Wednesday, August 27, 2025
HomeUncategorizedಇಸ್ಲಾಂನಲ್ಲಿ ನಂಬಿಕೆ ಇಲ್ಲ, ಮುಸ್ಲಿಂ ಯುವಕನನ್ನು ವಿವಾಹವಾಗಲ್ಲ: ಉರ್ಫಿ ಜಾವೇಧ್​​

ಇಸ್ಲಾಂನಲ್ಲಿ ನಂಬಿಕೆ ಇಲ್ಲ, ಮುಸ್ಲಿಂ ಯುವಕನನ್ನು ವಿವಾಹವಾಗಲ್ಲ: ಉರ್ಫಿ ಜಾವೇಧ್​​

ಮುಂಬೈ: ವಿಚಿತ್ರ ಉಡುಗೆಗಳಿಂದ ಖ್ಯಾತಿ ಗಳಿಸಿರುವ ಬಾಲಿವುಡ್​ ನಟಿ ಉರ್ಫಿ ಜಾವೇದ್ ಒಂದು ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸಗಾಗಿದ್ದು. ಮುಸ್ಲೀಂರನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಹೌದು.. ಹೌದು.. ತಾನೋರ್ವ ಮುಸ್ಲಿಂ ಮಹಿಳೆಯಾಗಿದ್ದರೂ, ತಾನು ಮಾತ್ರ ಯಾವುದೇ ಕಾರಣಕ್ಕೂ ಮುಸ್ಲಿಂ ಹುಡುಗನನ್ನು ಮದುವೆಯಾಗುವುದಿಲ್ಲ.. ತನಗೆ ಇಸ್ಲಾಂ ನಲ್ಲಿ ನಂಬಿಕೆಯೇ ಇಲ್ಲ ಎಂದು ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೆದ್ ಬೋಲ್ಡ್ ಹೇಳಿಕೆ ನೀಡಿದ್ದಾರೆ. ಖಾಸಗಿ ವಾಹಿನಿ ಜೊತೆಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಉರ್ಫಿ ಇಸ್ಲಾಂ ಸಮುದಾಯ ಮಾಡುತ್ತಿರುವ ಟೀಕೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು.

ಇಂಡಿಯಾ ಟುಡೆ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಉರ್ಫಿ ಜಾವೆದ್, ಇಸ್ಲಾಂ ಬಗ್ಗೆ ತನ್ನ ಅಭಿಪ್ರಾಯಗಳನ್ನು ಮತ್ತು ತನ್ನದೇ ಮುಸ್ಲಿಂ ಸಮುದಾಯದಿಂದ ತಾನು ಎದುರಿಸುತ್ತಿರುವ ಟೀಕೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :ಅಭಿಮಾನಿಗಳನ್ನು ಮನೆಗೆ ಕರೆಸಿ ಆಟೋಗ್ರಾಫ್​ ನೀಡಿದ ಕಿಂಗ್​ ಕೊಹ್ಲಿ

ಸಂದರ್ಶನದಲ್ಲಿ ಮಾತನಾಡಿರುವ ಉರ್ಫಿ ಜಾವೇದ್​​ ನಾನು ಮುಸ್ಲಿಂ ಹುಡುಗಿಯಾಗಿದ್ದರು ಕೂಡ ಹೆಚ್ಚು ದ್ವೇಷದ ಕಾಮೆಂಟ್​ಗಳನ್ನು ಮುಸ್ಲಿಂ ಪುರಷರಿಂದ ಎದುರಿಸಿದ್ದೇನೆ. ಮುಸ್ಲಿಂ ಪುರುಷರು ತಮ್ಮ ಮಹಿಳೆಯರು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸಬೇಕೆಂದು ಬಯಸುತ್ತಾರೆ ಎಂಬ ಕಾರಣಕ್ಕಾಗಿ ಅವರು ನನ್ನನ್ನು ದ್ವೇಷಿಸುತ್ತಾರೆ ಎಂದು ಹೇಳಿದರು.

ಮದುವೆ ವಿಚಾರವಾಗಿ ಮಾತನಾಡಿದ ಉರ್ಫಿ ನಾನು ಎಂದಿಗೂ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವುದಿಲ್ಲ. ನಾನು ಇಸ್ಲಾಂನಲ್ಲಿ ನಂಬಿಕೆ ಇಡುವುದಿಲ್ಲ ಮತ್ತು ನಾನು ಯಾವುದೇ ಧರ್ಮವನ್ನು ಅನುಸರಿಸುವುದಿಲ್ಲ, ಆದ್ದರಿಂದ ನಾನು ಯಾರನ್ನು ಪ್ರೀತಿಸುತ್ತೇನೆ ಎಂಬುದು ನನಗೆ ಮುಖ್ಯವಲ್ಲ. ನಾವು ಯಾರನ್ನು ಬೇಕಾದರೂ ಮದುವೆಯಾಗಬಹುದು” ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments