ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ವೃದ್ಧ ದಂಪತಿಯ ಬರ್ಬರ ಹತ್ಯೆ ನಡೆದಿದೆ. ಗರುಡಾಚಾರ ಪಾಳ್ಯದಲ್ಲಿ ಮನೆಯಲ್ಲಿ ಈ ಡಬಲ್ ಮರ್ಡರ್ ನಡೆದಿದ್ದು, ಚಂದ್ರೇಗೌಡ (63), ಲಕ್ಷ್ಮಮ್ಮ (53) ಕೊಲೆಯಾದ ದುರ್ದೈವಿಗಳು. ಚಿನ್ನಾಭರಣಕ್ಕಾಗಿ ಹಂತಕರು ದಂಪತಿಯನ್ನು ಕೊಲೆ ಮಾಡಿದ್ದಾರೆ ಎನ್ನುವ ಶಂಕೆ ಇದ್ದು, ಹಂತಕರ ಪತ್ತೆಗಾಗಿ ಮೂರು ಪೊಲೀಸ್ ತಂಡಗಳ ರಚನೆ ಮಾಡಲಾಗಿದೆ.
ಘಟನಾ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶ್ವಾನದಳದಿಂದಲೂ ಪರಿಶೀಲನೆ ನಡೆಸಲಾಗುತ್ತಿದೆ. ಫಾರೆನ್ಸಿಕ್ ಎಕ್ಸ್ಪರ್ಟ್ ಟೀಮಿನಿಂದಲೂ ತನಿಖೆ ನಡೆಸಲಾಗುತ್ತಿದೆ.
ಬೆಂಗಳೂರಲ್ಲಿ ವೃದ್ಧ ದಂಪತಿ ಬರ್ಬರ ಹತ್ಯೆ
RELATED ARTICLES