Friday, August 29, 2025
HomeUncategorized13 ವರ್ಷದ ವಿದ್ಯಾರ್ಥಿ ಜೊತೆ ಶಿಕ್ಷಕಿ ಪರಾರಿ: 5 ತಿಂಗಳ ಗರ್ಭಿಣಿಯಾಗಿ ಪತ್ತೆ

13 ವರ್ಷದ ವಿದ್ಯಾರ್ಥಿ ಜೊತೆ ಶಿಕ್ಷಕಿ ಪರಾರಿ: 5 ತಿಂಗಳ ಗರ್ಭಿಣಿಯಾಗಿ ಪತ್ತೆ

ಅಹಮದಾಬಾದ್: ಗುಜರಾತ್‌ನ ಸೂರತ್‌ನಲ್ಲಿ ಶಿಕ್ಷಕಿಯೊಬ್ಬರು 13 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿ ಹೋಗಿರುವ ಘಟನೆ ನಡೆದಿದ್ದು. ಇದೀಗ 5 ತಿಂಗಳ ಗರ್ಭಿಣಿಯಾಗಿ ಶಿಕ್ಷಕಿ ಪತ್ತೆಯಾಗಿದ್ದಾರೆ. 13 ವರ್ಷದ ಅಪ್ರಾಪ್ತನೇ ಗರ್ಭಧಾರಣೆಗೆ ಕಾರಣ ಎಂದು ಶಿಕ್ಷಕಿ ಹೇಳಿಕೊಂಡಿದ್ದಾಳೆ.

ಏನಿದು ಘಟನೆ..!

ಗುಜರಾತಿನ ಸೂರತ್​ನಲ್ಲಿರುವ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದ ಶಿಕ್ಷಕಿ ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದರು. ಆದರೆ ಕಳೆದ ಒಂದು ವರ್ಷದಿಂದ ಈ ವಿದ್ಯಾರ್ಥಿ ಜೊತೆಗೆ ಶಿಕ್ಷಕಿ ಸಾಕಷ್ಟು ಆತ್ಮೀಯತೆ ಬೆಳೆಸಿದ್ದಳು. ಕಾಲಾನಂತರದಲ್ಲಿ ಇಬ್ಬರು ಸಾಕಷ್ಟು ಆತ್ಮೀಯತೆ ಬೆಳೆಸಿಕೊಂಡಿದ್ದರು. ಆದರೆ ಕಳೆದ ಏಪ್ರಿಲ್ 25ರ ಮಧ್ಯಾಹ್ನ ವಿದ್ಯಾರ್ಥಿ ಕಾಣೆಯಾಗಿದ್ದು, ಸಿಸಿಟಿವಿ ಪರಿಶೀಲಿಸಿದಾಗ ಶಿಕ್ಷಕಿ ಬಾಲಕನೊಂದಿಗೆ ಬ್ಯಾಗುಗಳನ್ನು ಹೊತ್ತೊಯ್ಯುತ್ತಿರುವುದು ಪತ್ತೆಯಾಗಿದೆ. ಇದರಿಂದ ಇದು ಪೂರ್ವ ನಿಯೋಜಿತ ಕೃತ್ಯವೆಂಬುದು ಬಯಲಾಗಿದೆ. ಇದನ್ನೂ ಓದಿ:‘ಬಾಯ್​ ಮುಚ್ಕೊಂಡಿದ್ದರೆ ಅದೇ ಈ ದೇಶಕ್ಕೆ ಮಾಡೋ ದೊಡ್ಡ ಸೇವೆ’: ಜಮೀರ್​ ಮಾತಿಗೆ ಜೋಶಿ ವ್ಯಂಗ್ಯ

ವಿದ್ಯಾರ್ಥಿ ಕಾಣೆಯಾದ ಕುರಿತು ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದು. ದೂರನ್ನು ದಾಖಲಿಸಿಕೊಂಡಿದ್ದ ಪೊಲೀಸರು ಇಬ್ಬರಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದರು. ನಾಲ್ಕು ದಿನಗಳ ಹುಡುಕಾಟದ ನಂತರ ಇಬ್ಬರು ಗುಜರಾತ್-ರಾಜಸ್ಥಾನ ಗಡಿಯ ಬಳಿ ಪತ್ತೆಯಾಗಿದ್ದು. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಶಿಕ್ಷಕಿ ಮತ್ತು ವಿದ್ಯಾರ್ಥಿ ಇಬ್ಬರು ವಡೋದರಾ, ಅಹಮದಾಬಾದ್, ದೆಹಲಿ, ಜೈಪುರ ಮತ್ತು ವೃಂದಾವನ ಸೇರಿದಂತೆ ಹಲವಾರು ನಗರಗಳಲ್ಲಿ ಪ್ರಯಾಣಿಸಿದ್ದರು ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದ್ದು. ಶಿಕ್ಷಕಿಯ ಮತ್ತು ಬಾಲಕನ ನಡುವೆ ವಡೋದರದ ಹೋಟೆಲ್​ ಮತ್ತು ಮನೆಯಲ್ಲಿ ಲೈಂಗಿಕ ಸಂಪರ್ಕ ಏರ್ಪಟ್ಟಿರುವುದು ಬಹಿರಂಗವಾಗಿದೆ.

ಇದನ್ನೂ ಓದಿ :ಮಧ್ಯರಾತ್ರಿವರೆಗೆ ಹಾಲ್​ಟಿಕೆಟ್​ ವಿತರಣೆ: ತರಾತುರಿಯಲ್ಲಿ ಪರೀಕ್ಷೆ ನಡೆಸಲು ಮುಂದಾದ KPSC

ಇನ್ನು ಶಿಕ್ಷಕಿ 5 ತಿಂಗಳ ಗರ್ಭಿಣಿ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ಬಹಿರಂಗವಾಗಿದ್ದು. ಈ ಕುರಿತು ಸೂರತ್ ಪೊಲೀಸ್ ಉಪ ಆಯುಕ್ತ ಭಾಗೀರಥ್ ಗಧ್ವಿ ಖಾಸಗಿ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. “ವೈದ್ಯಕೀಯ ಪರೀಕ್ಷೆಯಲ್ಲಿ ಮಹಿಳೆ ಐದು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಅಪ್ರಾಪ್ತ ವಯಸ್ಕ ಮಗುವಿನ ತಂದೆ ಎಂದು ಅವರು ಹೇಳಿಕೊಂಡಿದ್ದಾರೆ. ಅವರ ಹೇಳಿಕೆಯ ಆಧಾರದ ಮೇಲೆ, ನಾವು ಡಿಎನ್‌ಎ ಪರೀಕ್ಷೆಗೆ ಆದೇಶಿಸಿದ್ದೇವೆ. ವಿಚಾರಣೆಯ ಸಮಯದಲ್ಲಿ, ಇಬ್ಬರೂ ವ್ಯಕ್ತಿಗಳು ಹಲವಾರು ತಿಂಗಳುಗಳಿಂದ ದೈಹಿಕ ಸಂಬಂಧದಲ್ಲಿ ತೊಡಗಿದ್ದಾಗಿ ಒಪ್ಪಿಕೊಂಡಿದ್ದಾರೆ” ಎಂದು ಹೇಳಿದರು.

ಅಪ್ರಾಪ್ತ ವಯಸ್ಕನನ್ನು ಅಪಹರಿಸಿದ ಆರೋಪದ ಮೇಲೆ ಮಹಿಳೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಜೊತೆಗೆ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಲೈಂಗಿಕ ಶೋಷಣೆಗಾಗಿ ಗಂಭೀರ ಪ್ರಕರಣ ದಾಖಲಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments