ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಪಕ್ಷ ಸೇರ್ಪಡೆ ಬಗ್ಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಮಮಂದಿರ ನಿರ್ಮಾಣ ವೇಳೆಯಲ್ಲಿ ಇದೊಂದು ಸಿಹಿ ಸುದ್ದಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ದೇಶದ ಎಲ್ಲಾ ಮತದಾರರ ಅಪೇಕ್ಷೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಅಂತ. ಕರ್ನಾಟಕದಲ್ಲಿ 28 ಸೀಟು ಇದೆ, ಎಲ್ಲವೂ ನಾವು ಗೆಲ್ಲಬೇಕು ಅಂತ ಪ್ರಯತ್ನ ಮಾಡುತ್ತಿದ್ದಾರೆ. ಜಗದೀಶ್ ಶೆಟ್ಟರ್ ವಾಪಾಸ್ ಆಗಿರೋದು 28 ಸ್ಥಾನ ಗೆಲ್ಲೋಕೆ ಅನುಕೂಲ ಆಗುತ್ತೆ ಎಂದು ಹೇಳಿದ್ದಾರೆ.
ಬಿಜೆಪಿ ಬಿಟ್ಟಿದ್ದಕ್ಕೆ ಅಸಮಾಧಾನ ಇತ್ತು
ಜಗದೀಶ್ ಶೆಟ್ಟರ್ ಅವರರು ಹಿಂದುತ್ವದ ರಕ್ತ ಅಂತ ಹೇಳಿದ್ದೆ, ಅದು ಈಗ ಸತ್ಯ ಆಗಿದೆ. ನಮ್ಮ ಪಕ್ಷದ ನಾಯಕತ್ವ ವಹಿಸಿಕೊಂಡು 28 ಸೀಟು ಗೆಲ್ಲುತ್ತೇವೆ. ಇಲ್ಲಿ ಬಿಟ್ಟು ಹೋಗಿದ್ದು ನಮಗೆ ಸಮಾಧಾನ ಇರಲಿಲ್ಲ. ತುಂಬಾ ಸಂತೋಷ ಮತ್ತೆ ವಾಪಾಸ್ ಆಗಿದ್ದಾರೆ. ಮತ್ತೆ ನರೇಂದ್ರ ಮೋದಿಯವರನ್ನ ಪ್ರಧಾನಿ ಮಾಡ್ತೇವೆ ಎಂದು ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.


