Tuesday, September 9, 2025
HomeUncategorizedಹಿಂದೂ ಹುಲಿ ಯತ್ನಾಳ್​ಗೆ ಜೀವ ಬೆದರಿಕೆ: ರೇಣುಕಚಾರ್ಯ ಖಡಕ್​ ಪ್ರತಿಕ್ರಿಯೆ

ಹಿಂದೂ ಹುಲಿ ಯತ್ನಾಳ್​ಗೆ ಜೀವ ಬೆದರಿಕೆ: ರೇಣುಕಚಾರ್ಯ ಖಡಕ್​ ಪ್ರತಿಕ್ರಿಯೆ

ದಾವಣಗೆರೆ : ಶಾಸಕ ಬಸನಗೌಡಪಾಟೀಲ್​ ಯತ್ನಾಳ್​ಗೆ ಜೀವ ಬೆದರಿಕೆ ಇರೋ ವಿಚಾರದ ಕುರಿತು ಮಾಜಿ ಸಚಿವ ರೇಣುಕಚಾರ್ಯ ಹೇಳಿಕೆ ನೀಡಿದ್ದು. “ಯತ್ನಾಳ್​ಗೆ ಜೀವ ಬೆದರಿಕೆ ಇದ್ದರೆ ಅವರು ದೂರು ನೀಡಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ಒಂದು ವೇಳೆ ನಿಜವಾಗಲು ಅವರಿಗೆ ಜೀವ ಬೆದರಿಕೆ ಇದ್ದರೆ ನಾನೊಬ್ಬ ಹಿಂದೂವಾಗಿ ಇದನ್ನು ಖಂಡಿಸುತ್ತೇನೆ. ಅವರಗೆ ಏನಾದ್ರು ಜೀವ ಬೆದರಿಕೆ ಇದ್ದರೆ ಅವರು ಎಫ್​​ಐಆರ್​ ದಾಖಲಿಸಲಿ ಎಂದು ಹೇಳಿದರು.

ಸಿಎಂ ಪವರ್​ ಶೇರಿಂಗ್​ ವಿಚಾರವನ್ನು ಮರೆಮಾಚಲು ಜಾತಿಗಣತಿ ಅಸ್ತ್ರ

ರಾಜ್ಯದಲ್ಲಿ ಜಾತಿಗಣತಿ ವಿಚಾರ ಮುನ್ನೆಲೆಗೆ ಬಂದಿದ್ದು. ಈ ಕುರಿತು ಮಾತನಾಡಿದ ರೇಣುಕಾಚಾರ್ಯ ‘ ಸಿಎಂ ಪವರ್​ ಶೇರಿಂಗ್​ ವಿಚಾರವನ್ನು ಮರೆಮಾಚಲು ಜಾತಿ ಗಣತಿ ಅಸ್ತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ, ಪವರ್ ಶೇರಿಂಗ್ ಆಗಿರೋದು ಅಷ್ಟೆ ಸತ್ಯ. ಅದನ್ನು ಮರೆಮಾಚಲು ಈ ರೀತಿ ಜಾತಿ ಗಣತಿ ವಿಚಾರವನ್ನು ಮುನ್ನಲೆಗೆ ತಂದಿದ್ದಾರೆ.

ಇದನ್ನೂ ಓದಿ :ಮೂತ್ರ ವಿಸರ್ಜನೆಗೆ ಎಂದು ಹೋಗಿದ್ದ ಯುವಕನನ್ನು ಅಟ್ಟಾಡಿಸಿದ ಒಂಟಿಸಲಗ

ಜಾತಿ ಜನಗಣತಿ ವರದಿ ಅವೈಜ್ಞಾನಿಕವಾಗಿದೆ. ಯಾರ ಮನೆಗೆ ಬಂದು ಜಾತಿ ಜನಗಣತಿ ಮಾಡಿದ್ದಾರೆ..? ಜಾತಿ ಜನಗಣತಿಯನ್ನ ಪಾರದರ್ಶಕವಾಗಿ ಮಾಡಿಲ್ಲ. ಮುಸ್ಲಿಂರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗಿದೆ. ಅವರಿಗೆ 4% ಇರೋ ಮೀಸಲಾತಿಯನ್ನ 8% ಮಾಡ್ತಾ ಇದ್ದಾರೆ. ಬಹು ಸಂಖ್ಯಾತರಾದ ಅವರಿಗೆ ಮೀಸಲಾತಿ ಯಾಕೆ ಬೇಕು..? ಎಂದು ರೇಣುಕಾಚಾರ್ಯ ಪ್ರಶ್ನೆಸಿದರು.

ಇದನ್ನೂ ಓದಿ :ಕುಮಾರಸ್ವಾಮಿ ಸಿಎಂ ಆಗಲು ನಮ್ಮ ಮುಂದೆ ಕೈಕಟ್ಟಿ ನಿಂತಿದ್ದರು; ಚೆಲುವರಾಯಸ್ವಾಮಿ

ಕಾಂಗ್ರೆಸ್​ ಸರ್ಕಾರ ಲಿಂಗಾಯತರನ್ನು ಒಡೆಯುವ ಕೆಲಸ ಮಾಡುತ್ತಿದೆ. ಅವರದೆ ಸರ್ಕಾರದ ಶಾಮನೂರು, ಎಂ.ಬಿ ಪಾಟೀಲ್ ಡಿ.ಕೆ ಶಿವಕುಮಾರ್ ಇದಕ್ಕೆ ವಿರೋಧ ಮಾಡ್ತಾ ಇದಾರೆ. ಯಾವಾಗ ಜಾತಿ ಜನಗಣತಿ ಬಿಡುಗಡೆ ಮಾಡ್ತಾರೆ ಆವಾಗ್ಲೆ ಸರ್ಕಾರ ಬಿದ್ದೊಗುತ್ತೆ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಪವರ್ ಶೇರಿಂಗ್ ಆಗಿರೋದು ಅಷ್ಟೆ ಸತ್ಯ. ನವೆಂಬರ್ ಡಿಸೆಂಬರ್ ನಲ್ಲಿ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡ್ತಾರೆ.
ಕಾಂಗ್ರೆಸ್ ಒಡೆದ ಮನೆಯಾಗಿದೆ. ಜಾತಿ ಜನಗಣತಿ ಮಾಡಿದ್ರೆ ಕಾಂಗ್ರೆಸ್ ನೂರಕ್ಕೆ ನೂರರಷ್ಟು ಸರ್ಕಾರ ಪತನ ಆಗುತ್ತೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments