Sunday, August 24, 2025
Google search engine
HomeUncategorizedಬಹಳ ನೋವಿನಿಂದ ಅಮಾನತು ಮಾಡಿದ್ದೇನೆ : ಯು.ಟಿ ಖಾದರ್

ಬಹಳ ನೋವಿನಿಂದ ಅಮಾನತು ಮಾಡಿದ್ದೇನೆ : ಯು.ಟಿ ಖಾದರ್

ಬೆಂಗಳೂರು : ಬಹಳ ನೋವಿನಿಂದ ಸದಸ್ಯರನ್ನು ನಾನು ಅಮಾನತು ಮಾಡಿದ್ದೇನೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಬೇಸರಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನವನ್ನು ಗೌರವಯುತವಾಗಿ ನಡೆಸುವುದು ನನ್ನ ಕರ್ತವ್ಯ. ಇಲ್ಲಿ ಯಾರ ಮೇಲೂ ಕ್ರಮಕೈಗೊಂಡಿಲ್ಲ ಎಂದರು.

ಪೀಠಕ್ಕೆ ಅಗೌರ ತೋರಿಸಿದ್ದಕ್ಕೆ ಕ್ರಮ ಕೈಗೊಂಡಿದ್ದೇವೆ. ನನ್ನ ಕರ್ತವ್ಯವನ್ನ ನಾನು ನಿರ್ವಹಿಸಿದ್ದೇನೆ. ಬಹಳ ನೋವಿನಿಂದ ಅಮಾನತು ಮಾಡಿದ್ದೇನೆ. ಯಾಕೆಂದ್ರೆ, ಅವರೆಲ್ಲರೂ ನಮ್ಮ ಸದಸ್ಯರೇ. ಐಎಎಸ್ ಅಧಿಕಾರಿಗಳ ದುರ್ಬಳಕೆ ಆರೋಪ ಬಂತು. ನೋಟಿಸ್ ಕೊಡದಿದ್ದರು ಚರ್ಚೆಗೆ ಅವಕಾಶ ಕೊಟ್ಟಿದ್ದೆ ಎಂದರು ಹೇಳಿದರು.

ಇದನ್ನೂ ಓದಿ : ಸ್ಪೀಕರ್ ಅವರಿಗೆ ಅವರ ತಪ್ಪಿನ ಅರಿವಾಗಿದೆ : ಬಸವರಾಜ ಬೊಮ್ಮಾಯಿ

ಎಲ್ಲಾ ಸಮಯ ಧರಣಿಯಲ್ಲೇ ಹೋಯ್ತು

ರೈತರ ಸಮಸ್ಯೆಗಳಿದ್ದವು, ಚರ್ಚೆ ಮಾಡಬಹುದಿತ್ತು. ಅವರನ್ನು ಕರೆಸಿ ೧೫ ನಿಮಿಷ ಮಾತನಾಡಿದ್ದೇನೆ. ಕಲಾಪಕ್ಕೆ ಸಹಕರಿಸುವಂತೆ ನಾವು ರಿಕ್ವೆಸ್ಟ್ ಮಾಡಿದ್ದೆವು. ಅವರು ಹೇಳ್ತೇವೆ ಎಂದವರು ಮತ್ತೆ ಹೇಳಲಿಲ್ಲ. ಮತ್ತೆ ಧರಣಿಯನ್ನು ಅವರು ಮುಂದುವರಿಸಿದ್ರು. ಬಿಲ್ ಗಳ ಪಾಸ್ ಮಾಡುವುದು ನಮ್ಮ ಮುಂದಿತ್ತು. ಧರಣಿಯ ನಡುವೆಯೂ ಬಿಲ್ ತೆಗೆದುಕೊಂಡಿದ್ದೆವು. ಎಲ್ಲಾ ಸಮಯ ಧರಣಿಯಲ್ಲೇ ಹೋಯ್ತು ಎಂದು ಅಸಮಾಧಾನ ಹೊರಹಾಕಿದರು.

ಈ ರೀತಿ ಮಾಡಿದರೆ ಯಾರು ಒಪ್ತಾರೆ

ನಾವು ಮೀಟಿಂಗ್ ನಲ್ಲಿ ಸೇರಿದ್ದೆವು. ಡೆಪ್ಯೂಟಿ ಸ್ಪೀಕರ್ ಆಸನದಲ್ಲಿ ಕುಳಿತಿದ್ದರು. ಅವರ ಮೇಲೆ ಈ ರೀತಿ ಮಾಡಿದರೆ ಯಾರು ಒಪ್ತಾರೆ. ನಾನು ಸಭಾಧ್ಯಕ್ಷನಾಗಿ ಕ್ರಮವನ್ನು ತೆಗೆದುಕೊಂಡಿದ್ದೇನೆ. ಅಗೌರವ ತೋರಿದ್ದಕ್ಕೆ ಕ್ರಮ ಕೈಗೊಂಡಿದ್ದೇವೆ. ಇದರಲ್ಲಿ ಯಾವುದೇ ಪ್ರತಿಷ್ಠೆಯಿಲ್ಲ, ಮುಂದೆ ಅಶಿಸ್ತು ನಡೆಯಬಾರದೆಂದು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments