Tuesday, September 9, 2025
HomeUncategorizedಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಪವಿತ್ರಾಗೌಡ

ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಪವಿತ್ರಾಗೌಡ

ರೇಣುಕಸ್ವಾಮಿ ಕೊಲೆ ಪ್ರಕರಣ ಎ1 ಆರೋಪಿ ಪವಿತ್ರಾ ಗೌಡ ಬೆಂಗಳೂರಿನ ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿದ್ದು. ದೇವರ ಹರಕೆ ತೀರಿಸಿ ದೇವಿಗೆ ಮಡಿಲಕ್ಕಿ ಸಮರ್ಪಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೆ ವಿಜಯಲಕ್ಷ್ಮಿ ದರ್ಶನ್ ಅವರು ಬೆಂಗಳೂರಿನ ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿ ಹರಕೆಗಳನ್ನು ತೀರಿಸಿದ್ದರು. ಇದೀಗ ನಟಿ ಪವಿತ್ರಾಗೌಡ ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚೆಗಷ್ಟೆ ನಿಮಿಷಾಂಭ ದೇವಾಲಯಕ್ಕೆ ಪವಿತ್ರಾ ಗೌಡ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದ್ದರು. ಈಗ ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿ ತಾಯಿ ಬನಶಂಕರಿಗೆ ಮಡಿಲಕ್ಕಿ ತುಂಬಿದ್ದಾರೆ.

ಇದನ್ನೂ ಓದಿ :ಅತ್ಯಾಚಾರ ಆರೋಪಿಯ ಮೃತದೇಹದ ಅಂತ್ಯಸಂಸ್ಕಾರ ಮಾಡಿ; ಕರ್ನಾಟಕ ಹೈಕೋರ್ಟ್​

ಪವಿತ್ರಾ ಗೌಡ, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಆರು ತಿಂಗಳು ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜಾಮೀನಿನ ಮೇಲೆ ಹೊರ ಬಂದಾಗಿನಿಂದಲೂ ಹಲವು ದೇವಾಲಯಗಳಿಗೆ ಪವಿತ್ರಾ ಗೌಡ ಭೇಟಿ ನೀಡುತ್ತಲೇ ಇದ್ದಾರೆ. ಪ್ರಯಾಗ್​​ರಾಜ್​ನಲ್ಲಿ ನಡೆದ ಕುಂಭಮೇಳಕ್ಕೂ ನಟಿ ಪವಿತ್ರ ಭೇಟಿ ನೀಡಿದ್ದರು.

ಇದನ್ನೂ ಓದಿ :ಹಿಂದೂ ಹುಲಿ ಯತ್ನಾಳ್​ಗೆ ಜೀವ ಬೆದರಿಕೆ: ರೇಣುಕಚಾರ್ಯ ಖಡಕ್​ ಪ್ರತಿಕ್ರಿಯೆ

ಇತ್ತ ದರ್ಶನ್​ ಪತ್ನಿ ವಿಜಯಲಕ್ಷ್ಮೀ ಕೂಡ ಸಾಲು ಸಾಲಾಗಿ ದೇವಾಲಯಕ್ಕೆ ಭೇಟಿ ನೀಡುತ್ತಿದ್ದು. ದರ್ಶನ್​ ಕೊಲೆ ಪ್ರಕರಣದಲ್ಲಿ ಅಂದರ್​ ಆದ ನಂತರ ಅಸ್ಸಾಂನ ಕಾಮಾಕ್ಯ ದೇವಾಲಯದಿಂದ ಗಾಂಧಿನಗರದ ಅಣ್ಣಮ್ಮ ತಾಯಿಯ ದೇವಾಲಯದವರೆಗೂ ಪ್ರತಿ ವಾರವೂ ಒಂದಿಲ್ಲ ಒಂದು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.  ಇತ್ತೀಚೆಗಷ್ಟೆ ನಟ ದರ್ಶನ್, ಧನ್ವೀರ್ ಮತ್ತು ದರ್ಶನ್ ಪುತ್ರ ನಿವೀಶ್ ಅವರು ಕೇರಳದ ಬಹು ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments