Tuesday, September 2, 2025
HomeUncategorized23 ವರ್ಷಗಳ ಹಿಂದೆ ಮನೆ ತೊರೆದ ಮಹಿಳೆ ವಾಪಾಸ್​ : ಮನೆಗೆ ಕರೆಸಿ ಸನ್ಮಾನಿಸಿದ ಸಚಿವ...

23 ವರ್ಷಗಳ ಹಿಂದೆ ಮನೆ ತೊರೆದ ಮಹಿಳೆ ವಾಪಾಸ್​ : ಮನೆಗೆ ಕರೆಸಿ ಸನ್ಮಾನಿಸಿದ ಸಚಿವ ಮಹದೇವಪ್ಪ !

ಬೆಂಗಳೂರು : ಮಾನಸಿಕ ಅಸ್ವಸ್ಥೆಯಾಗಿದ್ದ ಮಹಿಳೆ ಸಾಕಮ್ಮ 23 ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದರು. ಮನೆ ತೊರೆದಿದ್ದ ಮಹಿಳೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಗೆ ಹೋಗಿದ್ದರು. ಅಲ್ಲಿಂದ ವಾಪಾಸ್​ ಬರಲಾಗದೆ ಪರದಾಡುತ್ತಿದ್ದ ಮಹಿಳೆ ಅಲ್ಲಿಯೆ ವೃದ್ದಾಶ್ರಮದಲ್ಲಿ ಆಶ್ರಯ ಪಡೆದಿದ್ದಳು. ಇದೀಗ ಈ ಮಹಿಳೆ ವಾಪಾಸ್​ ಬೆಂಗಳೂರಿಗೆ ಕರೆತರುವಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಫಲರಾಗಿದ್ದಾರೆ.

ಮಂಡಿ ಜಿಲ್ಲೆಯ ಜಿಲ್ಲಾಧಿಕಾರಿ ವಿಡಿಯೋ ಮಾಡಿ ಕಳಿಸಿದ್ದ ವಿಡಿಯೋವನ್ನು ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್​ ತಮ್ಮ ಕ್ಷ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದರು. ಇದರ ಬಗ್ಗೆ ತನಿಖೆ ನಡೆಸಿದ್ದ ಅಧಿಕಾರಿಗಳು ಸಾಕಮ್ಮನ ಕುಟುಂಬಸ್ಥರನ್ನು ಹುಡುಕಿದ್ದರು. ಇದೀ ಸಮಾಜ ಕಲ್ಯಾಣ ಇಲಾಖೆ ತಂಡವನ್ನು ರಚಿಸಿ ಮಹಿಳೆಯನ್ನು ಸ್ವಾಗ್ರಾಮಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : ಸಿಲಿಂಡರ್​ ಬ್ಲಾಸ್ಟ್​​ : ತಾಯಿ, ಇಬ್ಬರು ಮಕ್ಕಳಿಗೆ ಗಂಭೀರ ಗಾಯ !

ಮನೆಗೆ ಕರೆಸಿ ಸನ್ಮಾನಿಸಿದ ಸಚಿವ ಮಹದೇವಪ್ಪ !

ಮಹಿಳೆ ಸಾಕಮ್ಮರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ಸಚಿವ ಮಹದೇವಪ್ಪ ಮಹಿಳೆಗೆ ಸನ್ಮಾನಿಸಿದ್ದಾರೆ. ಈ ವೇಳೆ ಹೇಳಿಕೆ ನೀಡಿದ ಮಹದೇವಪ್ಪ ‘ ಎರಡು ಮೂರು ದಶಕಗಳ ಕತೆ ಇದೆ, ಕುಟುಂಬಸ್ಥರು ಕೂಡ ಇದರ ಬಗ್ಗೆ ದೂರು ನೀಡಿದ್ದರು. ಆದರೆ ಆಕೆ ಸತ್ತೋದ್ಲು ಎಂದು ಎಲ್ಲಾ ಕಾರ್ಯಗಳನ್ನು ನಡೆಸಿದ್ದರು. ಆದರೆ ಮಣಿವಣ್ಣನ್​ ಮೂಲಕ ಈ ಮಾಹಿತಿ ದೊರೆತಿದ್ದು. ಟೀಂ ರಚನೆ ಮಾಡಿ ಮಹಿಳೆಯನ್ನು ಕರೆತರಲಾಗಿದೆ. ಇದನ್ನು ನೋಡುತ್ತಿದ್ದರೆ ಸಲ್ಮಾನ್​ ಖಾನ್​ ನಟನೆಯ ಭಜರಂಗ್​ ಬಾಯಿಜಾನ್​ ಸಿನಿಮಾ ನೋಡಿದ ಹಾಗೆ ಹಾಗಿದೆ. ಆದರೆ ಅಧಿಕಾರಿಗಳ ಕೆಲಸ ಮೆಚ್ಚುವಂತದ್ದು ಎಂದು ಹೇಳಿದರು.

ಮಹಿಳೆಯನ್ನು ಆಕೆಯ ಮಕ್ಕಳ ಸುಪರ್ದಿಗೆ ಒಪ್ಪಿಸುತ್ತೇವೆ. ಇಲಾಖೆಯಲ್ಲಿ ಹಲವಾರು ಯೋಜನೆಗಳಿವೆ. ಅದರಲ್ಲಿ ಏನು ಸಹಾಯ ಆಗುತ್ತೋ ಅದನ್ನ ಅವರಿಗೆ ಮಾಡಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments