Monday, August 25, 2025
Google search engine
HomeUncategorizedರಾಜಧಾನಿಯ ಇಬ್ಬರು ಮಕ್ಕಳಲ್ಲಿ ಚೀನಿ ವೈರಸ್​ ಪತ್ತೆ : ಆತಂಕ ಬೇಡ ಎಂದ ದಿನೇಶ್​ ಗುಂಡುರಾವ್​...

ರಾಜಧಾನಿಯ ಇಬ್ಬರು ಮಕ್ಕಳಲ್ಲಿ ಚೀನಿ ವೈರಸ್​ ಪತ್ತೆ : ಆತಂಕ ಬೇಡ ಎಂದ ದಿನೇಶ್​ ಗುಂಡುರಾವ್​ !

ಬೆಂಗಳೂರು: ದೇಶದ ಮೊದಲ ಹೆಚ್.ಎಂ.ಪಿ ವೈರಸ್​ ಬೆಂಗಳೂರಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು. 8 ತಿಂಗಳ ಕಂದಮ್ಮನ ದೇಹದಲ್ಲಿ ಈ ವೈರಸ್​ ಪತ್ತೆಯಾಗಿದೆ. ಇದರ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್​ ಗುಂಡುರಾವ್​ ಈ ವೈರಸ್​​ ಬಗ್ಗೆ ಹೆಚ್ಚು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನ ಬ್ಯಾಪಿಸ್ಟ್​ ಆಸ್ಪತ್ರೆಯಲ್ಲಿ ಎರಡು ನವಜಾತ ಶಿಶುಗಳಲ್ಲಿ HMP ವೈರಸ್​ ಕಂಡು ಬಂದಿದ್ದು. ಮೂರು ತಿಂಗಳಿನ ಮಗು ಮತ್ತು 8 ತಿಂಗಳ ಮತ್ತೊಂದು ಮಗುವಿನಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ. ಈಗಾಗಲೇ 3 ವರ್ಷದ ಮಗು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದೆ.

ಬೆಂಗಳೂರಿನ ಮಗುವಿನಲ್ಲಿ HMP ವೈರಸ್​ ಪತ್ತೆಯಾದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ ಆಗಿದ್ದು. ಜಿಲ್ಲಾವಾರು ಮಾಹಿತಿಯನ್ನು ಪಡೆಯಲು ಮುಂದಾಗಿದೆ. ಸರ್ಕಾರಿ ಅಥವಾ ಖಾಸಗಿ ಆಸ್ಫತ್ರೆಗಳಲ್ಲಿ ವೈರಸ್ ಪತ್ತೆಯಾದ ಬಗ್ಗೆ ಎಲ್ಲಾ ಡಿಹೆಚ್‌ಓಗಳಿಂದ ಆರೋಗ್ಯ ಇಲಾಖೆ ಮಾಹಿತಿ ಕೇಳಿದೆ. ಪ್ರತಿಯೊಂದು ಡೇಟಾ ಕೂಡ ಪತ್ತೆ ಮಾಡಬೇಕು. ವೈರಸ್ ಪತ್ತೆಯಾದ್ರೆ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚುವಂತೆ ಸೂಚನೆ ನೀಡಿದೆ.

ಇದನ್ನೂ ಓದಿ :ಮಕ್ಕಳಿಗೆ ವಿಷ ನೀಡಿ, ನೇಣಿಗೆ ಶರಣಾದ ದಂಪತಿ : ನಗರದಲ್ಲೊಂದು ಹೃದಯವಿದ್ರಾವಕ ಘಟನೆ !

ಹೆಚ್ಚು ಆತಂಕ ಪಡಬೇಡಿ ಎಂದ ದಿನೇಶ್​ ಗುಂಡುರಾವ್​ !

HMP ವೈರಸ್​ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ‘ ಈ ವೈರೆಸ್ ಹೊಸದೇನಲ್ಲ.
ಈ ವೈರಸ್ ನಿಂದ ಉಸಿರಾಟದ ತೊಂದರೆ ಸಮಸ್ಯೆ ಸಾಧ್ಯತೆ ಇದೆ. ಈ ವೈರಸ್​ ಕಡಿಮೆ ಇಮ್ಯೂನಿಟಿ ಹೊಂದಿರುವ ಮಕ್ಕಳಿಗೆ ಬರುತ್ತೆ. ಇಲ್ಲಿ ಕಂಡುಬಂದಿರುವ ವೈರಸ್​ಗೂ, ಚೀನಾ ವೇರಿಯಂಟ್​ಗೂಐ ಸಂಬಂಧವಿಲ್ಲ. ಇದರ ಬಗ್ಗೆ ಜನರು ಆತಂಕಪಡುವ ಅವಶ್ಯಕತೆ ಇಲ್ಲ. ಎಂದು ಹೇಳಿದರು.

ಮಗುವಿನ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್​ ಗುಂಡುರಾವ್​ ‘ ಮಗುವಿಗೆ ಯಾವುದೇ ಸಮಸ್ಯೆ ಇಲ್ಲ. ಸ್ಯಾಂಪಲ್​ನ್ನು ಪುಣೆ ಲ್ಯಾಬ್​ಗೆ ಕಳುಹಿಸುತ್ತೇವೆ. ಇದರ ಬಗ್ಗೆ ಐಸಿಎಂಆರ್, ಕೇಂದ್ರದಿಂದ ಮಾಹಿತಿ ಪಡೆದು ಮುಂದೆ ಚರ್ಚೆ ಮಾಡ್ತೇವೆ. ಎಲ್ಲಾ ಕಡೆ ಟೆಸ್ಟ್​ ಮಾಡುತ್ತೇವೆ. ಇದರ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುತ್ತೇವೆ ಎಂದು ಹೇಳಿದರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments