Saturday, August 23, 2025
Google search engine
HomeUncategorizedಬಿಜೆಪಿಯವರು ಎಷ್ಟೇ ಚೀರಾಡಿದರು ನಾನು ರಾಜೀನಾಮೆ ಕೊಡಲ್ಲ : ಪ್ರಿಯಾಂಕ್​ ಖರ್ಗೆ

ಬಿಜೆಪಿಯವರು ಎಷ್ಟೇ ಚೀರಾಡಿದರು ನಾನು ರಾಜೀನಾಮೆ ಕೊಡಲ್ಲ : ಪ್ರಿಯಾಂಕ್​ ಖರ್ಗೆ

ಬೆಂಗಳೂರು : ಗುತ್ತಿಗೆದಾರ ಸಚಿನ್​ ಆತ್ಮಹತ್ಯೆ ಕುರಿತು ರಾಜ್ಯದಲ್ಲಿ ರಾಜಕೀಯ ಕೆಸರೆರಚಾಟ ಜೋರಾಗಿದ್ದು. ಒಂದು ಕಡೆ ಬಿಜೆಪಿ ಸತ್ಯಶೋಧನ ಸಮಿತಿ ರಚಿಸಿಕೊಂಡು ಪ್ರಿಯಾಂಕ್​ ಖರ್ಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿವೆ.

ಇದರ ಬೆನ್ನಲ್ಲೆ ಮಾಧ್ಯಮದೊಂದಿಗೆ ಮಾತನಾಡಿದ ಪ್ರಿಯಾಂಕ್​ ಖರ್ಗೆ ‘ ನನ್ನ ರಾಜೀನಾಮೆಯ ಪ್ರಶ್ನೇಯೆ ಇಲ್ಲ, ಅವರು ಎಷ್ಟಾದರು ಚೀರಡಲಿ ಆದರೆ ನಾನು ರಾಜೀನಾಮೆ ಕೊಡಲ್ಲ. ಮೊದಲು ಬಿಜೆಪಿಯವರು ನಾಯಕತ್ವವನ್ನು ಭದ್ರಪಡಿಸಿಕೊಳ್ಳಲಿ. ಇವರೇನು ಸುಪ್ರಿಂಕೋರ್ಟ್​ ನನ್ನ ರಾಜಿನಾಮೇ ಕೇಳೋದಕ್ಕೆ. ಎಫ್​ಎಸ್​ಎಲ್​ ರಿಪೋರ್ಟ್ ಬರಲಿ, ಬಿಜೆಪಿಯವರಿಗೆ ಕಾಮನ ಸೆನ್ಸ್​ ಇಲ್ಲ.

ಇದನ್ನೂ ಓದಿ : KSDL ಅಧಿಕಾರಿ ಆತ್ಮಹತ್ಯೆ : ಡೆತ್​ನೋಟ್​ ಕೈಲಿಟ್ಟುಕೊಂಡು ನೇಣಿಗೆ ಕೊರಳೊಡ್ಡಿದ ಅಮೃತ್​ !

ನಾನು ವರದಿ ಇಟ್ಟಿಕೊಂಡು ಮಾತನಾಡುತ್ತಿದ್ದೇನೆ, ನೀವು ಯಾವ ವರದಿ ಇಟ್ಟುಕೊಂಡು ಮಾತನಾಡುತ್ತಾ ಇದ್ದೀರ ಎಂದು ನನಗೆ ಗೊತ್ತಿಲ್ಲ. ಆಂದೋಲನ ಸಮಿತಿ, ಸತ್ಯ ಶೋಧನ ಸಮಿತಿ ಮಾಡಿಕೊಂಡಿದ್ದಾರೆ. ಅವರಲ್ಲೆ ಎರಡು ಬಣಗಳಿವೆ. ಇವರು ಸೇರಿಕೊಂಡು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಮೊದಲು ಇವರಲ್ಲಿರುವ ಎರಡು ಬಣಗಳನ್ನು ಸರಿ ಮಾಡಿಕೊಳ್ಳಲಿ ಎಂದು ಹೇಳಿದರು.

ಈಶ್ವರ್​ ಖಂಡ್ರೆ ಭೇಟಿ ವಿಚಾರಕ್ಕೆ ಪ್ರಿಯಾಂಕ್​ ಮಾತು !

ನಿನ್ನೆ ಈಶ್ವರ್ ಖಂಡ್ರೆ ಮೃತ ಸಚಿನ್​ ಮನೆಗೆ ಭೇಟಿ ನೀಡಿದ ವಿಚಾರವಾಗಿ ಮಾತನಾಡಿದ  ಖಂಡ್ರೆ ‘ ನಿನ್ನೆ ಅವರ ಮನೆಗೆ ಖಂಡ್ರೆ ಹೋಗಿದ್ದಾರೆ. ನಾನು ಕೂಡ ನೋಡುತ್ತೇನೆ. ಅವರ ಕುಟುಂಬದವರು ನಮ್ಮ ಬಗ್ಗೆ ಎಲ್ಲೂ ಮಾತನಾಡಿಲ್ಲ. ಅವರು ಕೂಡ ಸ್ವಾಭಿಮಾನದಿಂದ ಮಾತನಾಡಿದ್ದಾರೆ. ಅವರ ಕುಟುಂಬಸ್ಥರು ನ್ಯಾಯ ಕೇಳುತ್ತಿದ್ದಾರೆ. ಅವರಿಗೆ ನ್ಯಾಯ ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಅವರಿಗೆ ನೀಡಿರುವ ಪರಿಹಾರವನ್ನು ಹೆಚ್ಚಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಅವರ ಕುಟುಂಬಸ್ಥರ ಮನಸ್ಥಿರತಿ ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ಇದರಲ್ಲಿ ನಾವು ರಾಜಕೀಯ ಬೆಳಸಲ್ಲ. ಕುಟುಂಬದ ಜೊತೆ ಸರ್ಕಾರ ನಿಲ್ಲುತ್ತದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments