ಬಿಟ್ಟರೆ ಮತ್ತಷ್ಟು ಅನುದಾನವನ್ನು ನೀಡುತ್ತೇವೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು.

ಆದರೆ ಕೂಡಲ ಸಂಗಮದ ಪಂಚಮಸಾಲಿ ಜಗದ್ಗುರು ಪೀಠಕ್ಕೆ 20-21 ಸಾಲಿಗೆ ಬಿಡುಗಡೆ ಮಾಡಿದ್ದ ಅನುದಾನ 37.5 ಲಕ್ಷ ಹಣದ ಪತ್ರವನ್ನು ವಾಪಾಸ್ಸು ಮಾಡುವ ಮೂಲಕ ಅನುದಾನ ವಾಪಾಸ್ಸು ನೀಡುತ್ತೆವೆ. ಮೀಸಲಾತಿ ಪಡೆಯುತ್ತೇವೆ ಎಂಬ ಅಭಿಯಾನವನ್ನು ಶುರು ಮಾಡುತ್ತೆವೆ. ಆದ್ದರಿಂದ ನಮಗೆ ಮೀಸಲಾತಿ‌ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅನುದಾನ ನೀಡುವುದರಿಂದ ಹೋರಾಟಕ್ಕೆ ಮತ್ತಷ್ಟು ಕಿಚ್ಚು ಬರುತ್ತದೆ. ಯತ್ನಾಳ್ ಸದನದ ಬಾವಿಗಿಳಿದು ಹೋರಾಟ ಮಾಡಿದ್ದಾರೆ. ನಮ್ಮ ಹೋರಾಟದ ಕಾವು ಚಿತ್ರದುರ್ಗದಿಂದ ಇನ್ನಷ್ಟು ಹೆಚ್ಚಾಗುತ್ತದೆ.

ಉತ್ತರ ಕರ್ನಾಟಕದ ರೈತರ ಬೆಳೆ ಪರಿಹಾರಕ್ಕೆ ಸಾರಿಗೆ ನೌಕರರ ಪರಿಹಾರಕ್ಕೆ ಇದನ್ನ ಬಳಸಿಕೊಳ್ಳಬೇಕು. ನಾವು ವಾಪಾಸ್ಸು ನೀಡಿದ ಹಣವನ್ನು ಬೇರೆ ಯಾವುದೇ ಗುಡಿ ಗುಂಡಾರ ಮಠಗಳಿಗೆ ನೀಡಬಾರದು ಎಂದು ಸರ್ಕಾರಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments