Wednesday, August 27, 2025
Google search engine
HomeUncategorizedಸರಿಗಮಪ ಖ್ಯಾತಿಯ ಪೃಥ್ವಿ ಭಟ್​ ವಿವಾಹ: ವಶೀಕರಣ ಮಾಡಿದ್ದಾರೆ ಎಂದು ಆರೋಪಿಸಿದ ತಂದೆ

ಸರಿಗಮಪ ಖ್ಯಾತಿಯ ಪೃಥ್ವಿ ಭಟ್​ ವಿವಾಹ: ವಶೀಕರಣ ಮಾಡಿದ್ದಾರೆ ಎಂದು ಆರೋಪಿಸಿದ ತಂದೆ

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ ಸೀಸನ್ 15’ರ ಸ್ಪರ್ಧಿಯಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ಪೃಥ್ವಿಭಟ್​ ಇದೀಗ ಮದುವೆ ವಿಷಯದಲ್ಲಿ ಸುದ್ದಿಯಾಗಿದ್ದು. ತಂದೆ-ತಾಯಿಯ ವಿರೋಧದ ಮಧ್ಯೆ  ಮನೆ ತೊರೆದು ಪ್ರಿಯಕರನ ಜೊತೆ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇದರ ಕುರಿತು ಪೃಥ್ವಿ ಭಟ್​ ಅವರ ತಂದೆ ಸುದೀರ್ಘ ಆಡಿಯೋ ಮಾಡಿ ತಮ್ಮ ನೋವು ತೋಡಿಕೊಂಡಿದ್ದಾರೆ.

ಪೃಥ್ವಿ ಭಟ್​ ಮತ್ತು ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್​ ನಡುವೆ ಪ್ರೀತಿಯಾಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಈ ಸುದ್ದಿ ತಿಳಿದು ಪೃಥ್ವಿ ಭಟ್​ ತಂದೆ ಮತ್ತು ತಾಯಿ ಆಘಾತ ವ್ಯಕ್ತಪಡಿಸಿದ್ದಾರೆ. ತಮ್ಮ ಮಾತನ್ನು ಧಿಕ್ಕರಿಸಿ ಮಗಳು ಮದುವೆಯಾಗಿರುವ ಬಗ್ಗೆ ತಂದೆ ದುಃಖ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪೃಥ್ವಿ ಭಟ್​ ಅವರ ತಂದೆ ಆಡಿಯೋ ಹರಿಬಿಟ್ಟಿದ್ದು. ಮಗಳನ್ನು ವಶೀಕರಣ ಮಾಡಿ ಕರೆದೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ :ಭಾರತೀಯ ಯೋಧನ ಮೇಲೆ ಮಾರಣಾಂತಿಕ ಹಲ್ಲೆ: ‘ಕರ್ನಾಟಕ ಏಕೆ ಹೀಗಾಯಿತು’ ಎಂದು ಪ್ರಶ್ನಿಸಿದ ಸೈನಿಕ

ಆಡಿಯೋದಲ್ಲಿ ಏನಿದೆ..!

ಪೃಥ್ವಿ ಭಟ್​ ಅವರ ತಂದೆ ಶಿವಪ್ರಸಾದ್​ ಈ ಕುರಿತು ವಿಡಿಯೋ ಮಾಡಿದ್ದು. ‘ನನ್ನ ಮಗಳು ಫೃಥ್ವಿ ಮಾ.27ರಂದು ಜೀ ಕನ್ನಡದಲ್ಲಿ ಕೆಲಸ ಮಾಡುವ ಅಭಿಷೇಕ್‌ ಎಂಬಾತನನ್ನು ಮದುವೆ ಆಗಿದ್ದಾಳೆ. ಸರಿಗಮಪ ಕಾರ್ಯಕ್ರಮದ ಜ್ಯೂರಿಗಳಲ್ಲಿ ಒಬ್ಬರಾದ ನರಹರಿ ದೀಕ್ಷಿತ್​ ಎಂಬಾತ ಇವರಿಬ್ಬರ ಮದುವೆ ಮಾಡಿಸಿದ್ದಾನೆ.  ಅದೂ ಅಲ್ಲದೇ ನಮ್ಮ ಮಗಳು ಕೆಲವು ದಿನಗಳಿಂದ ವಶೀಕರಣಕ್ಕೆ ಒಳಗಾದಂತೆ ವರ್ತಿಸುತ್ತಿದ್ದಳು. ನರಹರಿ ದೀಕ್ಷಿತ್‌ ತನ್ನ ಲಾಭಕ್ಕಾಗಿ ಇಂತಹ ನೀಚ ಕೆಲಸವನ್ನು ಆತ ಮಾಡಿದ್ದಾನೆ ಎಂದು ದೂರಿದ್ದಾರೆ.

ಇದನ್ನೂ ಓದಿ :ಇಂಧನ ಇಲಾಖೆಯಲ್ಲಿ ಸಾವಿರಾರು ಕೋಟಿ ಹಗರಣ: ಸಚಿವ ಜಾರ್ಜ್ ವಿರುದ್ದ ಲೋಕಾಯುಕ್ತಗೆ ದೂರು

ಜೊತೆಗೆ ಆ ಹುಡುಗನ ಜೊತೆ ಮದುವೆ ಆಗುವುದಿಲ್ಲ ಎಂದು ಮಗಳು ದೇವರ ಮುಂದೆ ಪ್ರಮಾಣ ಮಾಡಿದ್ದಳು. ಆದರೆ ಇದ್ದಕ್ಕಿದ್ದಂತೆ ಮನೆ ಬಿಟ್ಟು ಓಡಿ ಹೋದಳು ಎಂದು ತಂದೆ ನೋವು ತೋಡಿಕೊಂಡಿದ್ದಾರೆ. ತಮ್ಮ ಮಗಳ ಮೇಲೆ ವಶೀಕರಣ ವಿದ್ಯೆ ಪ್ರಯೋಗಿಸಲಾಗಿದೆ. ಇದರ ಹಿಂದೆ ಜೀ ಟಿವಿ ಕನ್ನಡದ ರಿಯಾಲಿಟಿ ಶೋನ ಜೂರಿ ನರಹರಿ ದೀಕ್ಷಿತ್ ಅವರ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments