Tuesday, September 9, 2025
HomeUncategorizedರೈತನ ಕೈಚಳಕದಿಂದ ಮೂಡಿಬಂತು ಅದ್ಭುತ ಹೃದಯದ ಗದ್ದೆ

ರೈತನ ಕೈಚಳಕದಿಂದ ಮೂಡಿಬಂತು ಅದ್ಭುತ ಹೃದಯದ ಗದ್ದೆ

ಚಿಕ್ಕಮಗಳೂರು :  ನಾವು, ನೀವೆಲ್ಲಾ ವಿದೇಶದ ಯಾವುದೋ‌ ಒಂದು ಪ್ರದೇಶವನ್ನು ನೋಡಿ ರೋಮಾಂಚನಗೊಳ್ಳುವಂತಹ ಪ್ರದೇಶವೊಂದು ನಮ್ಮ ಮಲೆನಾಡಿನಲ್ಲಿಯೇ ಮೈನೆರೆದುಕೊಂಡಿದೆ.ಆ ಜಾಗವನ್ನು ನೋಡಿದ್ರೆ ಅಯ್ಯೋ ಇದು ನಮ್ಮ ರಾಜ್ಯದಲ್ಲಿಯಾ ಅಂತಾ ಆಶ್ಚರ್ಯ ಪಡ್ತಿರಾಮತ್ತೆ ನಮ್ಮ ಮಲೆನಾಡ ಪ್ರಕೃತಿಯ ಸೊಬಗು ಯಾವುದಕ್ಕೆ ಕಡಿಮೆ ಅಲ್ವಾ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಳಸ ಬಳಿಯ ಸಂಸೆ ಸಮೀಪದ ಬಾಮಿಕೊಂಡ ಎಂಬ ಚಿಕ್ಕಹಳ್ಳಿಯ ಅತ್ಯದ್ಬುತ ಪ್ರಕೃತಿ ಸೊಬಗೊಂದು ಎಲ್ಲರ ಕಣ್ಮನ ಸೆಳೆಯುತ್ತಿದೆ. ಎತ್ತರವಾದ ಬೆಟ್ಟದ ಮೇಲಿನ ಕೆಸರು ರಾಶಿಯ ಮಧ್ಯೆ ಹಚ್ಚಹಸಿರಿನ ಹೃದಯಾಕಾರದ ಹಸಿರುರಾಶಿ ಎಲ್ಲರನ್ನು ಆಕರ್ಷಿಸುತ್ತಿದೆ.

ಹಲವು ವರ್ಷಗಳಿಂದ ಇಲ್ಲಿನ ಕೃಷಿಕ ಕೃಷ್ಣ ಎಂಬ ರೈತ ಕುಟುಂಬ ಈ ಬೆಟ್ಟದ ಸುತ್ತ ಕೃಷಿಯನ್ನು ಮಾಡುತ್ತಾ ಬಂದಿದ್ದಾರೆ. ಯಾವುದೇ ಯಂತ್ರೋಪಕರಣಗಳಿಲ್ಲದೆ ಗದ್ದೆಗಳನ್ನು ಸಿದ್ದ ಮಾಡಿ ಸೌಂದರ್ಯವನ್ನು ತುಂಬಿರುವುದು ನಿಜಕ್ಕೂ ಅದ್ಬುತವೇ ಸರಿ

ಯಾವುದೋ ದೇಶದ ಎತ್ತರವಾದ ಬೆಟ್ಟಗಳ ಮೇಲಿನ ಕೆಸರುಗದ್ದೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿ ವಾವ್ ಎಂತಹ ಸೌಂದರ್ಯ ಅಂತಾ ಕಣ್ತುಂಬಿ ಕೊಂಡಿರುತ್ತೇವೆ. ಆದರೆ ಮಲೆನಾಡಿನ ಈ ಸಂಸೆ ಎಂಬ ಅದ್ಬುತ ಫಾರಿನ್, ಈ ವೆರಗೂ ಯಾರ ಕಣ್ಣಿಗೂ ಬಿದ್ದಿಲ್ಲ. ಎತ್ತರವಾದ ಬೆಟ್ಟದ ಸುತ್ತಾ ಮೆಟ್ಟಿಲುಗಳ ರೀತಿ ಭತ್ತದ ಗದ್ದೆಗಳನ್ನು ಮಾಡಿ, ರೈತ ಸೌಂದರ್ಯವನ್ನು ಅದಕ್ಕೆ ತುಂಬಿದ್ದಾನೆ. ಸುತ್ತಲಿನ ಎತ್ತರದ ಬೆಟ್ಟಗುಡ್ಡಗಳು ತಂಪಾದ ಗಾಳಿ ಮತ್ತಷ್ಟು ಜೀವಕಳೆ ತುಂಬಿದೆ.

ಬೆಟ್ಟದ ಸುತ್ತಾ ಗದ್ದೆಯ ಶೃಂಗಾರ
ಸುಮಾರು ನಾಲ್ಕು ಏಕರೆ ಜಾಗದಲ್ಲಿ ಈ ಗದ್ದೆಯನ್ನು ಉಳುಮೆ ಮಾಡಲಾಗುತ್ತಿದೆ. ಬೆಟ್ಟದ ಸುತ್ತಲೂ ಉಳುಮೆಯನ್ನು ಮಾಡಿ ಭತ್ತ ನಾಟಿ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಸುತ್ತಲು ಉಳುಮೆ ಮಾಡಿ ಬೆಟ್ಟದ ಮೇಲ್ಬಾಗವನ್ನು ಹೃದಯಾಕಾರದಲ್ಲಿ ಹಸಿರು ಹುಲ್ಲನ್ನು ಹಾಗೆಯೇ ಬಿಡಲಾಗಿದೆ. ಇದು ಗದ್ದೆಯ ಕೆಸರಿನ ನಡುವೆ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಇನ್ನು ಒಂದು ಹಾಳಿಯಿಂದ ಮತ್ತೊಂದು ಹಾಳಿಗೆ ಬದುವಿನ ಮೇಲಿಂದ ನೀರು ಸುರಿಯುವ ದೃಶ್ಯ ಸಣ್ಣಸಣ್ಣ ಜಲಪಾತಗಳಂತೆ ಗೋಚರಿಸುತ್ತವೆ.

ಮೂಡಿಗೆರೆ ತಾಲ್ಲೂಕು ಕಳಸಾಸಿಂದ ಕುದುರೆಮುಖ ಮಾರ್ಗವಾಗಿ ಸಾಗಿದರೆ ಈ ಗ್ರಾಮ ಸಿಗುತ್ತದೆ. ಆದರೆ ಈ ಭತ್ತದ ಗದ್ದೆಯ ಸೌಂದರ್ಯ ಸವಿಯಲು ಸುಮಾರು 4 ಕಿ ಮೀ ಬೆಟ್ಟದ ಹಾದಿಯಲ್ಲಿ ನಡೆದುಕೊಂಡು ಹೋಗಬೇಕು. ಇದುವರೆಗೂ ಈ ಗ್ರಾಮದಲ್ಲಿ ಐದಾರು ಕುಟುಂಬಗಳು ವಾಸ ಮಾಡುತ್ತಿದ್ದು ನಗರದ ಸಂಪರ್ಕಕ್ಕೆ ಅವರಿಗೆ ಕಾಲು ನಡಿಗೆಯೇ ಆದಾರವಾಗಿದೆ.‌ಆದರೆ ಇಲ್ಲಿನ ಪ್ರಕೃತಿಯ ಸೊಬಗು ನೋಡಿದ್ರೆ ಎಂತಹ ಸುಸ್ತು ಸಹ ಮಾಯವಾಗುತ್ತೆ ಅಂತಾರೆ ಸ್ಥಳಕ್ಕೆ ಭೇಟಿ ನೀಡಿದವರು ತಮ್ಮ ಅನುಭವ ಹೇಳಿಕೊಂಡಿದ್ದಾರೆ…

ಸಚಿನ್ ಶೆಟ್ಟಿ ಚಿಕ್ಕಮಗಳೂರು…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments