ಬೆಂಗಳೂರು : ಶಕ್ತಿ ಯೋಜನೆ ಎಫೆಕ್ಟ್‌ನಿಂದ ನಷ್ಟದಲ್ಲಿದ್ದ ಸಾರಿಗೆ ಇಲಾಖೆಗೀಗ ಕೊಂಚ ರಿಲೀಫ್ ಸಿಕ್ಕಿದೆ. ಗುಜರಿ ಸೇರಬೇಕಿದ್ದ KSRTC ಬಸ್‌ಗಳಿಗೆ ಕಾಯಕಲ್ಪ ನೀಡಿದ್ದು ಸಾರಿಗೆ ಇಲಾಖೆ ಬೊಕ್ಕಸಕ್ಕೆ ಸುಮಾರು 206 ಕೋಟಿ ರೂಪಾಯಿ ಉಳಿತಾಯ ಆಗಲಿದೆ.
ಶಕ್ತಿ ಯೋಜನೆ ಎಫೆಕ್ಟ್‌ನಿಂದಾಗಿ ಬಸ್‌ಗಳ ಕೊರತೆ ಹೆಚ್ಚಾಗಿದ್ದು, ಹೆಚ್ಚುವರಿ ಬಸ್‌ಗಳನ್ನು ಖರೀದಿಸಬೇಕಾಗಿತ್ತು. ಆದರೆ, ನಷ್ಟವನ್ನು ಸರಿದೂಗಿಸಲು ಸರ್ಕಾರ ಪ್ಲ್ಯಾನ್ ಮಾಡಿದ್ದು, ಹಳೆಯ ವಾಹನಗಳಿಗೆ ಮರುಜೀವ ನೀಡಲು ನಿರ್ಧರಿಸಿದೆ.
528 ಬಸ್‌ಗಳ ಪುನಶ್ಚೇತನ
ಸಾಮಾನ್ಯವಾಗಿ ಕೇಂದ್ರ ಸರ್ಕಾರದ ನಿಯಮದ ಪ್ರಕಾರ, ಸರ್ಕಾರಿ ವಾಹನಗಳನ್ನ 15 ವರ್ಷಗಳ ಬಳಿಕ ಬಳಸುವಂತಿಲ್ಲ. ಹೀಗಾಗಿ, 11 ರಿಂದ 12 ವರ್ಷಗಳ ಹಳೆಯ ಬಸ್‌ಗಳನ್ನ, ರಿಪೇರಿ ಮಾಡಿಸಿ, ತುಕ್ಕು ಹಿಡಿದ ಹಾನಿಗೊಳಗಾದ ಬಸ್‌ಗಳನ್ನು ನವೀಕರಿಸಿ ಪುನರ್ ಬಳಕೆ ಮಾಡಲು ಸಿದ್ಧತೆ ನಡೆಸಿದೆ.
ಸದ್ಯ ಮೊದಲ ಹಂತದಲ್ಲಿ 528 ಬಸ್‌ಗಳನ್ನು ಪುನಶ್ಚೇತನ ಮಾಡಲಿದ್ದು, ಇದರಿಂದ ಸರ್ಕಾರದ ಮೇಲಿನ ಹೊರೆ ಕೊಂಚ ಕಡಿಮೆಯಾಗಲಿದೆ.



Pinco oyunları ilə böyük qazanc əldə et. Slot oyunlarını dərhal sına pinco kazino. Pinco oyunları çox real hiss olunur.
Pinco kazinoda real uduşlar qazanmaq olar.