Tuesday, August 26, 2025
Google search engine
HomeUncategorizedPro Kabaddi: ಬೆಂಗಳೂರು ಗೂಳಿಗಳಿಗೆ ಮಣಿದ ಜೈಪುರ್​ ತಂಡ!

Pro Kabaddi: ಬೆಂಗಳೂರು ಗೂಳಿಗಳಿಗೆ ಮಣಿದ ಜೈಪುರ್​ ತಂಡ!

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಸಾಲು ಸಾಲು ಸೋಲಿನಿಂದ ಗೆಲುವಿನ ಬಳಿಕ ಮತ್ತೆ ಲಯಕ್ಕೆ ಮರಳಿದೆ. ಜೈಪುರ ಪಿಂಕ್‌ ಪ್ಯಾಂಥರ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದು ಬೀಗಿದ್ದಾರೆ.

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ರೋಚಕ ಹಣಾಹಣಿ ನಡೆಸಿದವು. ಎರಡೂ ತಂಡಗಳು ಕೊನೆಯ 2-3 ನಿಮಿಷ ಇದೆ ಎನ್ನುವವರೆಗೂ ಸಮ ಅಂಕಗಳನ್ನು ಗಳಿಸಿದ್ದವು, ಯಾವ ತಂಡ ಬೇಕಾದರೂ ಗೆಲ್ಲಬಹುದಿತ್ತು, ಆದರೆ ಗೂಳಿಗಳು ಕೊನೆಯ ಕ್ಷಣದಲ್ಲಿ ಅಬ್ಬರಿಸಿದ ಕಾರಣ ಜೈಪುರ ಪ್ಯಾಂಥರ್​ಗಳು ಮಂಕಾದರು.

ಇದನ್ನೂ ಓದಿ: ಬೆಂಗಳೂರು ಟೆಕ್ಕಿ ಮೇಲೆ ಗ್ಯಾಂಗ್ ರೇಪ್?

ಆರಂಭದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಮೇಲುಗೈ ಸಾಧಿಸಿತ್ತು. ಆದರೂ ತೀವ್ರ ಪೈಪೋಟಿ ಕೊಟ್ಟ ಬೆಂಗಳೂರು, ಪಿಂಕ್ ಪ್ಯಾಂಥರ್ಸ್‌ಗೆ ಹೆಚ್ಚಿನ ಅಂಕಗಳ ಮುನ್ನಡೆ ಸಾಧಿಸಲು ಅವಕಾಶ ಕೊಡಲಿಲ್ಲ. ಮೊದಲಾರ್ಧದಲ್ಲಿ ಕೂಡ ಜೈಪುರ ಪಿಂಕ್ ಪ್ಯಾಂಥರ್ಸ್ 17-14 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡಿತ್ತು.

ಭರತ್, ಖಂಡೋಲಾ ಆಪದ್ಭಾಂಧವರು ದ್ವಿತೀಯಾರ್ಧದಲ್ಲಿ ಬೆಂಗಳೂರು ಗೂಳಿಗಳು ಅಬ್ಬರಿಸುವ ಮೂಲಕ ಅಂಕಗಳನ್ನು ಸಮನಾಗಿಸಿಕೊಂಡರು. ಭರತ್ ಮತ್ತು ವಿಕಾಶ್ ಖಂಡೋಲಾ ರೈಡಿಂಗ್‌ನಲ್ಲಿ ಪಾಯಿಂಟ್ ತಂದರೆ, ಸೌರಬ್ ನಂದನ್ ಮತ್ತು ಅಮನ್ ರಕ್ಷಣಾ ಕೋಟೆ ಕಟ್ಟಿದರು.

ವಿಕಾಶ್ ಖಂಡೋಲಾ 5 ರೈಡ್‌ ಪಾಯಿಂಟ್ ಜೊತೆ 3 ಬೋನಸ್ ಅಂಕಗಳ ಸಹಿತ ಒಟ್ಟು 8 ಪಾಯಿಂಟ್ಸ್ ತಂದುಕೊಟ್ಟರೆ. ಭರತ್ ಒಟ್ಟು 9 ಅಂಕಗಳನ್ನು ತಂದುಕೊಟ್ಟರು. ಸೌರಭ್ ನಂದಾಲ್, ಮೋನು, ಅಮನ್, ಸರ್ಜೀತ್ ಸಿಂಗ್ ಡಿಫೆಂಡರ್ ಗಳಾಗಿ ಉತ್ತಮ ಪ್ರದರ್ಶನ ನೀಡಿದರು.

ಕೊನೆಯ ಎರಡು ಮೂರು ನಿಮಿಷಗಳವರೆಗೆ ಉಭಯ ತಂಡಗಳ ಸ್ಕೋರ್ ಸಮನಾಗಿತ್ತು, ಎರಡೂ ತಂಡಗಳು ಒಂದೊಂದೆ ಅಂಕದಲ್ಲಿ ಮೇಲುಗೈ ಸಾಧಿಸುತ್ತಿದ್ದವು. ಆದರೆ ಕೊನೆಯ ಒಂದೂವರೆ ನಿಮಿಷದಲ್ಲಿ ಬೆಂಗಳೂರಿನ ಗೂಳಿಗಳು ಅಬ್ಬರಿಸಿದವು. ಕೊನೆಕ್ಷಣದಲ್ಲಿ ಡಿಫೆಂಡ್ ಮತ್ತು ರೈಡಿಂಗ್ ಎರಡೂ ವಿಭಾಗದಲ್ಲಿ ಮಿಂಚಿದ ಬೆಂಗಳೂರು ಬುಲ್ಸ್ 32-30 ಪಾಯಿಂಟ್‌ಗಳಲ್ಲಿ ಪಂದ್ಯ ಗೆದ್ದು ಬೀಗಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments