Monday, August 25, 2025
Google search engine
HomeUncategorizedKarnataka Budget 2024: ಅನ್ನ ಸುವಿಧಾ ಯೋಜನೆ ಘೋಷಣೆ: ವೃದ್ಧರಿಗೆ ಮನೆ ಬಾಗಿಲಿಗೆ ಆಹಾರ

Karnataka Budget 2024: ಅನ್ನ ಸುವಿಧಾ ಯೋಜನೆ ಘೋಷಣೆ: ವೃದ್ಧರಿಗೆ ಮನೆ ಬಾಗಿಲಿಗೆ ಆಹಾರ

ಬೆಂಗಳೂರು: ಮನೆಯಿಂದ ಹೊರ ಹೋಗಿ ದಿನಬಳಕೆಯ ಸಾಮಗ್ರಿ ಖರೀದಿಸಲು ಕಷ್ಟವಾಗುವ ವೃದ್ಧರನ್ನು ಗಮನದಲ್ಲಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರು ಬಜೆಟ್​​ನಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ.

80 ವರ್ಷ ಮೇಲ್ಪಟ್ಟ ವಯಸ್ಸಿನವರೇ ಇರುವ ಮನೆಗಳಿಗೆ ಆಹಾರ ಧಾನ್ಯ ವಿತರಣೆ ಮಾಡುವ ಅನ್ನ ಸುವಿಧಾ  ಯೋಜನೆಯನ್ನು ಅವರು ಬಜೆಟ್​ನಲ್ಲಿ ಘೋಷಣೆ ಮಾಡಿದ್ದಾರೆ. ಹಸಿವು ಮುಕ್ತ ಕರ್ನಾಟಕವೇ ನಮ್ಮ ಆಶಯ. ಸಾಮಾಜಿಕ ಭದ್ರತೆಯ ಕಳಕಳಿಯೊಂದಿಗೆ ಈ ಯೋಜನೆ ಘೋಷಣೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಅನ್ನ ಸುವಿಧಾ ಯೋಜನೆಯು ಹೋಮ್ ಡೆಲಿವರಿ ಆ್ಯಪ್ ಮೂಲಕ ಜಾರಿಗೆ ತರಲಾಗುವುದು. ಈ ಯೋಜನೆ ಮೂಲಕ 80 ವರ್ಷ ವಯಸ್ಸು ದಾಟಿದ ವೃದ್ಧರ ಅಥವಾ ವೃದ್ಧೆಯರು ಮಾತ್ರ ಇರುವ ಮನೆಗಳಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತದೆ.

ಅನ್ನಭಾಗ್ಯ ಯೋಜನೆಯಡಿ 2024ರ ಜನವರಿ ಅಂತ್ಯದ ವರೆಗೆ 4.02 ಕೋಟಿ ಫಲಾನುಭವಿಗಳಿಗೆ 4,595 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದೂ ಸಿಎಂ ಬಜೆಟ್​​ನಲ್ಲಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments