Friday, August 29, 2025
HomeUncategorizedಚಳಿಗೆ ಪ್ರಜ್ಞೆ ತಪ್ಪಿದ ವರ : ನನಗೆ ಈ ಹುಡುಗ ಬೇಡವೆಂದ ವಧು !

ಚಳಿಗೆ ಪ್ರಜ್ಞೆ ತಪ್ಪಿದ ವರ : ನನಗೆ ಈ ಹುಡುಗ ಬೇಡವೆಂದ ವಧು !

ಜಾರ್ಖಂಡ್‌ :  ದಿಯೋಗರ್‌ನಲ್ಲಿ ಭಾನುವಾರ ರಾತ್ರಿ ನಡೆಯಬೇಕಿದ್ದ ವಿವಾಹ ಸಮಾರಂಭವೊಂದು ಬೆಳಗಾಗುವುದರೊಳಗೆ ರಾತ್ರಿ ಮುರಿದು ಬಿದ್ದ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ಡಿಸೆಂಬರ್ 15 ರಂದು, ದಿಯೋಗರ್ ನ ಘೋರ್ಮಾರಾ ಪ್ರದೇಶದ ಅರ್ನವ್ ಎಂಬ ವರನೊಂದಿಗೆ ಬಿಹಾರದ ಭಾಗಲ್‌ಪುರದ ಅಂಕಿತಾ ವಿವಾಹ ನಿಶ್ಚಯವಾಗಿತ್ತು, ಅದರಂತೆ ದಿಯೋಗರ್ ನ ಘೋರ್ಮಾರಾ ರೆಸಾರ್ಟ್ ಒಂದರಲ್ಲಿ ಮದುವೆಗೆ ಸಿದ್ಧತೆ ಮಾಡಿಕೊಳಲಾಗಿತ್ತು.

ಭಾನುವಾರ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಮದುವೆಯ ಪೂರ್ವ ಶಾಸ್ತ್ರಗಳು ರೆಸಾರ್ಟ್ ಒಳಭಾಗದಲ್ಲಿ ನಡೆದರೆ ಮದುವೆ ಶಾಸ್ತ್ರಗಳು ರೆಸಾರ್ಟ್ ಆವರಣದಲ್ಲಿರುವ ತೆರೆದ ಗಾರ್ಡನ್ ಏರಿಯಾದಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗಿತ್ತು, ಒಂದೆಡೆ ಕೊರೆಯುವ ಚಳಿ ಇನ್ನೊಂದೆಡೆ ತೆರೆದ ಮದುವೆ ಮಂಟಪದಲ್ಲಿ ವಧು ವರನನ್ನು ಕೂರಿಸಿ ಪುರೋಹಿತರು ಮದುವೆ ಶಾಸ್ತ್ರ ನಡೆಸುತ್ತಿರಬೇಕಾದರೆ ವರ ಇದ್ದಕಿದ್ದಂತೆ ಚಳಿ ತಾಳಲಾರದೆ ನಡುಗಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾನೆ, ಕೂಡಲೇ ವರನ ಕಡೆಯವರು ಅರ್ನವ್ ನನ್ನು ಕೊಠಡಿಗೆ ಕರೆದುಕೊಂಡು ಹೋಗಿ ಉಪಚರಿಸಿ ಕೈ ಕಾಲು ತಿಕ್ಕಿ ಮೈ ಬೆಚ್ಚಗೆ ಮಾಡಿದ್ದಾರೆ ಬಳಿಕ ವೈದ್ಯರನ್ನು ಕರೆಸಿ ಮದ್ದು ನೀಡಿ ಹುಷಾರಾಗುವಂತೆ ಮಾಡಿದ್ದಾರೆ.

ಚಳಿಯಿಂದ ಸುಧಾರಿಸಿಕೊಂಡು ಮದುವೆ ಮಂಟಪಕ್ಕೆ ವರ ಬಂದು ಕುಳಿತುಕೊಳ್ಳುವಷ್ಟರಲ್ಲಿ ವಧು ನನಗೆ ಈ ಮದುವೆ ಬೇಡ ವರ ಯಾವುದೋ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾನೆ ಇದನ್ನು ಮುಚ್ಚುಮರೆ ಮಾಡಿ ವರನ ಕುಟುಂಬದವರು ಮದುವೆ ಮಾಡಿಸುತ್ತಿದ್ದಾರೆ ಎಂದು ಕ್ಯಾತೆ ತೆಗೆದಿದ್ದಾಳೆ ಅಲ್ಲದೆ ಮದುವೆ ವಧುವಿನ ಊರಿನಲ್ಲಿ ನಡೆಯಬೇಕಿತ್ತು ಆದರೆ ವರನ ಕಡೆಯವರು ನಮ್ಮ ಊರಿನಲ್ಲೇ ಆಗಬೇಕು ಎಂದು ಒತ್ತಾಯಿಸಿ ಮದುವೆಗೆ ಸಿದ್ಧತೆ ನಡೆಸಿದ್ದಾರೆ ಹಾಗಾಗಿ ಈ ಮದುವೆಯಲ್ಲಿ ಏನೋ ದುರುದ್ದೇಶ ಇರಬೇಕು ಎಂದು ವಧು ಆರೋಪಿಸಿದ್ದಾಳೆ.

ಇದಕ್ಕೆ ವಧುವಿನ ಪೋಷಕರೂ ಹೌದು ಎಂದು ಸಮ್ಮತಿ ಸೂಚಿಸಿದ್ದಾರೆ ಬಳಿಕ ಎರಡೂ ಕುಟುಂಬದ ಸದಸ್ಯರ ನಡುವೆ ಮಾತುಕತೆ ನಡೆಯಿತು ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಬದಲಿಗೆ ಮಾತುಕತೆ ಜಗಳಕ್ಕೆ ಕಾರಣವಾಯಿತು ಅಷ್ಟೋತ್ತಿಗಾಗಲೇ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಎರಡೂ ಕುಟುಂಬಗಳ ಸದಸ್ಯರ ಬಳಿ ಮಾತುಕತೆ ನಡೆಸಿ ಒಂದು ಹಂತಕ್ಕೆ ಬರುವಷ್ಟರಲ್ಲಿ ಸೋಮವಾರ ಬೆಳಿಗ್ಗೆ ಎಂಟು ಗಂಟೆಯಾಗಿತ್ತು. ಅಂತಿಮವಾಗಿ ಎರಡೂ ಕಡೆಯವರು ಮದುವೆ ಬೇಡವೆಂಬ ನಿರ್ಧಾರಕ್ಕೆ ಬಂದರು, ಇದಾದ ಬಳಿಕ ಅರ್ನವ್ ಅವರ ಕುಟುಂಬವು ಘೋರ್ಮಾರಾದಲ್ಲಿರುವ ತಮ್ಮ ಮನೆಗೆ ಹಿಂದಿರುಗಿದರೆ, ಅಂಕಿತಾ ಅವರ ಕುಟುಂಬ ಮತ್ತು ಸಂಬಂಧಿಕರು ಭಗಲ್ಪುರಕ್ಕೆ ಹಿಂತಿರುಗಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments