Sunday, August 31, 2025
HomeUncategorizedಸೋಮಾವತಿ ಅಮಾವಾಸ್ಯೆ ವಿಶೇಷ ಫಲಗಳು-ಎಚ್ಚರಿಕೆ

ಸೋಮಾವತಿ ಅಮಾವಾಸ್ಯೆ ವಿಶೇಷ ಫಲಗಳು-ಎಚ್ಚರಿಕೆ

ಪ್ರೀತಿಯ ಶಿಷ್ಯಂದಿರೇ,

ಸೋಮವತಿ ಅಮಾವಾಸ್ಯಯಿಂದ 2025ರ ಆಗಸ್ಟ್​ 18ರ ತನಕ ಇಂಗ್ಲೀಷ್ ಎ ಅಂದರೆ ಕನ್ನಡ ಅ ಇಂದ ಪ್ರಾರಂಭವಾಗುವ ಎಲ್ಲಾ ರೀತಿಯ ಜನಸಾಮಾನ್ಯರು, ರಾಜಕೀಯ ವ್ಯಕ್ತಿಗಳು, ನಟ-ನಟಿಯರುಗಳು, ವ್ಯವಹಾರ ಕ್ಷೇತ್ರದಲ್ಲಿರುವವರು ಇನ್ನೂ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಇರುವವರು ಬಹಳ ಎಚ್ಚರಿಕೆಯಿಂದ ಇರಬೇಕು. ಇವರುಗಳ ವ್ಯವಹಾರದಲ್ಲಿ, ಆರೋಗ್ಯದ ವಿಚಾರದಲ್ಲಿ, ಕೌಟುಂಬಿಕ ಕ್ಷೇತ್ರದಲ್ಲಿ ಅನೇಕ ರೀತಿಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಹಾಗೂ ಇವರುಗಳು ಯಾವುದೇ ವಾಹನಗಳಲ್ಲಿ ಪ್ರಯಾಣ ಮಾಡುವಾಗ ಎಚ್ಚರದಿಂದ ಇರಬೇಕು, ನಕಾರತ್ಮಕ ಶಕ್ತಿಗಳಿಂದ ತೊಂದರೆಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ತಮ್ಮ ಕುಲದೇವತಾ ಪೂರ್ವಕವಾಗಿ ಭಗವಂತನನ್ನು ಭಕ್ತಿಯಿಂದ ಪಾರ್ಥಿಸಿ.

ಹೇ ಪರಮಾತ್ಮನೇ ನಮ್ಮಗಳ ಚಂಚಲವಾದ, ಬಹಿರ್ಮುಖವಾದ ಮನಸ್ಸನ್ನು ಸದಾ ಶಾಂತವಾಗಿರುವಂತೆ ಮಾಡು, ಸದಾ ತೃಪ್ತಿಯಾಗಿ ಇರುವಂತೆ ಮಾಡು, ಮಂಗಳಮಯವಾಗಿರುವಂತೆ ಮಾಡು, ಅಂತರ್ಮುಖಿಯಾಗಿ ಸದಾ ಆತ್ಮನಲ್ಲಿ ಸ್ಥಿರವಾಗಿರುವಂತೆ ಮಾಡು ಎಂದು ಭಗವಂತನಲ್ಲಿ ಭಕ್ತಿಯಿಂದ ಪ್ರತಿನಿತ್ಯ ಪಾರ್ಥಿಸಿ.

ಕರುನಾಡಿನ ಪ್ರಸಿದ್ಧ ನಟರಾದ ಶ್ರೀಯುತ ಶ್ರೀನಾಥ ರವರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು, ಹೃದಯ ಸಂಬಂಧ ಹಾಗೂ ಉದರ ಸಂಬಂಧವಾದ ಅನಾರೋಗ್ಯ ಬಾಧೆಗಳು ಹೆಚ್ಚು ಬಾಧಿಸುತ್ತವೆ. ಆದ್ದರಿಂದ ಧ್ಯಾನ ಮತ್ತು ಯೋಗ ಮಾಡುವುದರಿಂದ ಅನುಕೂಲಕವಾಗುವುದು.

ನೂತನ ವರ್ಷದಲ್ಲಿ (2025) ಶ್ರೀಯುತ ಎಂ.ಕೃಷ್ಣಪ್ಪ ಮತ್ತು ಅವರ ಮಗ ಶ್ರೀ ಪ್ರಿಯಾಕೃಷ್ಣರವರಿಗೆ ಉನ್ನತ ಸ್ಥಾನಮಾನ ದೊರಕಲಿದೆ.

ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments