Thursday, August 28, 2025
HomeUncategorizedಕೈ ಕೊಟ್ಟ ಪ್ರೇಯಸಿ , ವಿಷ ಸೇವಿಸಿ ಸಾ*ವಿಗೆ ಶರಣಾದ ಯುವಕ !

ಕೈ ಕೊಟ್ಟ ಪ್ರೇಯಸಿ , ವಿಷ ಸೇವಿಸಿ ಸಾ*ವಿಗೆ ಶರಣಾದ ಯುವಕ !

ಹಾಸನ : ಪ್ರೀತಿಸಿದ ಯುವತಿಯಿಂದ ಮೋಸ ಹೋದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕವನ ಎಂದು ಗುರುತಿಸಲಾಗಿದೆ. ಸಾಯುವ ಮುನ್ನ ವಿಡಿಯೋ ಮಾಡಿರುವ ಯುವಕ ತಾನೂ ಪ್ರೀತಿಸುತ್ತಿದ್ದ ಯುವತಿಯಿಂದ ಆಗಿರುವ ತೊಂದರೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಜೊತೆಗೆ ಗಂಡು ಮಕ್ಕಳಿಗೆ ಸಮಾಜದಲ್ಲಿ ನ್ಯಾಯಾ ಸಿಗುವುದಿಲ್ಲ ಎಂದು ಯುವತಿ ಬಗ್ಗೆ ಪೊಲೀಸರು ತೋರಿಸಿರುವ ಸಾಫ್ಟ್​ ಕಾರ್ನರ್​ ಬಗ್ಗೆಯೂ ಪ್ರಶ್ನೆ ಮಾಡಿದ್ದಾನೆ.

ಸಕಲೇಶಪುರ ತಾಲೂಕಿನ ಬಾಳೆಗದ್ದೆ ಗ್ರಾಮದ ಕವನ್ (30) ಆತ್ಮಹತ್ಯೆಗೆ ಶರಣಾದ ಯುವಕ. ಸಾಯುವ ಮುನ್ನ ಕವನ್ ಸಾವಿಗೆ ಕಾರಣ ತಿಳಿಸಿ ವೀಡಿಯೋ ಮಾಡಿಟ್ಟು ಒಂದು ವಾರದ ಹಿಂದೆ ವಿಷ ಸೇವಿಸಿದ್ದ. ನನ್ನ ಸಾವಿಗೆ ತಾನು ಪ್ರೀತಿಸಿದ ಹುಡುಗಿ ಹಾಗೂ ವಿನಯ್ ಎಂಬಾತ ಕಾರಣ ಎಂದು ವಿಡಿಯೋದಲ್ಲಿ ಎಳೆಎಳೆಯಾಗಿ ಯುವಕ ಕಾರಣ ಬಿಚ್ಚಿಟ್ಟಿದ್ದಾನೆ.

ವಿಡಿಯೋದಲ್ಲಿ ಏನಿದೆ ?

ವಿಡಿಯೋದ ಆರಂಭದಲ್ಲಿ ಮಾತು ಆರಂಭಿಸಿದ ಯುವಕ, ನನ್ನ ಸಾವಿಗೆ ತಾನೂ ಪ್ರಿತಿಸಿದ ಯುವತಿ ಅಂಜಲಿಯೆ ಕಾರಣ ಎಂದು ಹೇಳಿದ್ದಾನೆ. ಆಕೆ 2021ರಲ್ಲಿ ನನ್ನ ಮನೆ ಹಿಂದೆ ವಾಸವಿದ್ದಳು. ನನ್ನ ಜೀವನದಲ್ಲಿ ಅವಳು ಬಂದಳು. ಇಬ್ಬರೂ ಪ್ರೀತಿಸುತ್ತಿದ್ದೆವು. ನಮ್ಮ ನಡುವೆ ಎ ಟು ಜೆಡ್ ಎಲ್ಲಾ ಆಗಿದೆ. ನೀನು ನನಗೆ ಬೇಕೇಬೇಕು ಎಂದು ಹಠ ಹಿಡಿದಿದ್ದಳು. ಅನಂತರ ಅವಳ ನಡವಳಿಕೆ ಕಂಡು ದೂರವಾದೆ.

ಇದನ್ನೂ ಓದಿ : ಆನ್ಲೈನ್ ಗೇಮಿಂಗ್ ಹುಚ್ಚಿಗೆ ಒಂದೇ ದಿನ ಇಬ್ಬರು ಯುವಕರು ಆತ್ಮಹ*ತ್ಯೆ !

2023-2024ರಲ್ಲಿ ನನ್ನ ಮೇಲೆ ಪೋಲಿಸ್ ಠಾಣೆಗೆ ಆಕೆ ದೂರು ನೀಡಿದ್ದಳು. ಹುಡುಗಿಯರು ಏನೇ ಮಾಡಿದರೂ ಪೊಲೀಸರಿಗೆ ಲೆಕ್ಕಕ್ಕೆ ಬರಲ್ಲ. ಗಂಡುಮಕ್ಕಳು ಮಾತ್ರ ಕೆಟ್ಟವರು. ಆ ಹೆಣ್ಣು ಏನು ಎಂದು ಇಡೀ ಸಕಲೇಶಪುರ ಪೊಲೀಸರಿಗೆ ಗೊತ್ತು. ಆಕೆ ಏನು ಅಂತ ಗೊತ್ತಿದ್ದರೂ ಪೊಲೀಸರು ಅವಳ ಬೆಂಬಲಕ್ಕೆ ನಿಂತರು. ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ. ಇವಳ ವಿಷಯದಿಂದ ತಮ್ಮ, ಅಪ್ಪ, ಅಮ್ಮ ಎಲ್ಲಾ ನನ್ನ ಬಿಟ್ಟಿದ್ದಾರೆ. ಬಳಿಕ ಕೇಸ್ ವಾಪಸ್ ತೆಗೆದುಕೊಂಡಳು. ನನ್ನ ಪಾಡಿಗೆ ನಾನು ಇದ್ದೆ, ಮತ್ತೆ ಬಂದು ನನ್ನ ಲೈಫ್ ಹಾಳು ಮಾಡಿದಳು. ಇವತ್ತು ಒಂದು ದಿನ ನನ್ನ ಜೊತೆ ಇರು ಎಂದು ಮೈಸೂರು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋದಳು. ನನ್ನ ವೀಕ್ನೆಸ್ ಅವಳಿಗೆ ಗೊತ್ತಿತ್ತು. ನಾನು ಕುಡಿತೀನಿ, ಕುಡಿದ ಮೇಲೆ ಹೇಳಲ್ಲ ಎಂದು ಅವಳಿಗೆ ಗೊತ್ತು. ಮೊಬೈಲ್‌ಗೆ ಫಿಂಗರ್ ಪ್ರಿಂಟ್ ಇಟ್ಟಿದ್ದೆ. ಅದೇ ನಾನು ಮಾಡಿದ ತಪ್ಪು. ಪ್ಯಾಟರ್ನ್ ಪಾಸ್‌ವರ್ಡ್ ಇಟ್ಟಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ನನ್ನ ಲೈಫ್ ಹಾಳು ಮಾಡಿ 307 ಕೇಸ್ ಹಾಕಿದಳು.

ನನ್ನ ಮೊಬೈಲ್‌ನಲ್ಲಿ ಪರ್ಸನಲ್ ಫೋಟೋ ತೆಗೆದುಕೊಂಡು ಇನ್ನೊಬ್ಬರ ಹೆಂಡತಿಗೆ ಕಳುಹಿಸಿದ್ದಾಳೆ. ಅದು ಎಲ್ಲೆಲ್ಲೋ ಹೋಗಿ ಏನೇನೋ ಆಯಿತು, ಗಲಾಟೆ ಆಯಿತು. ನಾನು ಸಾಯಲು ಇಷ್ಟೇ ಕಾರಣ. ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಯಾವುದನ್ನೂ ಸರಿಯಾಗಿ ತನಿಖೆ ಮಾಡಲ್ಲ. ಅವಳು ಎಂಥವಳು ಅಂತ ಸ್ಟೇಷನ್‌ಗೆ ಗೊತ್ತಿರುತ್ತದೆ. ಅವಳು ಕಂಪ್ಲೆಂಟ್ ಕೊಡಲು ಬಂದಾಗ ತನಿಖೆ ಮಾಡಲ್ಲ. ಏಕೆಂದರೆ ಅವಳು ಹೆಣ್ಣು, ನಾನು ಗಂಡು.

ಇದನ್ನೂ ಓದಿ :ಆಟವಾಡುತ್ತಿದ್ದ ಮಗುವಿಗೆ ಹಾವು ಕಡಿತ : 2 ವರ್ಷದ ಮಗು ಸಾ*ವು !

ಡಿ.12 ರಂದು ವಿನಯ್ ನನ್ನ ಮೇಲೆ ಕಂಪ್ಲೆಂಟ್ ಕೊಟ್ಟ. ಆಕೆ ಕಳುಹಿಸಿರುವ ಫೋಟೋ ಇಟ್ಟುಕೊಂಡು ನಮ್ಮ ಮನೆಯವರನ್ನು ವಿನಯ್ ದೂರ ಮಾಡಿದ. ನನ್ನದು ತಪ್ಪಿದೆ, ನನ್ನ ಪರ್ಸನಲ್ ಫೋಟೋ ಯಾರಿಗೂ ಕಳಿಸಬೇಡಿ, ನಾನು ಬಂದು ಕ್ಷಮೆ ಕೇಳುತ್ತೇನೆ ಎಂದು ವಿನಯ್‌ಗೆ ಹೇಳಿದೆ. ಆದರೆ ಗಲಾಟೆ ಮಾಡಿ ದೊಡ್ಡ ವಿಷಯ ಮಾಡಿದ. ಆಕೆ ಕಳುಹಿಸಿರುವ ಫೋಟೋ ಟಿವಿಯಲ್ಲಿ ಬರಬಹುದು. ನನ್ನ ಮೊಬೈಲ್‌ನಿಂದ ವಾಟ್ಸಪ್ ಮೂಲಕ ನನ್ನ ಫೋಟೋ ಕಳುಹಿಸಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರದ್ದು ಆದರೆ ಮಾತ್ರ ನ್ಯೂಸ್. ಕಾಮನ್ ಜನರಿಗೆ ಬೆಲೆ ಇಲ್ವಾ, ಮೊದಲು ನ್ಯಾಯ ಕೊಡಿಸಿ.

ಆಕೆಯನ್ನು ಕರೆದುಕೊಂಡು ಬಂದು ಒಂದು ತಪ್ಪು ಮಾಡಿದೆ. ನನ್ನ ಸಂಸಾರ ರೋಡಿಗೆ ಬಂತು. ವಿನಯ್ ಅವನ ಹೆಂಡತಿ ಮೇಲೆ ಕಂಪ್ಲೆಂಟ್ ಕೊಟ್ಟ. ಕಂಪ್ಲೆಂಟ್ ಕೊಟ್ಟು ಅವರು ನೆಮ್ಮದಿಯಾಗಿದ್ದಾರೆ. ನಾನೇನು ತಪ್ಪು ಮಾಡಿದೆ, ವಿನಯ್ ಹೆಂಡತಿ ಏನು ತಪ್ಪು ಮಾಡಿದ್ಲು? ನಮ್ಮನ್ನು ರೋಡಿಗೆ ಏಕೆ ತಂದ್ರಿ? ಸ್ಟೇಷನ್‌ನಲ್ಲಿ ಸೆಟಲ್‌ಮೆಂಟ್ ಆಗಬೇಕಿತ್ತು. ಪೊಲೀಸರಿಗೆ ಕೇಸ್ ಬೇಕಿತ್ತು. ನಾನು ಏನು ತಪ್ಪು ಮಾಡಿದೆ ಅಂತ ಈ ಶಿಕ್ಷೆ? ನನ್ನ ಸಾವಿಗೆ ಕಾರಣ ನಾನು ಪ್ರೀತಿಸಿದ ಹುಡುಗಿ ಹಾಗೂ ವಿನಯ್. ವಿನಯ್ ಪತ್ನಿ ನನಗೆ ತೊಂದರೆ ಕೊಟ್ಟಿಲ್ಲ. ವಿನಯ್ ನನಗೆ ಏನೆಲ್ಲಾ ಬೆದರಿಕೆ ಹಾಕಿದ್ದ. ನನ್ನ ಸಾವಿಗೆ ನನ್ನ ಮನೆಯವರು, ಅಣ್ಣ, ತಮ್ಮ, ಅಕ್ಕ, ತಂಗಿ, ಸ್ನೇಹಿತರು ಯಾರೂ ಕಾರಣ ಅಲ್ಲ. ವಿನಯ್ ಹೆಂಡತಿಯೂ ಅಲ್ಲ. ನನ್ನ ಸಾವಿಗೆ ಕಾರಣ ವಿನಯ್ ಹಾಗೂ ಆಕೆ. ಅವಳು ಫೋಟೋ ಕಳುಹಿಸಿ ಇಷ್ಟೆಲ್ಲಾ ಮಾಡಿದ್ದಾಳೆ ಎಂದು ಕವನ್ ತನ್ನ ನೋವನ್ನು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.‌

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments