ಬೆಂಗಳೂರು : ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ ಮಾದ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಈ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದವರ ಮೇಲೆ ಚಾರ್ಜಶೀಟ್ ಫೈಲ್ ಮಾಡದ ವಿಚಾರವಾಗಿ ಮಾತನಾಡಿದ ಪರಮೇಶ್ವರ ‘ ಈ ಬಗ್ಗೆ ಜ್ಞಾಪಿಸಿದ್ದು ಒಳ್ಳೆಯದಾಯ್ತು, ನಾನು ಈ ಬಗ್ಗೆ ವಿಚಾರಿಸಿ ಮಾತನಾಡುತ್ತೇನೆ, ಈ ವಿಶಯ ನನ್ನ ಗಮನದಲ್ಲಿತ್ತು ಆದರೆ ಇದನ್ನು ನಾನು ಮರೆತುಬಿಟ್ಟಿದ್ದೆ ಎಂದು ಹೇಳಿದರು.
ಡಿನ್ನರ್ ಮೀಟಿಂಗ್ ಕ್ಯಾನ್ಸಲ್ ಬಗ್ಗೆ ಪರಮೇಶ್ವರ್ ಮಾತು !
ಇಂದು ಖಾಸಗಿ ಹೋಟೆಲ್ನಲ್ಲಿ ನಡೆಯಬೇಕಿದ್ದ ಡಿನ್ನರ್ ಮೀಟಿಂಗ್ ಕ್ಯಾನ್ಸಲ್ ವಿಚಾರವಾಗಿ ಮಾತನಾಡಿದ ಪರಮೇಶ್ವರ್ ‘ ಮುಂದೂಡಿಕೆ ಮಾಡಿರುವ ಹಿಂದೆ ಕಾಣದ ಕೈ ಇದೆ ಎಂದು ಅಲ್ಲ. ಈ ಹಿಂದೆ ನಾವು ಚಿತ್ರದುರ್ಗದಲ್ಲಿ ಸಮಾವೇಶ ನಡೆಸಿದ್ವಿ. ಅಧಿಕಾರಕ್ಕೆ ಬಂದ ಮೇಲೆ ಸಮಾವೇಶದಲ್ಲಿ ಚರ್ಚಿಸಿದ್ದ ಅನೇಕ ಸಮಸ್ಯೆಗಳನ್ನು ಬಗೆಹರಿಸಿದ್ವಿ. ಇದೇ ರೀತಿ ಒಗ್ಗಟ್ಟಾಗಿ ಹೋಗಬೇಕು ಎಂಬ ಕಾರಣಕ್ಕೆ ಈ ಸಭೇಯನ್ನು ಕರೆದಿದ್ವಿ. ಇದರ ಬಗ್ಗೆ ದೆಹಲಿಗೆ ಹೇಳಿರಲಿಲ್ಲ.

ಇದನ್ನೂ ಓದಿ : ರಾಕಿಂಗ್ ಸ್ಟಾರ್ ಸಿಂಪಲ್ ಬರ್ತಡೇಗೆ ಉಡುಗೊರೆ ಕೊಟ್ಟ ಟಾಕ್ಸಿಕ್ ಚಿತ್ರತಂಡ !
ಸುರ್ಜೇವಾಲಾ ಅವರ ನಮ್ಮ ಪ್ರಧಾನ ಕಾರ್ಯದರ್ಶಿಗಳು, ಇದರ ಬಗ್ಗೆ ಅವರಿಗೆ ಮಾಹಿತಿ ಹೋಗಿದೆ, ನಾನು ಇದರಲ್ಲಿ ಭಾಗಿಯಾಗಬೇಕು ಅಂತ ಹೇಳಿದ್ದರು, ಅವರಿಗೆ ಈಗ ಸಮಯ ಇರಲಿಲ್ಲ ಹಾಗಾಗಿ ಅವರ ಸಮಯ ಕೊಟ್ಟ ಬಳಿಕ ನಾವು ಮಾಡುತ್ತೇವೆ, ಈ ಸಭೆಯನ್ನು ರದ್ದು ಮಾಡಿಲ್ಲ ಮುಂಡೂಡಿಕೆ ಮಾಡಿದ್ದೇವೆ, ಅವರು ಸಮಯ ಕೊಟ್ಟಾಗ ನಾವು ಮಾಡ್ತೀವಿ.
ಡಿನ್ನರ್ ಅಂದ್ರೆ ಊಟ ನೀವು ಅದಕ್ಕೆ ಬೇರೆ ವ್ಯಾಕ್ಯಾನ ಕೊಡಬೇಡಿ. ಇದರ ಬಗ್ಗೆ ಯಾವುದೇ ಸೀಕ್ರೆಟ್ ಚರ್ಚೆ ಮಾಡಿಲ್ಲ. ಇದಕ್ಕೆ ರಾಜಕೀಯ ಲೇಪನ ಕೊಡಬೇಡಿ, ಡಿ,ಕೆ ಶಿವಕುಮಾರ್ ಹೇಳಿದ್ದರ ಬಗ್ಗೆ ನನಗೆ ಗೊತ್ತಿಲ್ಲ. ರಾಜಕಾರಣ ಮಾಡಬೇಕು ಅಂದ್ರೆ ಓಪನ್ ಆಗೇ ಮಾಡ್ತೀವಿ. ಇಲ್ಲಿ ಮುಚ್ವಿಟ್ಟು ಮಾಡೋದು ಏನಿದೆ. ಇವೆಲ್ಲವನ್ನು ಬಿಟ್ಟು ಅನೇಕ ಜ್ವಲಂತ ಸಮಸ್ಯೆ ಇದ್ದಾವೆ ಅವುಗಳ ಬಗ್ಗೆ ಚರ್ಚೆ ಮಾಡಬೇಕಲ್ವಾ ಎಂದು ಹೇಳಿದರು.



Pinco bahis kateqoriyaları genişdir. Futbol mərclərinə başlamaq üçün pinco giriş səhifəsinə daxil ol. Pinco mobil versiyası sürətli yüklənir.
Pinco betdə canlı mərclər aktivdir.