Wednesday, September 17, 2025
HomeUncategorized'ಮಾಜಿ ಸಿಎಂ ಸಿದ್ದರಾಮಯ್ಯ ಮಾತಿಗೆ ಸಿಟಿ ರವಿ ಟಾಂಗ್'

‘ಮಾಜಿ ಸಿಎಂ ಸಿದ್ದರಾಮಯ್ಯ ಮಾತಿಗೆ ಸಿಟಿ ರವಿ ಟಾಂಗ್’

ಚಿಕ್ಕಮಗಳೂರು: ಹನುಮ ಹುಟ್ಟಿದ್ದು ಗೊತ್ತಾ ಎಂಬ ಮಾಜಿ ಸಿಎಂ ಪ್ರಶ್ನೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸಿದ್ದು ಹೇಳಿಕೆಗೆ ಪ್ರತಿಕ್ರಿಸಿದ ಅವರು, ತಾಯಿ ಮಕ್ಕಳನ್ನ ಕರೆದು ಇವರೇ ನಿಮ್ಮ ತಂದೆ ಎಂದರೆ ನಂಬುತ್ತಾರೆ. ಯಾವ ಮಕ್ಕಳು ಕೂಡ ಸಾಕ್ಷಿ ಕೇಳಲ್ಲ. ಕೆಲವರು ಸಾಕ್ಷಿ ಕೇಳುವ ಮನಸ್ಥಿತಿಯ ಜನ ಇರ್ತಾರೆ. ಸಿದ್ದರಾಮಯ್ಯಗೆ ಸಾಕ್ಷಿ ಕೇಳುವ ಮನಸ್ಥಿತಿ ಇದ್ದರೆ ಅದು ಅವರ ದೋಷ. ನಂಬಿಕೆ ಎಲ್ಲವನ್ನೂ ಮೀರಿದ್ದು, ನಂಬಿಕೆಗಳ ಮೇಲೆ ಜಗತ್ತು ಇರೋದು. ಕೆಲವರಿಗೆ ಭಗವಂತ ಕಾಣಲ್ಲ, ಕೆಲವರಿಗೆ ಎಲ್ಲ ಕಡೆ ಕಾಣುತ್ತಾನೆ. ನೋಡುವ ದೃಷ್ಠಿ ಇರುವವರಿಗೆ ಭಗವಂತನನ್ನ ತೋರಿಸಬಹುದು, ನೋಡುವ ದೃಷ್ಠಿ ಇಲ್ಲದವರಿಗೆ ಎಲ್ಲಿ ನಿಂತರೂ ಭಗವಂತ ಕಾಣಲ್ಲ ಅಂತಾ ಸಿದ್ದರಾಮಯ್ಯರನ್ನ ಸಿ.ಟಿ ರವಿ ಕುಟುಕಿದರು. ಅವರ ತಂದೆ-ತಾಯಿಗೆ ದೇವರ ಮೇಲೆ ಶ್ರದ್ಧೆ ಇರೋ ಕಾರಣಕ್ಕೆ ಸಿದ್ದರಾಮಯ್ಯ ಅಂತಾ ದೇವರ ಹೆಸರಿಟ್ಟರು. ಆದರೆ, ಸಹವಾಸ ದೋಷದಿಂದ ಸಿದ್ದರಾಮಯ್ಯ ಕೆಟ್ಟಿದ್ದಾರೆ ಅಂತಾ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.

ನಿನ್ನೆ ಮೈಸೂರಿನ ಸ್ನೇಹಿತರ ಮನೆಯಲ್ಲಿ ಸಿದ್ದರಾಮಯ್ಯ ನಾಟಿ ಕೋಳಿ ಸಾರಿನ ಊಟ ಸವಿಯುವಾಗ, ಅಭಿಮಾನಿಯೊಬ್ಬ ಸರ್ ಇವತ್ತು ಹನುಮ ಜಯಂತಿ ನಾನ್ ವೆಜ್ ತಿನ್ತಾ ಇದ್ದೀರಲ್ಲ ಅಂತಾ ಪ್ರಶ್ನಿಸಿದರು. ಈ ವೇಳೆ ತಮ್ಮ ಅಭಿಮಾನಿಗಳಿಗೆ ಉತ್ತರ ನೀಡಿದ ಸಿದ್ದು, ಹನುಮ ಹುಟ್ಟಿದ್ದು ಯಾವಾಗ ಗೊತ್ತಾ ನಿನಗೆ ಅಂತ ಮರು ಪ್ರಶ್ನೇ ಕೇಳಿದರು.

ಸಚಿನ್ ಶೆಟ್ಟಿ  ಚಿಕ್ಕಮಗಳೂರು

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments