Saturday, August 30, 2025
HomeUncategorizedಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ್ದ ಮೇಜಿಂದ ಪಾಕ್ ಧ್ವಜವನ್ನು ತೆರವುಗೊಳಿಸಿದ ಭಾರತ

ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ್ದ ಮೇಜಿಂದ ಪಾಕ್ ಧ್ವಜವನ್ನು ತೆರವುಗೊಳಿಸಿದ ಭಾರತ

ದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಬಳಿಕ ಎರಡು ದೇಶಗಳು ರಾಜತಾಂತ್ರಿಕವಾಗಿ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿವೆ. 1972ರ ಯುದ್ದ ನಂತರ ಎರಡು ದೇಶಗಳ ನಡುವೆ ಏರ್ಪಟ್ಟಿದ್ದ ಶಿಮ್ಲಾ ಒಪ್ಪಂದವನ್ನು ಪಾಕ್​ ಉಲ್ಲಂಘಿಸುವಾಗಿ ಹೇಳಿಕೊಂಡಿದ್ದು. ಇತ್ತ ಶಿಮ್ಲಾದ ರಾಜಭವನದ ಕೀರ್ತಿ ಹಾಲ್​ನಲ್ಲಿದ್ದ ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ್ದ ಮೇಜಿನ ಮೇಲಿಲ ಪಾಕ್​ ಧ್ವಜವನ್ನು ಭಾರತ ತೆಗೆದು ಹಾಕಿದೆ.

1971ರಲ್ಲಿ ನಡೆದ ಭಾರತ ಮತ್ತ ಪಾಕ್​ ಯುದ್ದದ ಸಂದರ್ಭದಲ್ಲಿ ಪಾಕಿಸ್ತಾನದ 90 ಸಾವಿರಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಭಾರತಕ್ಕೆ ಶರಣಾಗಿದ್ದರು. ಇದು ಎರಡು ದೇಶದ ನಡುವಿನ ಕದನ ವಿರಾಮಕ್ಕೆ ಕಾರಣವಾಗಿತ್ತು. ಇದರ ಪರಿಣಾಮ ಬಾಂಗ್ಲಾದೇಶ ಉದಯಿಸಿತು. ನಂತರ ಈ ಯುದ್ದದ ಬಳಿಕ ಶಾಂತಿಯ ಸ್ಥಾಪನೆಗಾಗಿ ಶಿಮ್ಲಾ ಒಪ್ಪಂದವನ್ನು ಜುಲೈ 3, 1972ರಲ್ಲಿ ಮಾಡಿಕೊಳ್ಳಲಾಯಿತು.

ಇದನ್ನೂ ಓದಿ :ಪಾಕ್​ ಜೊತೆ ಯುದ್ದದ ಅನಿವಾರ್ಯತೆ ಇಲ್ಲ, ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ: ಸಿಎಂ ಸಿದ್ದರಾಮಯ್ಯ

ಜುಲೈ 1972 ರ ಸಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ ಐತಿಹಾಸಿಕ ರಾಜ್ಯಪಾಲರ ಭವನ.
ಜುಲೈ 1972 ರ ಸಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ ಐತಿಹಾಸಿಕ ರಾಜ್ಯಪಾಲರ ಭವನ.

ಈ ಒಪ್ಪಂದಕ್ಕೆ ಸಹಿ ಹಾಕಿದ ಮರದ ಮೇಜನ್ನು ಶಿಮ್ಲಾದ ರಾಜಭವನದ ಕೀರ್ತಿ ಹಾಲ್‌ನಲ್ಲಿ ಇರಿಸಲಾಗಿದೆ. ಇದರ ಮೇಲೆ ಶಿಮ್ಲಾ ಒಪ್ಪಂದಕ್ಕೆ ಇಲ್ಲಿ 3-7-1972 ರಂದು ಸಹಿ ಹಾಕಲಾಯಿತು ಎಂದು ಬರೆಯಲಾದ ಫಲಕವನ್ನು ಇರಿಸಲಾಗಿದೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮತ್ತು ಅಂದಿನ ಪಾಕಿಸ್ತಾನ ಪ್ರಧಾನಿ ಜುಲ್ಫಿಕರ್ ಭುಟ್ಟೊ ಈ ಒಪ್ಪಂದಕ್ಕೆ ಸಹಿ ಹಾಕುತ್ತಿರುವ ಛಾಯಾಚಿತ್ರವನ್ನು ಮೇಜಿನ ಒಂದು ಬದಿಯಲ್ಲಿ ಇರಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ಧ್ವಜಗಳನ್ನು ಮೇಜಿನ ಮೇಲೆ ಇರಿಸಲಾಗಿತ್ತು, ಈಗ ಭಾರತೀಯ ಧ್ವಜವನ್ನು ಮಾತ್ರ ಇರಿಸಲಾಗಿದ್ದು, ಪಾಕ್​ ಧ್ವಜವನ್ನು ತೆರವುಗೊಳಿಸಲಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments