Friday, September 12, 2025
HomeUncategorizedಮಂಗಳೂರು ನಗರ ವ್ಯಾಪ್ತಿಯಲ್ಲಿ 'ನಿಷೇಧಾಜ್ಞೆ' ಜಾರಿಗೆ ಪೊಲೀಸ್ ಕಮೀಷನರ್ ಆದೇಶ..!

ಮಂಗಳೂರು ನಗರ ವ್ಯಾಪ್ತಿಯಲ್ಲಿ ‘ನಿಷೇಧಾಜ್ಞೆ’ ಜಾರಿಗೆ ಪೊಲೀಸ್ ಕಮೀಷನರ್ ಆದೇಶ..!

ಮಂಗಳೂರು : ಅಗಸ್ಟ್ 5 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯ ಭೂಮಿ ಪೂಜೆ ಹಿನ್ನೆಲೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಗೆ ಆದೇಶಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಆದೇಶವನ್ನ ಹೊರಡಿಸಿದ್ದು, ಆದೇಶದ ಅನ್ವಯ ಅಗಸ್ಟ್ 4 ರ ರಾತ್ರಿ 8 ಗಂಟೆಯಿಂದ ಅಗಸ್ಟ್ 6 ರ ಬೆಳಿಗ್ಗೆ 6 ಗಂಟೆ ವರೆಗೆ ಸೆಕ್ಷನ್ 144 ರ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈಗಾಗಲೇ ಹಿಂದೂ ಸಂಘಟನೆಗಳು ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿಕೊಂಡಿವೆ. ಅಲ್ಲದೇ ಅದೇ ದಿನ ಹಲವು ಸಂಘಟನೆಗಳು ಪ್ರತಿಭಟನೆಗೂ ತಯಾರಿ ನಡೆಸಿರುವ ಬಗ್ಗೆ ಮಾಹಿತಿಯಿದ್ದು, ಮತೀಯ ಗಲಭೆಗೆ ತಿರುಗದಂತೆ ಮುನ್ನೆಚ್ಚರಿಕಾ‌ ಕ್ರಮವಾಗಿ ನಿಷೇಧಾಜ್ಞೆಗೆ ಆದೇಶಿಸಲಾಗಿದೆ. ನಿಷೇಧಾಜ್ಞೆ ಸಮಯದಲ್ಲಿ 5 ಕ್ಕಿಂತ ಜಾಸ್ತಿ ಸಂಖ್ಯೆಯಲ್ಲಿ ಜನರು ಗುಂಪುಗೂಡದಂತೆ, ಸಭೆ-ಸಮಾರಂಭ, ಮೆರವಣಿಗಳು ನಡೆಸದಂತೆ ಹಾಗೂ ಮಾರಕಾಸ್ತ್ರ ಒಯ್ಯುವಿಕೆ ನಿಷೇಧ, ಪಟಾಕಿ ಸಿಡಿಸುವುದು ಹಾಗೂ ಪ್ರತಿಭಟನೆ ಮತ್ತು ಸಂಭ್ರಮಾಚರಣೆಗಳಿಗೂ ನಿರ್ಬಂಧ ವಿಧಿಸಿ ಆದೇಶಿಸಲಾಗಿದೆ‌.

ಇರ್ಷಾದ್ ಕಿನ್ನಿಗೋಳಿ, ಪವರ್ ಟಿವಿ, ಮಂಗಳೂರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments