Friday, August 29, 2025
HomeUncategorized'ಪರೀಕ್ಷೆ ಒಂದೇ ಜೀವನವಲ್ಲ': ಫೇಲ್​ ಆದ ಮಗನಿಗೆ ಕೇಕ್​ ತಿನ್ನಿಸಿ ಧೈರ್ಯ ತುಂಬಿದ ತಂದೆ

‘ಪರೀಕ್ಷೆ ಒಂದೇ ಜೀವನವಲ್ಲ’: ಫೇಲ್​ ಆದ ಮಗನಿಗೆ ಕೇಕ್​ ತಿನ್ನಿಸಿ ಧೈರ್ಯ ತುಂಬಿದ ತಂದೆ

ಬಾಗಲಕೋಟೆ : ಮಗ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಫೇಲ್​ ಆಗಿದ್ದಕ್ಕೆ ತಂದೆ ಕೇಕ್​ ಕಟ್​ ಮಾಡಿ ಧೈರ್ಯ ಹೇಳಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು. ಮಗ ಅಭಿಷೇಕ್​ ಎಲ್ಲಪ್ಪ ಚೊಳಕಗುಡ್ಡ ಎಲ್ಲಾ ಆರಕ್ಕೆ ಆರು ವಿಷಯಗಳಲ್ಲಿ ಫೇಲ್​ ಆಗಿದ್ದಾನೆ. ಪರೀಕ್ಷೆಯಲ್ಲಿ ಫೇಲ್​ ಆದ ಮಗನಿಗೆ ಮರಳಿ ಪ್ರಯತ್ನ ಮಾಡು ಎಂದು ತಂದೆ ಧೈರ್ಯ ತುಂಬಿದ್ದಾರೆ.

ಬಾಲಕ ಅಭಿಷೇಕ ಯಲ್ಲಪ್ಪ ಚೊಳಚಗುಡ್ಡ 15 ತಿಂಗಳ ಮಗುವಾಗಿದ್ದಾಗ ಎರಡು ಪಾದಗಳನ್ನು ಸುಟ್ಟುಕೊಂಡು ತನ್ನ ನೆನಪಿನ ಶಕ್ತಿ ಕಳೆದುಕೊಂಡಿದ್ದನು. ಆದರೂ ಮನೆಯವರೆಲ್ಲಾ ಆತನಿಗೆ ಧೈರ್ಯವೇಳಿ ವಿದ್ಯಾಭ್ಯಾಸ ಮುಂದುವರಿಸಲು ಹೇಳಿದ್ದರು. ಆದರೆ ನಿನ್ನೆ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು, ವಿದ್ಯಾರ್ಥಿ ಅಭಿಷೇಕ್​ 6ಕ್ಕೆ 6 ವಿಷಯಗಳಲ್ಲಿ ಅನುತೀರ್ಣನಾಗಿದ್ದಾನೆ.

ಇದನ್ನೂ :ಯುವತಿಯ ಖಾಸಗಿ ಅಂಗ ಸ್ಪರ್ಷಿಸಿ ಲೈಂಗಿಕ ಕಿರುಕುಳ: ಮಹಾನಗರದಲ್ಲಿ ಇದೆಲ್ಲಾ ಕಾಮನ್​ ಅಂತಾರ ಗೃಹ ಸಚಿವರು..!

ಬಾಗಲಕೋಟೆ ಬಸವೇಶ್ವರ ಹೈಸ್ಕೂಲ್​ನಲ್ಲಿ ಓದುತ್ತಿದ್ದ ಅಭಿಷೇಕ್​. 625 ಅಂಕಗಳಿಗೆ ಕೇವಲ 200 ಅಂಕ ಪಡೆದಿದ್ದು. ಶೇಕಡಾವಾರು 32% ಅಂಕ ಪಡೆದಿದ್ದಾನೆ. ಆದರೆ ಪರೀಕ್ಷೆಯಲ್ಲಿ ಅನುತೀರ್ಣನಾಗಿ ಬೇಜಾರಿನಲ್ಲಿದ್ದ ಮಗನಿಗೆ ಅವರ ತಂದೆ ಕೇಕ್​ ಕಟ್​ ಮಾಡಿಸಿ ಸಪ್ರೈಸ್​ ನೀಡಿದ್ದು. ‘ಪರೀಕ್ಷೆ ಒಂದೇ ಜೀವನವಲ್ಲ‌ ಮತ್ತೆ ಪ್ರಯತ್ನ‌ ಮಾಡು ಎಂದು ಹೆಗಲ‌ ಮೇಲೆ‌ ಕೈ ಇಟ್ಟು ಧೈರ್ಯ ತುಂಬಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments