ಬೆಂಗಳೂರು : ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಪ್ರೇಕ್ಷಕರಿಗೆ ಅಶ್ಲೀಲವಾಗಿ ಪ್ರತಿಕ್ರಿಯಿಸುವ ಮೂಲಕ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದ್ದಾರೆ.
ಟೀಂ ಇಂಡಿಯಾ ಹಾಗೂ ನೇಪಾಳ ಪಂದ್ಯದ ವೇಳೆ ಮೊದಲ ಇನ್ನಿಂಗ್ಸ್ ಮುಗಿದ ಬಳಿಕ ಹೊರ ಹೋಗುತ್ತಿದ್ದಾಗ ಗೌತಮ್ ಗಂಭೀರ್ ವರ್ತಿಸಿದ ರೀತಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ವಿಡಿಯೋ ವೈರಲ್ ಆಗುತ್ತಿದೆ.
ಗಂಭೀರ್ ಮೈದಾನದಿಂದ ಹಿಂತಿರುಗುತ್ತಿದ್ದಾಗ ಅಭಿಮಾನಿಗಳು ಕೊಹ್ಲಿ.. ಕೊಹ್ಲಿ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಮಯಬೈಲ್ ನಲ್ಲಿ ಮಾತನಾಡುತ್ತಾ ತೆರಳುತ್ತಿದ್ದ ಗಂಭೀರ್ ಅವರು ಪ್ರೇಕ್ಷಕರಿಗೆ ಮಧ್ಯದ ಬೆರಳನ್ನು ತೋರಿಸಿದ್ದಾರೆ.
ಕಿಂಗ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ 2013ರಿಂದ ಮೈದಾನದಲ್ಲಿ ಸಂಘರ್ಷ ನಡೆಯುತ್ತಿದೆ. 2023ರ ಐಪಿಎಲ್ನಲ್ಲೂ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದಾದ ಬಳಿಕ ಕೊಹ್ಲಿ ಅಭಿಮಾನಿಗಳು ಪದೇ ಪದೆ ಗಂಭೀರ್ ಅವರನ್ನು ಕೆಣಕುತ್ತಿದ್ದಾರೆ.
ಮತ್ತೆ ಮಳೆ ಅಡ್ಡಿ
ಏಷ್ಯಾಕಪ್ ಟೂರ್ನಿಯಲ್ಲಿ ಇಂದು ನಡೆಯುತ್ತಿರುವ ಭಾರತ ಹಾಗೂ ನೇಪಾಳ ನಡುವಿನ ಪಂದ್ಯದಲ್ಲಿ ಮತ್ತೆ ಮಳೆ ಎದುರಾಗಿದೆ. ಭಾರಿ ಮಳೆ ನಂತರ ಪಂದ್ಯವನ್ನು 23 ಓವರ್ಗಳಿಗೆ ಸೀಮಿತಗೊಳಿಸಲಾಗಿದೆ. ಭಾರತಕ್ಕೆ 145 ರನ್ ಟಾರ್ಗೆಟ್ ನೀಡಲಾಗಿದೆ. ಪವರ್ ಪ್ಲೇ 5 ಓವರ್ ಮಾತ್ರ ಇರುತ್ತದೆ.
https://twitter.com/_cricketmuse/status/1698739740365992378?s=20