Tuesday, September 2, 2025
HomeUncategorizedಹಾಪ್​ಕಾಮ್ಸ್​​ ಆನ್ ಲೈನ್ : ಮನೆಗೆ ತಲುಪುತ್ತೆ ಫ್ರೆಶ್ ವೆಜಿಟೆಬಲ್ಸ್

ಹಾಪ್​ಕಾಮ್ಸ್​​ ಆನ್ ಲೈನ್ : ಮನೆಗೆ ತಲುಪುತ್ತೆ ಫ್ರೆಶ್ ವೆಜಿಟೆಬಲ್ಸ್

ಮೈಸೂರು: ಕೊರೋನಾ ಭೀತಿಯ ನಡುವೆ ಖರೀದಿಗಾಗಿ ಮಾರ್ಕೆಟ್​​ಗೆ ಹೋಗೋದು ಕಷ್ಟವಾಗ್ತಿದೆ. ಹಣ್ಣು ತರಕಾರಿ ಬೇಕಂದ್ರೆ ಅನಿವಾರ್ಯವಾಗಿ ಹೋಗುವಂತ ಪರಿಸ್ಥಿತಿ ಬಂದಿದೆ.ಮಾರ್ಕೆಟ್​​ನಲ್ಲಿ ಹೆಚ್ಚಿನ ಜನ ಸೇರೋದ್ರಿಂದ ಕೊರೊನಾ ಸೋಂಕಿನ‌ ಭೀತಿ ಎದುರಾಗಿದೆ.ಮಾರ್ಕೆಟ್ ಗೆ ಹೋಗಲು ಜನ ಹೆದರ್ತಿದ್ದಾರೆ.ಇದಕ್ಕಾಗೇ ಮೈಸೂರಿನ‌ ಜನರಿಗಾಗಿ ಹಾಪ್ ಕಾಮ್ಸ್ ಪರಿಹಾರ ತಂದಿದೆ.ಹಾಪ್ ಕಾಮ್ಸ್ ಆನ್ ಲೈನ್​ನಲ್ಲಿ ಬುಕ್ ಮಾಡಿದ್ರೆ ತರಕಾರಿ ಹಾಗೂ ಹಣ್ಣು ಮನೆ ತಲುಪುತ್ತೆ. ಹಾಪ್ ಕಾಮ್​​ನ ಈ ವ್ಯವಸ್ಥೆಗೆ ಮೈಸೂರಿನ ಜನ ಫಿದಾ ಆಗಿದ್ದಾರೆ.

ಮೈಸೂರಿನಲ್ಲಿ ಕೊರೊನಾ ವೈರಸ್ ಹುಚ್ಚಾಪಟ್ಟೆ ಹರಡ್ತಾ ಇರೋದನ್ನ ಗಮನಿಸಿದ್ರೆ ಜನ ಸೇರೋ ಕಡೆ ಹೋಗೋಕ್ಕೆ ಭಯವಾಗುತ್ತೆ.ಅದ್ರಲ್ಲೂ ಹೆಚ್ಚಿನ ಜನ ಸೇರೋ ಜಾಗವಾದ ಮಾರ್ಕೆಟ್​​ಗೆ ಹೋಗೋದು ಅಂದ್ರೆ ಕಷ್ಟಾನೇ.ಹಾಗಿದ್ರೆ ತರಕಾರಿ ಹಣ್ಣುಗಳನ್ನ ಖರೀದಿ ಮಾಡ್ಬೇಕು ಅಂದ್ರೆ ಏನ್ ಮಾಡೋದು ಅಂತ ಯೋಚ್ನೇನಾ…? ಆ ಚಿಂತೆ ಬಿಡಿ, ಮೈಸೂರಿನ ತೋಟಗಾರಿಕೆ ಇಲಾಖೆ ಹಾಗೂ ಹಾಪ್ ಕಾಮ್ ಇದಕ್ಕಾಗೇ ಸಲ್ಯೂಷನ್ ತಂದಿದೆ. ಹಾಪ್ ಕಾಮ್ಸ್ ವತಿಯಿಂದ ಆಪ್ ಬಿಡುಗಡೆ ಆಗಿದೆ.HOPCOM online ಈ ಆಪ್​​ನ ಡೌನ್ ಲೋಡ್ ಮಾಡ್ಕೊಂಡು ಆನ್ ಲೈನ್ ನಲ್ಲಿ ಬುಕ್ ಮಾಡಿದ್ರೆ ತಾಜಾ ತಾಜಾ ತರಕಾರಿ ಹಾಗೂ ಹಣ್ಣುಗಳು ನಿಮ್ಮ ಮನೆ ತಲಪುತ್ತೆ.ಕೊರೊನಾ ಹಿನ್ನಲೆ ಸಾರ್ವಜನಿಕರ ಅನುಕೂಲಕ್ಕಾಗಿ ತಂದ ಈ ಆಪ್ ಸಖತ್ ವರ್ಕೌಟ್ ಆಗಿದೆ.ಈಗಾಗ್ಲೇ 1 ಸಾವಿರಕ್ಕೂ ಹೆಚ್ಚು ಮಂದಿ ಗ್ರಾಹಕರಾಗಿದ್ದಾರೆ.

ಆನ್ ಲೈನ್ ನಲ್ಲಿ ಬುಕ್ ಮಾಡಿದ್ರೆ ದುಬಾರಿ ಆಗಬಹುದು ಅಂತ ಅಂದ್ಕೋಬೇಕಿಲ್ಲ.ಮಾರುಕಟ್ಟೆ ದರಕ್ಕೆ ಕಾಂಪಿಟಿಟಿವ್ ರೇಟ್ ಇರುತ್ತೆ.ಪ್ರತಿದಿನ ತರಕಾರಿ ಹಣ್ಣು ದರ ಅಪ್ ಡೇಟ್ ಆಗ್ತಾ ಇರುತ್ತೆ.ರೈತರಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ತಲುಪಿಸುವ ಯೋಜನೆ ಇದಾಗಿದೆ.ರೈತರಿಗೂ ಉತ್ತಮ ಬೆಲೆ ಗ್ರಾಹಕರಿಗೂ ಕಡಿಮೆ ಬೆಲೆ.ಇಬ್ರಿಗೂ ಅನುಕೂಲವಾಗುವ ಸೌಲಭ್ಯ ಹಾಪ್ ಕಾಮ್ ನಿಂದ ಲಭ್ಯವಾಗಿದೆ.

HOPCOM online ಮೂಲಕ ತರಕಾರಿ ಹಣ್ಣು ಖರೀದಿ ಮಾಡಿರುವ ಗ್ರಾಹಕರು ಖುಷಿ ಆಗಿದ್ದಾರೆ.ಇದ್ರಿಂದ ಮಾರ್ಕೆಟ್ ಗೆ ಹೋಗಿ ಕೊರೊನಾ ಮೈಮೇಲೆ ಎಳೆದುಕೊಳ್ಳುವ ರಿಸ್ಕ್ ಕಡಿಮೆ ಆಗಿದೆ ಅಂತಾರೆ ಗ್ರಾಹಕರು.ಹಾಪ್ ಕಾಮ್ ನ ಉತ್ತಮ ಕೆಲಸವನ್ನ ಹುತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ.

ಹಾಪ್ ಕಾಮ್ ನಿಂದ ಬಿಡುಗಡೆಯಾದ ಆಪ್ ಗ್ರಾಹಕರಿಗೆ ಅನುಕೂಲವಾಗಿ ಪರಿಣಮಿಸಿದೆ. ಒಂದೇ ಕಂಡೀಷನ್ ಮಿನಿಮಮ್ 200 ರೂಪಾಯಿ ಮೌಲ್ಯದ ಆರ್ಡರ್ ಪ್ಲೇಸ್ ಮಾಡಬೇಕಿದೆ.ಮಾರ್ಕೆಟ್ ಗೆ ಹೋಗುವ ರಿಸ್ಕ್ ಗಿಂತ 200 ರೂ ಮೌಲ್ಯದ ಆರ್ಡರ್ ಪ್ಲೇಸ್ ಮಾಡೋದೇ ಸೇಫ್ ಅಲ್ವಾ…?

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments