Sunday, August 24, 2025
Google search engine
HomeUncategorizedBigg Boss Kannada : ಪ್ರತಾಪ್‌ಗೆ ಕಳಪೆ ಪಟ್ಟ : ಯಾರಾಗ್ತಾರೆ ಈ ವಾರದ ಬೆಸ್ಟ್...

Bigg Boss Kannada : ಪ್ರತಾಪ್‌ಗೆ ಕಳಪೆ ಪಟ್ಟ : ಯಾರಾಗ್ತಾರೆ ಈ ವಾರದ ಬೆಸ್ಟ್ ಪರ್ಫಾಮರ್

ಬೆಂಗಳೂರು: ಬಿಗ್​ ಬಾಸ್​ ಮನೆಯಲ್ಲಿಇಷ್ಟು ದಿನ ಎಲ್ಲರಿಂದಲೂ ಮೆಚ್ಚುಗೆ ಪಡೆಯುತ್ತಿದ್ದ ಪ್ರತಾಪ್​ ಈ ವಾರ ಕೆಲವೊಂದು ತಪ್ಪು ನಿರ್ಧಾರಗಳನ್ನು ತಗೆದುಕೊಂಡು ತಂಡದ ಸೋಲಿಗೆ ಕಾರಣವಾಗಿದ್ದಾರೆ. ಈ ಕಾರಣಗಳನ್ನು ನೀಡಿ ಪ್ರತಾಪ್​ಗೆ ಕಳಪೆ ಪಟ್ಟ ನೀಡಲಾಗಿದೆ. ಇದರ ಪ್ರೋಮೋ ವೈರಲ್ ಆಗಿದೆ. 

ಹೌದು, ಈ ವಾರದ ಎಲ್ಲ ಟಾಸ್ಕ್‌ಗಳಲ್ಲಿಯೂ ‘ಮಣ್ಣಿನ ಮಕ್ಕಳು’ ತಂಡ ಸೋತು ಸುಣ್ಣವಾಗಿದೆ. ಆ ತಂಡದ ನಾಯಕತ್ವವನ್ನು ವಹಿಸಿದ್ದ ಡ್ರೋಣ್ ಪ್ರತಾಪ್‌ ಜೈಲುಪಾಲಾಗಿದ್ದಾರೆ. ನಾಯಕತ್ವದ ಪರಿಣಾಮವಾಗಿ ಜೈಲುಡುಗೆ ತೊಟ್ಟ ಪ್ರತಾಪ್ ಚಿತ್ರ JioCinema ಬಿಡುಗಡೆ ಮಾಡಿರುವ ಬೆಳಗಿನ ಫ್ರೊಮೊದಲ್ಲಿ ಜಾಹೀರುಗೊಂಡಿದೆ.

ವಾರದ ಕೊನೆಗೆ ಕಳಪೆ ಯಾರು ಉತ್ತಮ ಯಾರು ಎಂಬುದನ್ನು ಆರಿಸುವ ಸಂದರ್ಭದಲ್ಲಿ ಎರಡೂ ತಂಡದ ಬಹುತೇಕ ಸದಸ್ಯರು ಪ್ರತಾಪ್ ಹೆಸರನ್ನು ಸೂಚಿಸಿದ್ದಾರೆ. ‘ನನ್ನನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದು ಬೇಜಾರಾಯ್ತು’ ಎಂದು ನಮ್ರತಾ ಕಾರಣ ಕೊಟ್ಟಿದ್ದರೆ, ‘ಕಾರ್ತಿಕ್ ಅವರಂಥ ಆಟಗಾರನನ್ನು ಹೊರಗಿಟ್ಟಿದ್ದರಿಂದ ತಂಡ ವಾರದ ಎಲ್ಲ ಟಾಸ್ಕ್‌ಗಳಲ್ಲಿಯೂ ಸೋಲುವಂತಾಯ್ತು’ ಎಂದು ವಿನಯ್ ಕಾರಣ ನೀಡಿದ್ದಾರೆ.

‘ಎಲ್ಲೋ ಒಂದು ಕಡೆ ಕೋಪದಿಂದ ಮಾತಾಡ್ತಾರೆ ಎಂದು ಈ ವಾರನೂ ಅಗ್ರೆಶನ್‌ನಲ್ಲಿಯೇ ಆಡ್ತಾರೆ ಅಂದುಕೊಳ್ಳುವುದು ಸರಿಯಲ್ಲ’ ಎಂದು ತನಿಷಾ ಹೇಳಿದ್ದಾರೆ. ವರ್ತೂರು, ಸ್ನೇಹಿತ್‌ ಕೂಡ ಪ್ರತಾಪ್ ಹೆಸರನ್ನೇ ಹೇಳಿದ್ದಾರೆ. ಮನೆಯವರ ನಿರ್ಧಾರಕ್ಕೆ ಬದ್ಧನಾಗಿ ಪ್ರತಾಪ್ ಜೈಲುಡುಗೆಯೇನೋ ತೊಟ್ಟಿದ್ದಾರೆ.

ಆದರೆ ಅವರ ನಿರ್ಧಾರ ನನಗೆ ಸಮ್ಮತ ಅನಿಸಿಲ್ಲ ಎಂದೂ ಗಟ್ಟಿಯಾಗಿಯೇ ಹೇಳಿದ್ದಾರೆ, ‘ನನ್ನ ಪ್ರಕಾರ ನಾನು ತೆಗೆದುಕೊಂಡ ನಿರ್ಧಾರಗಳು ಸರಿ ಇತ್ತು. ಎಲ್ಲರೂ ಸೇರಿ ನನಗೆ ಕಳಪೆ ಕೊಟ್ಟಿದ್ದು ಬೇಜಾರಾಗಿದೆ. ಇದಕ್ಕೆ ನನಗೆ ಸಮ್ಮತಿ ಇಲ್ಲ’ ಎಂದು ಹೇಳಿ ಅವರು ಜೈಲಿನೊಳಗೆ ಹೋಗಿ ಕೂತಿದ್ದಾರೆ.

ಹಾಗಾದರೆ ಈ ವಾರ ಉತ್ತಮ ಪಟ್ಟ ಯಾರಿಗೆ ಬಂದಿದೆ? ಕ್ಯಾಪ್ಟನ್ಸಿ ಓಟದಲ್ಲಿ ಯಾರು ಗೆದ್ದಿದ್ದಾರೆ? ಈ ಪ್ರಶ್ನೆಗಳಿಗೆ ಉತ್ತರ ಸಿಗಲು JioCinemaದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ಉಚಿತ ನೇರಪ್ರಸಾರವನ್ನು ವೀಕ್ಷಿಸಿಬೇಕು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments